ಅಂತರ್​ರಾಜ್ಯ ಡ್ರಗ್ ಪೆಡ್ಲರ್​ಗಳೊಂದಿಗೆ ನಂಟು; ಹುಬ್ಬಳ್ಳಿ ಮೂಲದ ಯುವಕನ ಬಂಧನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 08, 2023 | 12:39 PM

ಅಂತರ್​ರಾಜ್ಯ ಡ್ರಗ್ ಪೆಡ್ಲರ್​ಗಳೊಂದಿಗೆ ನಂಟು ಹೊಂದಿದ್ದ ಹುಬ್ಬಳ್ಳಿ ಮೂಲದ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸೂರಜಗೌಡ ಕಾನಗೌಡರ ಬಂಧಿತ ಆರೋಪಿ. ಇತ ಕೆಲ ತಿಂಗಳಿನಿಂದ ಅಂತಾರಾಜ್ಯ ಡ್ರಗ್ ಪೆಡ್ಲರ್​​ಗಳೊಂದಿಗೆ ಸಂಬಂಧ ಇಟ್ಟುಕೊಂಡಿದ್ದನಂತೆ. ಈ ಹಿನ್ನಲೆ ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಅಂತರ್​ರಾಜ್ಯ ಡ್ರಗ್ ಪೆಡ್ಲರ್​ಗಳೊಂದಿಗೆ ನಂಟು; ಹುಬ್ಬಳ್ಳಿ ಮೂಲದ ಯುವಕನ ಬಂಧನ
ಆರೋಪಿ
Follow us on

ಹುಬ್ಬಳ್ಳಿ, ಆ.8: ಅಂತರ್​ರಾಜ್ಯ ಡ್ರಗ್ ಪೆಡ್ಲರ್(Drug Peddler)​ಗಳೊಂದಿಗೆ ನಂಟು ಹೊಂದಿದ್ದ ಹುಬ್ಬಳ್ಳಿ(Hubballi) ಮೂಲದ ಯುವಕನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸೂರಜಗೌಡ ಕಾನಗೌಡರ ಬಂಧಿತ ಆರೋಪಿ. ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದವನಾದ ಇತ, ನಗರದ ಜನತಾ ಬಜಾರ್‌ನಲ್ಲಿ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಇನ್ನು ಆರೋಪಿ ಕಳೆದ ಹಲವು ತಿಂಗಳಿಂದ ಅಂತಾರಾಜ್ಯ ಡ್ರಗ್ ಪೆಡ್ಲರ್​​ಗಳೊಂದಿಗೆ ನಂಟು ಹೊಂದಿದ್ದ ಎಂಬುದು ತಮಿಳನಾಡಿನ ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.

ಡ್ರಗ್​ ಜಾಲವನ್ನು NDPS ಆ್ಯಕ್ಟ್ ಅಡಿ ಭೇದಿಸಿದ್ದ ಪೀಲಮೆಡು ಪೊಲೀಸರು

ಆರೋಪಿ ಸೂರಜಗೌಡ ನಿರ್ಬಂಧಿತ ಮೆಡಿಷನ್ ಸಹ ಮಾರಾಟ ಮಾಡುತ್ತಿದ್ದ. ಇನ್ನು ಈ ಜಾಲವನ್ನು NDPS ಆ್ಯಕ್ಟ್ ಅಡಿ ತಮಿಳುನಾಡಿನ ಕೊಯಮತ್ತೂರಿನ ಪೀಲಮೆಡು ಠಾಣೆಯ ಪೊಲೀಸರು ಭೇದಿಸಿದ್ದರು. ಈ ವೇಳೆ ಅಲ್ಲಿನ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದ ಪೊಲೀಸರಿಗೆ ಹುಬ್ಬಳ್ಳಿ ಮೂಲದ ಸೂರಜ್‌ಗೌಡನ ಹೆಸರು ಹೊರಬಂದಿತ್ತು. ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ, ತಮಿಳುನಾಡಿನ ಕೊಯಮತ್ತೂರು ಪೊಲೀಸರು ಜಾಲದ ಪತ್ತೆಗೆ ಹುಬ್ಬಳ್ಳಿಗೆ ಆಗಮಿಸಿದ್ದರು.

ಇದನ್ನೂ ಓದಿ:ಆಪರೇಶನ್​ಗೆ ಬಂದಿದ್ದ ನೈಜೀರಿಯಾದವ ಸೈಲೆಂಟ್​ ಆಗಿ ಡ್ರಗ್ ಪೆಡ್ಲರ್ ಆಗಿಬಿಟ್ಟಿದ್ದ, ಆದ್ರೆ ಆಪರೇಶನ್ ಮಾಡಿದ್ದು ಬೆಂಗಳೂರು ಪೊಲೀಸರು!

ನಿರ್ಬಂಧಿತ ಮೆಡಿಷನ್ ಖರೀದಿಸುವ ನೆಪದಲ್ಲಿ ಆಗಮಿಸಿ ವಿಚಾರಣೆ

ಇನ್ನು ಸೂರಜ್‌ಗೌಡನನ್ನು ಜನತಾ ಬಜಾರ್‌ಗೆ ಕರೆಯಿಸಿಕೊಂಡು ನಿರ್ಬಂಧಿತ ಮೆಡಿಷನ್ ಖರೀದಿಸುವ ನೆಪದಲ್ಲಿ ಆಗಮಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇನ್ನು ಸೂರಜಗೌಡ ಬಂಧನಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಹಾಗೂ ಉಪನಗರ ಪೊಲೀಸರಿಗೆ ಪೀಲಮೆಡು ಪೊಲೀಸರು ಮಾಹಿತಿ ನೀಡಿದ್ದರು. ಇದೀಗ ಆತನನ್ನು ಬಂಧಿಸಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ