ಹುಬ್ಬಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ! ಲಿಕ್ವಿಡ್ ಚಿನ್ನವನ್ನು ಕದ್ದಿದ್ದ ಅಂತರ್​ರಾಜ್ಯ ಕಳ್ಳರ ಬಂಧನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 08, 2023 | 4:21 PM

ಲಿಕ್ವಿಡ್ ಚಿನ್ನವನ್ನ ಕದ್ದಿದ್ದ ಅಂತರ್​ರಾಜ್ಯ ಕಳ್ಳರನ್ನು ಇದೀಗ ಹುಬ್ಬಳ್ಳಿ ಶಹರ ಪೊಲೀಸರು ಬಂಧಿಸಿದ್ದಾರೆ. ಅವರಿಂದ6.5 ಲಕ್ಷ ರೂ ನಗದು ಹಾಗೂ 12 ಲಕ್ಷ ರೂ ಮೌಲ್ಯದ ಗಟ್ಟಿ ಬಂಗಾರ ಸೇರಿ ಒಟ್ಟು 18.50 ಲಕ್ಷ ರೂ ಮೌಲ್ಯದ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ. ಬಳಿಕ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹುಬ್ಬಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ! ಲಿಕ್ವಿಡ್ ಚಿನ್ನವನ್ನು ಕದ್ದಿದ್ದ ಅಂತರ್​ರಾಜ್ಯ ಕಳ್ಳರ ಬಂಧನ
ಹುಬ್ಬಳ್ಳಿ ಶಹರ ಪೊಲೀಸರು
Follow us on

ಹುಬ್ಬಳ್ಳಿ, ಸೆ.08: ಲಿಕ್ವಿಡ್ ಚಿನ್ನವನ್ನ ಕದ್ದಿದ್ದ ಅಂತರ್​ರಾಜ್ಯ ಕಳ್ಳರನ್ನು ಇದೀಗ ಹುಬ್ಬಳ್ಳಿ ಶಹರ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿ (Hubballi) ಯ ಮರಾಠಗಲ್ಲಿಯಲ್ಲಿ ಬಿಲ್ಡಿಂಗ್ ಶಟರ್ ಮುರಿದು ಮಷಿನ್‌ನಲ್ಲಿ ಕರಗಿದ್ದ 61.80 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳ ಲಿಕ್ವಿಡ್‌ನ್ನು ಕಳುವು ಮಾಡಿದ್ದರು. ಈ ಕುರಿತು ಹುಬ್ಬಳ್ಳಿ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಖದೀಮರ ಪತ್ತೆಗಾಗಿ ಶಹರ ಪೊಲೀಸ್ ಠಾಣೆಯ ಪಿಎಸ್‌ಐ ವಿನೋದ ದೊಡ್ಡಲಿಂಗಪ್ಪನವರ, ಇನ್ಸಪೆಕ್ಟರ್ ಎ.ಎಮ್, ತಹಶೀಲ್ದಾರ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು.

ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೊಲೀಸರು

ತನಿಖೆ ಆರಂಭಿಸಿದ ಪೊಲೀಸರಿಗೆ ಇದೀಗ ಆರೋಪಿಗಳಾದ ಅಜಯ್ ಕದಂ, ಆದಿನಾಥ, ಅಜಯ್ ಬೋಸ್ಲೆ ಹಾಗೂ ಸಿದ್ದಾರ್ಥ ಕಾಂಬ್ಳೆ ಎಂಬುವವರನ್ನು ಬಂಧಿಸಿದ್ದು, ಅವರಿಂದ6.5 ಲಕ್ಷ ರೂ ನಗದು ಹಾಗೂ 12 ಲಕ್ಷ ರೂ ಮೌಲ್ಯದ ಗಟ್ಟಿ ಬಂಗಾರ ಸೇರಿ ಒಟ್ಟು 18.50 ಲಕ್ಷ ರೂ ಮೌಲ್ಯದ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ. ಬಳಿಕ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಪೋಲೀಸರ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಕೋಲಾರದಲ್ಲಿ ಅಂತರ್​ರಾಜ್ಯ ಇರಾನಿ ಗ್ಯಾಂಗ್ ಸದಸ್ಯರುಗಳ ಬಂಧನ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಶ

ಹೈಟೆನ್ಷನ್ ಟವರ್​ ಏರಿದ್ದ ವ್ಯಕ್ತಿಗೆ ವಿದ್ಯುತ್ ಸ್ಪರ್ಶವಾಗಿ ಸಾವು

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೋನೆನಹಳ್ಳಿ ಬಳಿ 50 ಅಡಿ ಎತ್ತರದ ಹೈಟೆನ್ಷನ್ ಟವರ್​ ಏರಿದ್ದ ವ್ಯಕ್ತಿಗೆ ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಅಮೃತ್(25) ಮೃತ ವ್ಯಕ್ತಿ. ಮೃತದೇಹ ಹೈಟೆನ್ಷನ್ ಟವರ್​ ಮೇಲೇಯೇ ನೇತಾಡುತ್ತಿದ್ದು, ಘಟನಾ ಸ್ಥಳಕ್ಕೆ ದೊಡ್ಡಬೆಳವಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನುಬ ಆತ ಏಕೆ ಟವರ್​ ಕಂಬವನ್ನೇರಿದ್ದ ಎಂಬುವುದರ ಮಾಹಿತಿ ತಿಳಿದಿಲ್ಲ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:21 pm, Fri, 8 September 23