AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋಟಿಸ್​ ನೀಡಿದ ಬೆನ್ನಲ್ಲೇ ಯತ್ನಾಳ್ ಗಪ್ ​ಚುಪ್​: ಯಡಿಯೂರಪ್ಪ ಬಗ್ಗೆ ಮಾತನಾಡುವುದನ್ನ ಬಿಟ್ಟಿದ್ದಾರೆ ಎಂದ ಅರುಣ್ ಸಿಂಗ್

ಶಿಸ್ತು ಸಮಿತಿಯಿಂದ ಶಾಸಕ ಯತ್ನಾಳ್​ಗೆ ನೋಟಿಸ್ ನೀಡಲಾಗಿದೆ. ನೋಟಿಸ್ ನೀಡಿದ ಬಳಿಕ ಈಗ ಮಾತನಾಡುವುದನ್ನು ಬಿಟ್ಟಿದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.

ನೋಟಿಸ್​ ನೀಡಿದ ಬೆನ್ನಲ್ಲೇ  ಯತ್ನಾಳ್ ಗಪ್ ​ಚುಪ್​: ಯಡಿಯೂರಪ್ಪ ಬಗ್ಗೆ ಮಾತನಾಡುವುದನ್ನ ಬಿಟ್ಟಿದ್ದಾರೆ ಎಂದ ಅರುಣ್ ಸಿಂಗ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪ, ಅರುಣ್ ಸಿಂಗ್
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Jan 27, 2023 | 3:21 PM

Share

ಹುಬ್ಬಳ್ಳಿ: ಶಿಸ್ತು ಸಮಿತಿಯಿಂದ ಶಾಸಕ ಯತ್ನಾಳ್​ಗೆ (Yatnal) ನೋಟಿಸ್ ನೀಡಲಾಗಿದೆ. ನೋಟಿಸ್ ನೀಡಿದ ಬಳಿಕ ಈಗ ಮಾತನಾಡುವುದನ್ನು ಬಿಟ್ಟಿದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಬಿಜೆಪಿ ಅಶಿಸ್ತನ್ನು ಒಪ್ಪಿಕೊಳ್ಳಲ್ಲ. ಆರ್ಥಿಕತೆಯಲ್ಲಿ‌ ಭಾರತ ಮುಂಚೂಣಿ ಸ್ಥಾನದಲ್ಲಿ ಮುನ್ನಡೆಯುತ್ತಿದೆ. ಭಾರತ ಸರ್ಕಾರದ ನೀತಿಗಳಿಗೆ ಅನೇಕ ರಾಷ್ಟ್ರಗಳಿಂದ ಮೆಚ್ಚುಗೆ ದೇಶದಲ್ಲಿ ಮೂರು ಕೋಟಿಗೂ ಹೆಚ್ಚು ಜನರು ಲಕ್ಷಾಧೀಶರಿದ್ದಾರೆ. ದೇಶದ ಜನರ ಆರ್ಥಿಕತೆ ಸುಧಾರಿಸುತ್ತಿದೆ ಎಂದ ಅರುಣ್ ಸಿಂಗ್ ತಿಳಿಸಿದರು.

ಯತ್ನಾಳ್​ ಅವರ ಬಗ್ಗೆ ನಾನು ಹೆಚ್ಚಿಗೆ ಹೇಳಲು ಇಚ್ವಿಸಲ್ಲಾ: ಬಿ.ವೈ ವಿಜಯೇಂದ್ರ

ಮಾಜಿ ಸಿಎಂ ಯಡಿಯೂರಪ್ಪ ಕುರಿತು ನಾನು‌ ಬೈಯ್ಯಲ್ಲಾ. ಹೈಕಮಾಂಡ್ ಸೂಚನೆ ಮೇರೆಗೆ ಬಿಎಸ್ವೈ ಕುರಿತು ಮಾತನಾಡಲ್ಲಾ ಎಂದು ನಿನ್ನೆ (ಜ. 26) ಯತ್ನಾಳ್​ ಹೇಳಿದ್ದರು. ಈ ಕುರಿತಾಗಿ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ಪಕ್ಷದ ಹಿತದೃಷ್ಟಿಯಿಂದ ಪಕ್ಷದ ಭವಿಷ್ಯದ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಎಂದು ಭಾವಿಸಿರುವೆ. ಯತ್ನಾಳ್​ ಅವರು ಹಿರಿಯರಿದ್ದಾರೆ ಅವರ ಬಗ್ಗೆ ನಾನು ಹೆಚ್ಚಿಗೆ ಹೇಳಲು ಇಚ್ವಿಸಲ್ಲಾ. ಬಿಎಸ್​ವೈ ಅವರು ನಾಲ್ಕು ಬಾರಿ ರಾಜ್ಯದ ಸಿಎಂ ಆಗಿದ್ದವರು. ಅವರು ಸಿಎಂ ಇಲ್ಲದಿದ್ದರೂ ಎಲ್ಲಾ ಸಮುದಾಯದ ಜನರು ಒಪ್ಪಿಕೊಂಡಿರುವ ಧೀಮಂತ ನಾಯಕರಾಗಿದ್ದಾರೆ.

ಇದನ್ನೂ ಓದಿ: ಬಿಜೆಪಿ ಹೈಕಮಾಂಡ್​ ಸೂಚನೆ ಬೆನ್ನಲ್ಲೇ ಸೈಲೆಂಟ್​ ಆದ ಶಾಸಕ ಯತ್ನಾಳ್​​: ಯಡಿಯೂರಪ್ಪ ಬಗ್ಗೆ ಮಾತನಾಡದಂತೆ ಸೂಚನೆ ​​

ಯತ್ನಾಳ್​ ಅವರ ಬಗ್ಗೆ ನಮಗೆ ವೈಯಕ್ತಿಕ ವಿರೋಧಗಳಿಲ್ಲ

ಯಡಿಯೂರಪ್ಪನವರಿಗೆ ಕಲ್ಲನ್ನ ಎಸೆದರೆ ಅದು ಪಕ್ಷಕ್ಕೆ ಹೊಡೆತ ಬೀಳುತ್ತದೆ. ಪಕ್ಷಕ್ಕೆ ಪೆಟ್ಟಾಗುತ್ತದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಬರುವಂತ ದಿನಗಳಲ್ಲಿ ಅರ್ಥ ಆಗುತ್ತದೆ ಎಂದು ನಾನೊಂದುಕೊಂಡಿರುವೆ‌. ಏನು ಸಮಸ್ಯೆ ಇದ್ದರೂ ತಿಳಿದುಕೊಂಡು ಬಗೆ ಹರಿಸಿಕೊಳ್ಳಬೇಕಾಗುತ್ತದೆ. ನಾನಿನ್ನು ರಾಜಕೀಯದಲ್ಲಿ ಅಂಬೆಗಾಲಿಡುತ್ತಿದ್ದೇನೆ. ಯತ್ನಾಳ್​ ಅವರ ಬಗ್ಗೆ ನಮಗೆ ವೈಯಕ್ತಿಕ ವಿರೋಧಗಳಿಲ್ಲ. ನಮ್ಮ ಹೇಳಿಕೆ ಆಲೋಚನೆಗಳು ಪಕ್ಷಕ್ಕೆ ಪೂರಕವಾಗಿರಬೇಕು. ಪಕ್ಷಕ್ಕೆ ಧಕ್ಕೆ ತರುವಂತಿರಬಾರದು ಎಂದರು.

ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಕುಮಾರಸ್ವಾಮಿಯದ್ದು ಏನೂ ನಡೆಯಲ್ಲ, ಅವರದ್ದೇನಿದ್ದರೂ ಮಂಡ್ಯ, ಹಾಸನ ಎಂದ ಶಾಸಕ ಯತ್ನಾಳ್

ಎಲ್ಲರೂ ಒಗ್ಗಟ್ಟಾಗಿ ಪಕ್ಷವನ್ನ ಮುನ್ನಡೆಸಿಕೊಂಡು ಹೋಗಬೇಕು

ಚುನಾವಣೆ ಹೊತ್ತಿನಲ್ಲಿರುವ ನಾವು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಕೈಯನ್ನ ಇನ್ನಷ್ಟು ಬಲಪಡಿಸಬೇಕು. ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಿದೆ. ಎಲ್ಲರೂ ಒಗ್ಗಟ್ಟಾಗಿ ಪಕ್ಷವನ್ನ ಮುನ್ನಡೆಸಿಕೊಂಡು ಹೋಗುವ ಕರ್ತವ್ಯ ಎಲ್ಲರದ್ದೂ‌ ಇದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಸಿಎಂ ಬಸವರಾಜ್ ಬೊಮ್ಮಾಯಿ, ಯಡಿಯೂರಪ್ಪ, ರಾಜ್ಯಾಧ್ಯಕ್ಷರು ಹಾಗೂ ಇತರೆ ಎಲ್ಲಾ ನಾಯಕರು ಒಗ್ಗಟ್ಟಾಗಿ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ ಎಂದು ಬಿ.ವೈ ವಿಜಯೇಂದ್ರ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.