Amit Shah Hubballi Visit: ಧಾರವಾಡ ಜಿಲ್ಲೆಯಲ್ಲಿ ಅಮಿತ್ ಶಾ ಪ್ರವಾಸ, ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಕ್ಯಾಂಪಸ್​ಗೆ ಶಂಕುಸ್ಥಾಪನೆ

| Updated By: ಆಯೇಷಾ ಬಾನು

Updated on: Jan 27, 2023 | 10:52 AM

ಜನವರಿ 28ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇರವಾಗಿ ಧಾರವಾಡಕ್ಕೆ ಬಂದು ಶಂಕು ಸ್ಥಾಪನೆ ಮಾಡಲಿದ್ದು, ಈ ಜಾಗವನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯ ನೀಡಿದೆ.

Amit Shah Hubballi Visit: ಧಾರವಾಡ ಜಿಲ್ಲೆಯಲ್ಲಿ ಅಮಿತ್ ಶಾ ಪ್ರವಾಸ, ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಕ್ಯಾಂಪಸ್​ಗೆ ಶಂಕುಸ್ಥಾಪನೆ
ಅಮಿತ್ ಶಾ
Follow us on

ಧಾರವಾಡ: ಈ ಜಿಲ್ಲೆ ಶಿಕ್ಷಣ ಕಾಶಿ ಎಂದು ಖ್ಯಾತಿ ಪಡೆಯಲು ಕಾರಣವಾಗಿದ್ದು ಇಲ್ಲಿರೋ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ ಜೊತೆಗೆ ಕೃಷಿ ಮತ್ತು ಕಾನೂನು ವಿವಿಗಳು. ಈಗ ಅದಕ್ಕೆ ಮತ್ತೊಂದು ವಿವಿಯ ಕ್ಯಾಂಪಸ್ ಸೇರ್ಪಡೆಯಾಗುತ್ತಿದೆ. ಆ ಕ್ಯಾಂಪಸ್ ಶಂಕುಸ್ಥಾಪನೆಗೆ ಕೇಂದ್ರ ಗೃಹಮಂತ್ರಿ ಅಮಿತ್ ಶಾ(Amit Shah) ಆಗಮಿಸುತ್ತಿದ್ದಾರೆ.

ಕೇಂದ್ರ ಸರ್ಕಾರ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಕ್ಯಾಂಪಸ್ಸನ್ನು ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಆರಂಭಿಸೋಕೆ ಮುಂದಾಗಿದೆ. ದಕ್ಷಿಣ ಭಾರತದ ಮೊದಲ ಕ್ಯಾಂಪಸ್ ಇದಾಗುತ್ತಿದ್ದು, ಕರ್ನಾಟಕದ ವಿಷಯಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಸದ್ಯ ಗುಜರಾತ್‌ನ ಗಾಂಧಿ ನಗರದಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ ಇದ್ದು, ಇದು ನೇರವಾಗಿ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿಯೇ ನಡೆಯುತ್ತದೆ. ಈ ವಿವಿ ದೇಶದ ಒಟ್ಟು 8 ಕಡೆ ತನ್ನ ಕ್ಯಾಂಪಸ್ ಹೊಂದಿದೆ. ಆದರೆ ದಕ್ಷಿಣ ಭಾರತದಲ್ಲಿ ಇರಲೇ ಇಲ್ಲ. ಸದ್ಯ ಈಗ ದಕ್ಷಿಣ ಭಾರತದ ಮೊದಲ ಈ ಕ್ಯಾಂಪಸ್ ಧಾರವಾಡದಲ್ಲಿ ಆರಂಭ ಆಗೋಕೆ ಕಾರಣವಾಗಿದ್ದು, ಧಾರವಾಡ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ. ಇದೀಗ ಈ ಕ್ಯಾಂಪಸ್ ಗೆ ಶಂಕುಸ್ಥಾಪನೆಯನ್ನು ಜನವರಿ 28 ರಂದು ಕೇಂದ್ರ ಗೃಹಸಚಿವ ಅಮಿತ್ ಷಾ ನೆರವೇರಿಸಲಿದ್ದಾರೆ.

ಇದನ್ನೂ ಓದಿ: ಆಲಮೇಲ ತಾಲೂಕಿನ ನೂರಾರು ಮಕ್ಕಳಲ್ಲಿ ದಡಾರ ದೃಢ: ಸಾಂಕ್ರಾಮಿಕವಾಗಿ ಹರಡುವ ಭೀತಿ, ಅಧಿಕಾರಿಗಳ ತುರ್ತು ಸಭೆ

ಜನವರಿ ಎರಡನೇ ವಾರದಲ್ಲಿ ಧಾರವಾಡದಲ್ಲಿ ಈ ಕ್ಯಾಂಪಸ್ ಮಾಡೋದಕ್ಕೆ ಮಂಜೂರಿ ಸಿಕ್ಕಿತ್ತು. ಇದೀಗ ಕೆಲವೇ ದಿನಗಳಲ್ಲಿ 42 ಎಕರೆ ಜಾಗವನ್ನೂ ಅಂತಿಮಗೊಳಿಸಲಾಗಿದೆ. ಜನವರಿ 28ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇರವಾಗಿ ಧಾರವಾಡಕ್ಕೆ ಬಂದು ಶಂಕು ಸ್ಥಾಪನೆ ಮಾಡಲಿದ್ದು, ಈ ಜಾಗವನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯ ನೀಡಿದೆ.

ಈಗಾಗಲೇ ಐಐಟಿ ಮತ್ತು ತ್ರಿಬಲ್ ಐಟಿಯೊಂದಿಗೆ ರಾಷ್ಟ್ರಮಟ್ಟದಲ್ಲಿ ಧಾರವಾಡದ ಕೀರ್ತಿ ಬೆಳಗುತ್ತಿದ್ದು, ಈಗ ವಿಧಿವಿಜ್ಞಾನ ವಿವಿ ಕ್ಯಾಂಪಸ್ ಆರಂಭಿಸರುವುದು ಮತ್ತೊಂದು ಹೆಮ್ಮೆಯ ಸಂಗತಿಯಾಗಿದೆ. ಈ ವಿಶ್ವವಿದ್ಯಾಲಯ ಜೊತೆಗೆ ವಿಧಿವಿಜ್ಞಾನ ಪ್ರಯೋಗಾಲಯದ ಪ್ರಾದೇಶಿಕ ಕಚೇರಿಯನ್ನೂ ಇದೇ ಕ್ಯಾಂಪಸ್ನಲ್ಲಿ ತೆರೆಯಲು ಯೋಜನೆ ಹಾಕಿಕೊಳ್ಳುತ್ತಿದ್ದು, ಭವಿಷ್ಯದಲ್ಲಿ ಧಾರವಾಡ ಇನ್ನು ಹೆಚ್ಚು ಪ್ರಸಿದ್ಧಿಗೆ ಬರಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9 ಧಾರವಾಡ

Published On - 7:11 am, Fri, 27 January 23