ಕೊರೊನಾ 3ನೇ ಅಲೆಯ ಭೀತಿ; ಮುಂಜಾಗ್ರತೆ ವಹಿಸಲು ಗೃಹ ಇಲಾಖೆಯಿಂದ ರಾಜ್ಯಗಳಿಗೆ ಪತ್ರ
ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ. ಆದ್ರೆ ಕೆಲವು ರಾಜ್ಯಗಳ ಜಿಲ್ಲಾ ಪ್ರದೇಶಗಳಲ್ಲಿ ಸೋಂಕು ಹೆಚ್ಚಾಗಿದೆ. ಈ ಹಿನ್ನಲೆ ಕೊರೊನಾ ನಿಯಂತ್ರಣಕ್ಕೆ ಕಾರ್ಯಪ್ರವೃತ್ತರಾಗಬೇಕಿದೆ. ಮುಂಬರುವ ಹಬ್ಬಗಳ ಸಂದರ್ಭದಲ್ಲಿ ರಾಜ್ಯಗಳು ಎಚ್ಚರಿಕೆ ವಹಿಸಬೇಕು. ಜನರು ಸಾರ್ವಜನಿಕವಾಗಿ ಹೆಚ್ಚು ಸೇರದಂತೆ ಕ್ರಮ ವಹಿಸಬೇಕು.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಇದ್ದ ಆತಂಕ ಮತ್ತಷ್ಟು ಹೆಚ್ಚಾಗಿದೆ. ಭಾರತದಲ್ಲಿ ಕೊರೊನಾ 3ನೇ ಅಲೆಯ ಭೀತಿ ಆವರಿಸಿದೆ. 3ನೇ ಅಲೆ ತಡೆಯೋದಕ್ಕೆ ಮುಂಜಾಗ್ರತೆ ಕ್ರಮ ವಹಿಸಬೇಕಿದೆ ಎಂದು ಕೇಂದ್ರ ಗೃಹ ಇಲಾಖೆಯಿಂದ ರಾಜ್ಯಗಳಿಗೆ ಪತ್ರ ಬರೆಯುವ ಮೂಲಕ ಸೂಚನೆ ನೀಡಿದೆ. ಟೆಸ್ಟ್, ಟ್ರೇಸ್, ಟ್ರೀಟ್, ವ್ಯಾಕ್ಸಿನೇಷನ್‌ಗೆ ಆದ್ಯತೆ ನೀಡಲು ಗೃಹ ಇಲಾಖೆ ರಾಜ್ಯಕ್ಕೆ ಸೂಚನೆ ನೀಡಿದೆ.
ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ. ಆದ್ರೆ ಕೆಲವು ರಾಜ್ಯಗಳ ಜಿಲ್ಲಾ ಪ್ರದೇಶಗಳಲ್ಲಿ ಸೋಂಕು ಹೆಚ್ಚಾಗಿದೆ. ಈ ಹಿನ್ನಲೆ ಕೊರೊನಾ ನಿಯಂತ್ರಣಕ್ಕೆ ಕಾರ್ಯಪ್ರವೃತ್ತರಾಗಬೇಕಿದೆ. ಮುಂಬರುವ ಹಬ್ಬಗಳ ಸಂದರ್ಭದಲ್ಲಿ ರಾಜ್ಯಗಳು ಎಚ್ಚರಿಕೆ ವಹಿಸಬೇಕು. ಜನರು ಸಾರ್ವಜನಿಕವಾಗಿ ಹೆಚ್ಚು ಸೇರದಂತೆ ಕ್ರಮ ವಹಿಸಬೇಕು.
ಈಗಾಗಲೇ ಬಿಬಿಎಂಪಿ ನಿತ್ಯ 58,978 ಜನರಿಗೆ ಕೊವಿಡ್ ಟೆಸ್ಟಿಂಗ್ ಮಾಡುತ್ತಿದೆ. ಹೆಚ್ಚು ಹೆಚ್ಚು ಟೆಸ್ಟಿಂಗ್ ಮಾಡಿ ಸೋಂಕಿತರನ್ನ ಪತ್ತೆ ಹಚ್ಚುವ ಕಾರ್ಯ ಚುರುಕುಗೊಳಿಸಿದೆ. ನಿತ್ಯ ಪತ್ತೆಯಾಗುತ್ತಿರುವ 300 ಜನ ಸೋಂಕಿತರ ಪೈಕಿ 20 ಜನ ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ನಿತ್ಯ 30-40 ಜನ ಮಕ್ಕಳಿಗೆ ಸೋಂಕು ಧೃಡವಾಗುತ್ತಿದೆ. ಪತ್ತೆಯಾಗುವ ಸೋಂಕಿತರ ಮನೆ ಮನೆಗೂ ಬಿಬಿಎಂಪಿ ಹೋಗಿ ಆರೋಗ್ಯ ತಪಾಸಣೆ ಮಾಡುತ್ತಿದೆ.
ಮೂರನೇ ಅಲೆಯಲ್ಲಿ ನಿತ್ಯ 10 ಸಾವಿರ ಜನ ಸೋಂಕಿತರು ಪತ್ತೆಯಾಗುವ ನಿರೀಕ್ಷೆ ಇದೆ ಎಂದು ಬಿಬಿಎಂಪಿ ಹಾಗೂ ಜಿಲ್ಲಾಡಳಿತ ಪ್ರಿಡಿಕ್ಷನ್ ಮಾಡಿದೆ. ಪತ್ತೆಯಾಗುವ ಸೋಂಕಿತರ ಪೈಕಿ 1 ಸಾವಿರ ಜನ ಮಕ್ಕಳೇ ಇರುವ ನಿರೀಕ್ಷೆ ಇದೆ. ಸದ್ಯ ಪತ್ತೆಯಾಗುತ್ತಿರುವ ಸೋಂಕಿತರಲ್ಲಿ ಶೇ.12-14 ರಷ್ಟು ಮಕ್ಕಳೇ ಇದ್ದಾರೆ. ಮಕ್ಕಳ ಚಿಕಿತ್ಸೆಗೆ ಬಿಬಿಎಂಪಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.
ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಇನ್ನು ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೊರೊನಾ ಮೂರನೇ ಅಲೆ ಆರಂಭವಾಗಿದೆ. ಗಡಿ ಜಿಲ್ಲೆಗಳ ಚೆಕ್ ಪೋಸ್ಟ್ನಲ್ಲಿ ತಪಾಸಣೆಗೆ ರಾಜ್ಯ ಸರ್ಕಾರ ಆದೇಶ ಮಾಡಿತ್ತು. ಆದ್ರೆ ಸರ್ಕಾರದ ಆದೇಶಕ್ಕೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಕೇರಳಕ್ಕೆ ಸಂಪರ್ಕ ಕಲ್ಪಿಸುವ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಯುತ್ತಿಲ್ಲ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಚೆಕ್ಕಿಂಗ್ ನಡೆಯುತ್ತಿಲ್ಲ. ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲೆಹೊಳೆ ವಲಯ ವ್ಯಾಪ್ತಿಯ ಚೆಕ್ ಪೋಸ್ಟ್ನಲ್ಲಿ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಆರೋಗ್ಯ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಗೈರಾಗಿದ್ದಾರೆ. ಕೇರಳದಿಂದ ಬರುವ ಸುಮಾರು 400ಕ್ಕೂ ಹೆಚ್ಚು ವಾಹನಗಳು ರಾಜ್ಯ ಪ್ರವೇಶ ಮಾಡುತ್ತಿವೆ.
ಇದನ್ನೂ ಓದಿ: 1-8ನೇ ತರಗತಿ ಆರಂಭ ಬಗ್ಗೆ ಆ.30ಕ್ಕೆ ನಿರ್ಧಾರ ಸಾಧ್ಯತೆ; ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ