ದೆಹಲಿ, ಬೆಂಗಳೂರು ಬಳಿಕ ಈಗ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಭಾರತ್ ಅಕ್ಕಿ ವಿತರಣೆ

ಕೇಂದ್ರ ಸರ್ಕಾರದ ಭಾರತ್ ಬ್ರ್ಯಾಂಡ್ ಯೋಜನೆಯಡಿ ಹುಬ್ಬಳ್ಳಿಯಲ್ಲಿ ಅಗ್ಗದ ದರದಲ್ಲಿ ಆಹಾರ ಉತ್ಪನ್ನಗಳ ವಿತರಣೆ ಇಂದಿನಿಂದ ಆರಂಭವಾಗುತ್ತಿದೆ. ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆ ಪ್ರಾರಂಭಿಸಲಾಗಿದೆ. ಹುಬ್ಬಳ್ಳಿಯಲ್ಲಿ ಮೂರುಸಾವಿರ ಮಠದ ಶಾಲಾ ಆವರಣದಲ್ಲಿ ಈ ವಿತರಣೆ ಕಾರ್ಯ ನಡೆಯುತ್ತಿದೆ.

ದೆಹಲಿ, ಬೆಂಗಳೂರು ಬಳಿಕ ಈಗ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಭಾರತ್ ಅಕ್ಕಿ ವಿತರಣೆ
ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಭಾರತ್ ಅಕ್ಕಿ ವಿತರಣೆ
Follow us
TV9 Web
| Updated By: Ganapathi Sharma

Updated on: Nov 11, 2024 | 10:32 AM

ಹುಬ್ಬಳ್ಳಿ, ನವೆಂಬರ್ 11: ಬೆಲೆ ಏರಿಕೆ ಹಿನ್ನೆಲೆಯಲ್ಲಿ ಜನಸಾಮಾನ್ಯರ ನೆರವಿಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ನೇರ ಆಹಾರ ಉತ್ಪನ್ನ ಪೂರೈಕೆ, ಈಗ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತವರು ಕ್ಷೇತ್ರದಲ್ಲಿ ಆರಂಭಗೊಂಡಿದೆ. ಅಗತ್ಯ ಆಹಾರೋತ್ಪನ್ನಗಳ ಬೆಲೆ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರ ಮೊದಲಿಗೆ ದೆಹಲಿಯಲ್ಲಿ 29 ರೂ. ದರದಲ್ಲಿ 10 ಕೆಜಿ ಪ್ಯಾಕೆಟ್ ಭಾರತ್ ಅಕ್ಕಿ ಬಿಡುಗಡೆ ಮಾಡಿತ್ತು. ನಂತರ ಮೊಬೈಲ್ ವಾಹನಗಳ ಮೂಲಕ ದೇಶಾದ್ಯಂತ ಹಂಚಿತು.

ಕ್ರಮೇಣ, ಭಾರತ್ ಅಕ್ಕಿ ಜತೆಗೆ ಆಯಾ ರಾಜ್ಯ ಮತ್ತು ಪ್ರದೇಶವಾರು ಬೇಡಿಕೆಗೆ ತಕ್ಕಂತೆ ಕಡಿಮೆ ಬೆಲೆಯಲ್ಲಿ ಭಾರತ್ ಬೇಳೆ, ಭಾರತ್ ಗೋಧಿ, ಭಾರತ್ ಹಿಟ್ಟು ವಿತರಣೆ ಆರಂಭಿಸಿದೆ.

ದೇಶದ ಪ್ರಮುಖ ನಗರಗಳು ಹಾಗೂ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಗಗನಮುಖಿ ಆಗುತ್ತಿದ್ದಂತೆಯೇ ಕೆಜಿಗೆ 35 ರೂ. ದರದಲ್ಲಿ ಈರುಳ್ಳಿ ಪೂರೈಸಿ ಗ್ರಾಹಕರ ಕೈಗಿಟ್ಟಿತು. ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬದ ದಿನಗಳಲ್ಲಿ ದೆಹಲಿ, ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲಿ ಈರುಳ್ಳಿ ಜತೆಗೆ “ಭಾರತ್ ಬ್ರ್ಯಾಂಡ್” ಅಡಿ ಕಡಿಮೆ ಬೆಲೆಗೆ ಆಹಾರೋತ್ಪನ್ನ ಪೂರೈಸಲಾಗಿತ್ತು.

ಭಾರತ್ ಬ್ರ್ಯಾಂಡ್ ಅಡಿ ಕಡಿಮೆ ಬೆಲೆಗೆ ವಿವಿಧ ಉತ್ಪನ್ನ

ಭಾರತ್ ಅಕ್ಕಿ, ಭಾರತ್ ಬೇಳೆ, ಭಾರತ್ ಗೋಧಿ ಹಿಟ್ಟು, ಅಕ್ಕಿ ಹಿಟ್ಟು ಹೀಗೆ ಅಗತ್ಯ ಆಹಾರ ಉತ್ಪನ್ನಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮೊಬೈಲ್ ವಾಹನಗಳಲ್ಲಿ ವಿತರಿಸಲಾಗುತ್ತಿದೆ.

ರಾಜ್ಯದಲ್ಲಿ ಬೆಂಗಳೂರು ಬಳಿಕ ಈಗ ಚೋಟಾ ಮುಂಬೈ ಎಂದೇ ಖ್ಯಾತಿಯಾದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಹ ಭಾರತ್ ಬ್ರ್ಯಾಂಡ್ ಅಡಿ ನೇರ ಗ್ರಾಹಕರಿಗೆ ಆಹಾರೋತ್ಪನ್ನ ವಿತರಿಸಲು ಕೇಂದ್ರ ಆಹಾರ ಪೂರೈಕೆ ಸಚಿವ ಪ್ರಲ್ಹಾದ್ ಜೋಶಿ ಕ್ರಮ ಕೈಗೊಂಡಿದ್ದಾರೆ.

ಭಾರತ್ ಬ್ರ್ಯಾಂಡ್ ಅಕ್ಕಿ ಮಾರಾಟ ಎಲ್ಲಿ?

ಹುಬ್ಬಳ್ಳಿ ಮೂರುಸಾವಿರ ಮಠದ ಶಾಲಾ ಆವರಣದಲ್ಲಿ ಇಂದು ಬೆಳಗ್ಗೆ ಕಡಿಮೆ ಬೆಲೆಯಲ್ಲಿ ಪೂರೈಸುವ “ಭಾರತ್ ಬ್ರ್ಯಾಂಡ್” ಆಹಾರ ಉತ್ಪನ್ನಗಳ ವಿತರಣೆಗೆ ಚಾಲನೆ ನೀಡಲಾಗುತ್ತಿದ್ದು, ಜನಸಾಮಾನ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಚಿವ ಪ್ರಲ್ಹಾದ್ ಜೋಶಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಭಾರತ್ ಅಕ್ಕಿಗಾಗಿ ಮುಗಿಬಿದ್ದ ಜನ: ಕೆಲವೇ ಕ್ಷಣಗಳಲ್ಲಿ ಒಂದು ಲಾರಿ ಲೋಡ್ ಖಾಲಿ

ಕೆಲವು ದಿನಗಳ ಹಿಂದಷ್ಟೇ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಭಾರತ್ ಬ್ರ್ಯಾಂಡ್ ಅಡಿ ಅಗತ್ಯವಸ್ತುಗಳನ್ನು ಮಾರಾಟ ಮಾಡಲಾಗಿತ್ತು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ