Chandrashekhar Guruji Final Rites: ಮಣ್ಣಲ್ಲಿ ಮಣ್ಣಾದ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ, ಅಣ್ಣನ ಮಗನಿಂದ ಅಂತಿಮ ಪೂಜೆ, ಮರುಗಿದ ಶ್ವಾನ ಪ್ರಿನ್ಸ್​

ಹುಬ್ಬಳ್ಳಿಯ ಕಿಮ್ಸ್ನಲ್ಲಿ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ಮರಣೋತ್ತರ ಪರೀಕ್ಷೆ ಮುಗಿಯುತ್ತಿದ್ದಂತೆ, ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಯ್ತು. ಹುಬ್ಬಳ್ಳಿಯಿಂದ ಸುಳ್ಳಾ ಗ್ರಾಮದವರೆಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು.

Chandrashekhar Guruji Final Rites: ಮಣ್ಣಲ್ಲಿ ಮಣ್ಣಾದ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ, ಅಣ್ಣನ ಮಗನಿಂದ ಅಂತಿಮ ಪೂಜೆ, ಮರುಗಿದ ಶ್ವಾನ ಪ್ರಿನ್ಸ್​
ಮಣ್ಣಲ್ಲಿ ಮಣ್ಣಾದ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ
Follow us
TV9 Web
| Updated By: ಆಯೇಷಾ ಬಾನು

Updated on:Jul 06, 2022 | 4:49 PM

ಹುಬ್ಬಳ್ಳಿ: ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ(Chandrashekhar Guruji) ಮಣ್ಣಲ್ಲಿ ಮಣ್ಣಾಗಿದ್ದಾರೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಸುಳ್ಳಾ ಗ್ರಾಮದ ಬಳಿಯ ಜಮೀನಿನಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿದೆ. ಅಣ್ಣನ ಮಗ ಸಂತೋಷ್ ಅಂಗಡಿ ಅಂತಿಮ ವಿಧಿವಿಧಾನ ನೆರವೇರಿಸಿದ್ರು. ಗುರೂಜಿ ಮೃತದೇಹಕ್ಕೆ ಪತ್ನಿ ಅಂಕಿತಾ ಅಂತಿಮ ಪೂಜೆ ಸಲ್ಲಿಸಿದ್ರು. ಪಂಚಾಕ್ಷರಿ ಮಹಾ ಮಂತ್ರದೊಂದಿಗೆ ಅಂತಿಮ ವಿಧಿವಿಧಾನ ನೆರವೇರಿದೆ. ಅರ್ಚಕ ಕೋಟ್ರಯ್ಯಶ್ರೀಗಳ ನೇತೃತ್ವದಲ್ಲಿ ಪುತ್ರಿ ಸ್ವಾತಿ, ಅಣ್ಣನ ಮಗ ಸಂತೋಷ್ನಿಂದ ವಿಧಿವಿಧಾನ ನೆರವೇರಿತು. 10 ಸ್ವಾಮೀಜಿಗಳು ಅಂತಿಮ ವಿಧಿವಿಧಾನದಲ್ಲಿ ಭಾಗಿಯಾಗಿದ್ರು.

ಹುಬ್ಬಳ್ಳಿಯ ಕಿಮ್ಸ್ನಲ್ಲಿ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ಮರಣೋತ್ತರ ಪರೀಕ್ಷೆ ಮುಗಿಯುತ್ತಿದ್ದಂತೆ, ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಯ್ತು. ಹುಬ್ಬಳ್ಳಿಯಿಂದ ಸುಳ್ಳಾ ಗ್ರಾಮದವರೆಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಹುಬ್ಬಳ್ಳಿಯಿಂದ ಸುಳ್ಳಾದತ್ತ ಪಾರ್ಥೀವರ ಶರೀರ ಶಿಫ್ಟ್ ಮಾಡ್ತಿದಂತೆ, ಹಾದಿಯುದ್ದಕ್ಕೂ ಜನರು ಕಿಕ್ಕಿರಿದು ನಿಂತಿದ್ರು. ಗುರೂಜಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ರು. ಚಂದ್ರಶೇಖರ್ ಗುರೂಜಿ ನೆನೆದು ಸಂಬಂಧಿಕರು ಕೂಡ ಬಿಕ್ಕಿ ಬಿಕ್ಕಿ ಅತ್ರು. ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಬಂದ ಪುತ್ರಿ ಸ್ವಾತಿ & ಪತ್ನಿ ಅಂಕಿತಾ ಕಣ್ಣೀರಿಟ್ಟರು. ಇದೇ ವೇಳೆ ಗುರೂಜಿ ಸಹೋದರಿ ಶಾಂತ ಅಸ್ವಸ್ಥರಾದ್ರು. ಇದನ್ನೂ ಓದಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅಂತ್ಯಸಂಸ್ಕಾರ; ನೇರ ದೃಶ್ಯಾವಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಂತಿಮ ದರ್ಶನ ಪಡೆದ ಚಂದ್ರಶೇಖರ ಗುರೂಜಿ ಸಾಕಿದ್ದ ಶ್ವಾನ ಪ್ರಿನ್ಸ್​ ಅಂತಿಮ ದರ್ಶನ ಪಡೆದಿದೆ. ಮೃತದೇಹದ ಪೆಟ್ಟಿಗೆ ಮೇಲೆ ಕುಳಿತು ಮರುಗಿದೆ. ಅಂತ್ಯಕ್ರಿಯೆಗೆ ಗುರೂಜಿ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಮುಂಬೈ ಸಿಬ್ಬಂದಿ ಕೂಡ ಆಗಮಿಸಿದ್ರು. ಗುರೂಜಿಯನ್ನ ನೆನೆದು ಕಣ್ಣೀರು ಹಾಕಿದ್ರು. ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆಗೆ ಬಾಗಲಕೋಟೆ ಸೇರಿ ವಿವಿಧ ಕಡೆಯಿಂದ ಸಂಬಂಧಿಕರು, ಅನುಯಾಯಿಗಳು ಆಗಮಿಸಿದ್ರು. ಅಲ್ಲದೆ ಪ್ರಮೋದ್ ಮುತಾಲಿಕ್, ನಿಡಸೋಸಿ ಮಠದ ಶಿವಲಿಂಗೇಶ್ವರ ಸ್ವಾಮೀಜಿ ಮೃತದೇಹದ ಪೂಜೆಯಲ್ಲಿ ಭಾಗಿಯಾಗಿದ್ರು.

ಖ್ಯಾತ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹತ್ಯೆ ಖಂಡನೀಯ ಇನ್ನು ಪೂಜೆಯಲ್ಲಿ ಭಾಗಿಯಾಗಿದ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಚಂದ್ರಶೇಖರ್ ಗುರೂಜಿ ಹತ್ಯೆ ಖಂಡನೀಯ, ಎಷ್ಟೆ ಹಣಕಾಸಿನ ವ್ಯವಹಾರ ಇದ್ರೂ ಕೊಲೆನೇ ಮಾರ್ಗ ಅಲ್ಲ. ಕೋಟ್೯ ಇದೆ, ನ್ಯಾಯಯವಿದೆ. ಪೊಲೀಸರು ನಾಲ್ಕೇ ಘಂಟೆಗಳಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇದರಲ್ಲಿ ಹೋಟಲ್ ಬೇಜವಾಬ್ದಾರಿ ಇದೆ, ಅವರ ಮೇಲೂ ಕೇಸ್ ಹಾಕಬೇಕು. ಹೋಟೆಲ್ ಸಿಬ್ಬಂದಿ ಒಟ್ಟಿಗೆ ಹೋಗಿದ್ರೆ ಗುರೂಜಿಯ ಜೀವ ಉಳಿಸಬಹುದಾಗಿತ್ತು. ಗುರೂಜಿಯ ಹತ್ಯಯಾಗಬಾರದಿತ್ತು ಎಂದರು.

Published On - 4:49 pm, Wed, 6 July 22

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ