ಕೋಲಾರದಲ್ಲಿ ಭಾರತ್ ಅಕ್ಕಿಗಾಗಿ ಮುಗಿಬಿದ್ದ ಜನ: ಕೆಲವೇ ಕ್ಷಣಗಳಲ್ಲಿ ಒಂದು ಲಾರಿ ಲೋಡ್ ಖಾಲಿ

ಕೋಲಾರದಲ್ಲಿ ಭಾರತ್ ಅಕ್ಕಿಗಾಗಿ ಮುಗಿಬಿದ್ದ ಜನ: ಕೆಲವೇ ಕ್ಷಣಗಳಲ್ಲಿ ಒಂದು ಲಾರಿ ಲೋಡ್ ಖಾಲಿ

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಕಿರಣ್ ಹನುಮಂತ್​ ಮಾದಾರ್

Updated on:Feb 08, 2024 | 5:14 PM

ನಿನ್ನೆಯಷ್ಟೇ ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಬಸ್ ನಿಲ್ದಾಣದ ಬಳಿ ಭಾರತ್ ಅಕ್ಕಿ(bharat brand rice) ಪಡೆಯಲು ಜನರು ಮುಗಿಬಿದ್ದ ಘಟನೆ ನಡೆದಿತ್ತು. ಅದೆಷ್ಟೋ ಜನ ಅಕ್ಕಿ ಸಿಗದೇ ನಿರಾಸೆಗೊಂಡಿದ್ದರು. ಈ ಹಿನ್ನಲೆ ಇಂದು ಕೋಲಾರ (Kolar) ನಗರದ ಡೂಂ‌ ಲೈಟ್ ಸರ್ಕಲ್​ನಲ್ಲಿ ಬಿಜೆಪಿಯಿಂದ ಭಾರತ್ ಅಕ್ಕಿ ವಿತರಣೆ ಮಾಡಲಾಗಿದೆ.

ಕೋಲಾರ, ಫೆ.07: ಕೇಂದ್ರ ಸರ್ಕಾರದ ಭಾರತ್  ಬ್ರ್ಯಾಂಡ್ ಅಕ್ಕಿ (Bharat Brand Rice)ಯೋಜನೆಗೆ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಫೆಬ್ರವರಿ 06 ರಂದು ಚಾಲನೆ‌ ನೀಡಿದರು. ಅದರಂತ ಕೋಲಾರ (Kolar) ನಗರದ ಡೂಂ‌ ಲೈಟ್ ಸರ್ಕಲ್​ನಲ್ಲಿ ಬಿಜೆಪಿ ಮುಖಂಡರು ಭಾರತ್ ಅಕ್ಕಿ ವಿತರಣೆ ಮಾಡಿದರು. ಪ್ರತಿ ಕೆಜಿಗೆ 29ರೂ ನಂತೆ ಹತ್ತು ಕೆಜಿ ಅಕ್ಕಿಯ ಬ್ಯಾಗ್ ವಿತರಿಸಲಾಗಿದೆ. ಈ ವೇಳೆ ಅಕ್ಕಿ ಪಡೆಯಲು ಜನರ ನೂಕು ನುಗ್ಗಲು ನಿರ್ಮಾಣವಾಗಿದ್ದು, ಕೆಲವೇ ಕ್ಷಣಗಳಲ್ಲಿ ಒಂದು ಲಾರಿ ಲೋಡ್ ಅಕ್ಕಿ ಖಾಲಿಯಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published on: Feb 07, 2024 08:00 PM