ಸಿಎಂ ಅಧಿಕಾರ ತ್ಯಾಗ ಮಾಡಬೇಕಾದರೆ ಕಣ್ಣೀರು ಹಾಕಿದ್ದು ಯಾಕೆ ಅಂತ ನಮಗೆ ಗೊತ್ತಿದೆ; ಡಿ.ಕೆ.ಶಿವಕುಮಾರ್ ವಾಗ್ದಾಳಿ

ಭ್ರಷ್ಟಾಚಾರ ಬಗ್ಗೆ ಅವರ ಪಕ್ಷದ ಶಾಸಕ ಬೆಲ್ಲದ್ ಅವರೇ ಹೇಳಿದ್ದಾರೆ. ಅವರನ್ನ ನಂಬಲೇಬೇಕು ಅಲ್ವಾ? ಎಂದು ಪ್ರಶ್ನಿಸಿದ ಡಿ.ಕೆ.ಶಿವಕುಮಾರ್, ಅವರಿಗೆ ಅವರ ಪಕ್ಷದ ಆಂತರಿಕ ವಿಚಾರ ಗೊತ್ತಿರುತ್ತದೆ.

ಸಿಎಂ ಅಧಿಕಾರ ತ್ಯಾಗ ಮಾಡಬೇಕಾದರೆ ಕಣ್ಣೀರು ಹಾಕಿದ್ದು ಯಾಕೆ ಅಂತ ನಮಗೆ ಗೊತ್ತಿದೆ; ಡಿ.ಕೆ.ಶಿವಕುಮಾರ್ ವಾಗ್ದಾಳಿ
ಡಿ.ಕೆ.ಶಿವಕುಮಾರ್
Edited By: sandhya thejappa

Updated on: Aug 29, 2021 | 11:59 AM

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಗುಂಡಿಗಳ ನಗರ ಎಂದು ಹೇಳಿಕೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar), ಅಡುಗೆ ಸಿಲಿಂಡರ್ ದರ 800-900 ರೂಪಾಯಿ ಆಗಿದೆ. ಬಿಜೆಪಿ ಹುಬ್ಬಳ್ಳಿ-ಧಾರವಾಡದಲ್ಲಿ ನೀಡಿದ್ದ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ಬಿಜೆಪಿ ಪ್ರಣಾಳಿಕೆ ಕೇವಲ ಕಮರ್ಷಿಯಲ್ ಆಗಿದೆ. ಬಿಜೆಪಿ ಮತದಾರರ ನಂಬಿಕೆ ಉಳಿಸಿಕೊಂಡಿಲ್ಲ. ಹುಬ್ಬಳ್ಳಿ ಅಭಿವೃದ್ಧಿಯಾಗಬೇಕು ಎಂಬುದು ನಮ್ಮ ಉದ್ದೇಶ ಅಂತ ಅಭಿಪ್ರಾಯಪಟ್ಟರು.

ಕೊರೊನಾ ಸಮಯದಲ್ಲಿ ಬೆಡ್ಗಳಿಗಾಗಿ ಜನರನ್ನು ಕ್ಯೂ ನಿಲ್ಲಿಸಿದ್ದರು. ಆ್ಯಂಬುಲೆನ್ಸ್​ಗೂ ಕ್ಯೂ ನಿಲ್ಲಿಸಿದ್ರು. ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ. ಅದಕ್ಕೆ ಸಿಎಂ ಬದಲಾವಣೆ ಆಯ್ತು. ಸಿಎಂ ಅಧಿಕಾರ ತ್ಯಾಗ ಮಾಡಬೇಕಾದರೆ ಕಣ್ಣೀರು ಹಾಕಿದ್ರು. ಅವರು ಯಾಕೆ ಕಣ್ಣೀರು ಹಾಕಿದ್ರು ಎನ್ನುವುದು ನಮಗೆ ಗೊತ್ತಿದೆ ಅಂತ ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.

ಭ್ರಷ್ಟಾಚಾರ ಬಗ್ಗೆ ಅವರ ಪಕ್ಷದ ಶಾಸಕ ಬೆಲ್ಲದ್ ಅವರೇ ಹೇಳಿದ್ದಾರೆ. ಅವರನ್ನ ನಂಬಲೇಬೇಕು ಅಲ್ವಾ? ಎಂದು ಪ್ರಶ್ನಿಸಿದ ಡಿ.ಕೆ.ಶಿವಕುಮಾರ್, ಅವರಿಗೆ ಅವರ ಪಕ್ಷದ ಆಂತರಿಕ ವಿಚಾರ ಗೊತ್ತಿರುತ್ತದೆ. ಸಿಎಂ ಆದ ಮೇಲೆ ಹುಬ್ಬಳ್ಳಿಯಲ್ಲಿ ಬೊಮ್ಮಾಯಿ ಮನೆ ಬೀದಿ ರಸ್ತೆ ರಿಪೇರಿ ನಡಿಯುತ್ತಿದೆ. ಅವರು 15 ವರ್ಷದಲ್ಲಿ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದರೂ ಏನು ಮಾಡಿಲ್ಲ ಎನ್ನುವುದಕ್ಕೆ ಇದೇ ಸ್ಪಷ್ಟ ಉದಾಹರಣೆ. ಕೇಂದ್ರ 20 ಲಕ್ಷ ಕೋಟಿ ಪ್ಯಾಕೆಜ್ ಬಿಡುಗಡೆ ಮಾಡಿದ್ದೀವಿ ಅಂತ ಹೇಳಿದ್ದರು. ಆ ಹಣ ಯಾರು ಯಾರಿಗೆ ತಲುಪಿದೆ ಎನ್ನುವ ಪಟ್ಟಿಯನ್ನು ಬಿಡುಗಡೆ ಮಾಡಲಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೊವಿಡ್ ಹಿನ್ನೆಲೆ ನಾವು ಯಾವುದೇ ಬಹಿರಂಗ ಸಭೆ ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರ ನುಡಿದಂತೆ ನಡೆದಿದೆ. ಕಳೆದ 15 ವರ್ಷಗಳಿಂದ ಪಾಲಿಕೆ ಆಡಳಿತ ನಡೆಸುತ್ತಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಏನು ಬದಲಾವಣೆ ತಂದಿದ್ದಾರೆ? ಬಿಜೆಪಿ ಕೇವಲ ಸುಳ್ಳಿನ ಸರಮಾಲೆಯನ್ನ ಕಟ್ಟಿದ್ದಾರೆ. ಮನೆಮನೆಗೆ ಗ್ಯಾಸ್ ಪೈಪ್ ಲೈನ್ ಅಳವಡಿಸುತ್ತೀವೆ ಎಂದಿದ್ದರು. ಆದರೆ ಈವರೆಗೂ ಆ ಯೋಜನೆ ಪೂರ್ಣಗೊಂಡಿಲ್ಲ ಅಂತ ಅಭಿಪ್ರಾಯಪಟ್ಟರು.

ಇದನ್ನೂ ಓದಿ

ಕೊರೊನಾ 3ನೇ ಅಲೆಯ ಭೀತಿ; ಮುಂಜಾಗ್ರತೆ ವಹಿಸಲು ಗೃಹ ಇಲಾಖೆಯಿಂದ ರಾಜ್ಯಗಳಿಗೆ ಪತ್ರ

ಕಾಬೂಲ್​ನಲ್ಲಿ ಮತ್ತೊಂದು ಭೀಕರ ದಾಳಿಗೆ ಸಜ್ಜಾದ ಉಗ್ರರು; ಡ್ರೋನ್​ ದಾಳಿ ಮುಗಿದಿಲ್ಲ, ಯಾರನ್ನೂ ಬಿಡುವುದಿಲ್ಲ ಎಂದ ಅಮೆರಿಕಾ

(BJP government has not fulfilled any of promises in Hubli Dharwad said DK Shivakumar)

Web contact

TV9 Kannada

Read More
Follow Us