ಧಾರವಾಡ: ಕೇಂದ್ರ ಲಲಿತಾ ಕಲಾ ಅಕಾಡೆಮಿ ಪ್ರಾದೇಶಿಕ ಕೇಂದ್ರ (Central Lalitha Kala Akademi Regional Centre) ಧಾರವಾಡಕ್ಕೆ ಮಂಜೂರು ಮಾಡಲಾಗಿದ್ದು, ಫೆ. 20ರಂದು ಶಂಕುಸ್ಥಾಪನೆ ನಡೆಯಲಿದೆ. ಧಾರವಾಡದ ಕೋರ್ಟ್ ವೃತ್ತದ ಬಳಿ ಇರುವ ಪಾಲಿಕೆ ಜಾಗವನ್ನು ಲೀಸ್ ಮೇಲೆ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ಗೆ ನೀಡಲಾಗಿತ್ತು. ಸದ್ಯ ಲೀಜ್ ಅವಧಿ ಮುಗಿದ ಹಿನ್ನೆಲೆ ಪ್ರಾದೇಶಿಕ ಕೇಂದ್ರಕ್ಕೆ ಪಾಲಿಕೆ ನೀಡಿದೆ. ಇಂದು (ಫೆ. 16) ಪ್ರಾದೇಶಿಕ ಕೇಂದ್ರದ ನಿಯೋಜಿತ ಸ್ಥಳಕ್ಕೆ ಶಾಸಕ ಅರವಿಂದ ಬೆಲ್ಲದ್ (Aravind Bellad) ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಫೆ. 20ರಂದು ಭೂಮಿ ಪೂಜೆ ನಡೆಯಲಿದೆ. ಕೇಂದ್ರ ಸಂಸ್ಕೃತಿ ಸಚಿವರು ಭೂಮಿ ಪೂಜೆ ನೆರವೇರಿಸಲಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹ ಭಾಗವಹಿಸುತ್ತಾರೆ ಎಂದು ಹೇಳಿದರು.
1950ರ ದಶಕದಲ್ಲಿ ಲಲಿತ ಕಲಾ ಅಕಾಡೆಮಿ ಶುರುವಾಗಿದೆ. ಆದರೆ ಪ್ರಾದೇಶಿಕ ಕೇಂದ್ರ ಚೆನ್ನೈನಲ್ಲಿ ಮಾತ್ರ ಇತ್ತು. ಈಗ ಅಂಥದ್ದೇ ಕೇಂದ್ರ ಪ್ರಲ್ಹಾದ ಜೋಶಿಯವರ ಸಹಕಾರದಿಂದ ಆಗುತ್ತಿದೆ. ಇದರಿಂದ ಈ ಭಾಗದ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ. ಇಡೀ ದೇಶದಲ್ಲಿ ಯಾವ ಪ್ರಾದೇಶಿಕ ಕೇಂದ್ರಕ್ಕೂ ಇಲ್ಲದ ಉತ್ತಮ ಜಾಗ ಇಲ್ಲಿ ಕೊಡಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರ, ಕಲಾವಿದರ ಶಿಬಿರ ನಡೆಯಲಿದೆ. ಅದಕ್ಕೆ ಪೂರಕವಾಗಿ ತಯಾರಿಯ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಅಂಗವೈಕಲ್ಯ ಮೆಟ್ಟಿನಿಂತ ಹುಬ್ಬಳ್ಳಿಯ ಚಿತ್ರಕಲಾ ವಿದ್ಯಾರ್ಥಿಗೆ ಒಲಿದು ಬಂತು ಲಲಿತ ಕಲಾ ಅಕಾಡೆಮಿ ಪ್ರಶಸ್ತಿ!
ಹುಬ್ಬಳ್ಳಿ: ಹುಬ್ಬಳ್ಳಿಯಿಂದ ದೆಹಲಿಗೆ ನೇರ ವಿಮಾನ ಸೇವೆ ಆರಂಭಗೊಂಡ ಬೆನ್ನಲ್ಲೇ, ಇದೀಗ ಹುಬ್ಬಳ್ಳಿಯಿಂದ ಪುಣೆಗೆ ನೇರವಾಗಿ ಸಂಪರ್ಕಿಸುವ ವಿಮಾನಯಾನ ಸೇವೆ ಆರಂಭವಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಕ್ಕೆ ಜಲಫಿರಂಗಿಯ ಮೂಲಕ ಆಕರ್ಷಕ ಸ್ವಾಗತ ನೀಡಲಾಯಿತು. ಮೊದಲ ದಿನವೇ ವಿಮಾನವು ಪ್ರಯಾಣಿಕರಿಂದ ಸಂಪೂರ್ಣ ಭರ್ತಿಯಾಗುವ ಮೂಲಕ ಈ ಸೇವೆಯು ಜನರಿಗೆ ಅನುಕೂಲಕರವಾಗಿದೆ ಎಂಬುದನ್ನ ತೋರ್ಪಡಿಸುವಂತಿತ್ತು.
ಇದನ್ನೂ ಓದಿ: Special Train: ಕೊಟ್ಟೂರು ರಥೋತ್ಸವಕ್ಕಾಗಿ ವಿಶೇಷ ರೈಲು ವ್ಯವಸ್ಥೆ; ವಿವರ ಇಲ್ಲಿದೆ
ಹುಬ್ಬಳ್ಳಿ ಧಾರವಾಡ ಅವಳಿ ನಗರ ಹಾಗೂ ಇಡೀ ಉತ್ತರ ಕರ್ನಾಟಕ ಭಾಗದ ಜನರಿಗೆ ನೇರ ವಿಮಾನ ಸೇವೆ ಸಹಕಾರಿಯಾಗಲಿದ್ದು, ಜನರು ಇದರ ಲಾಭ ಪಡೆಯುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಹುಬ್ಬಳ್ಳಿ ಹಾಗು ದೆಹಲಿಗೆ ನೇರ ವಿಮಾನ ಸೇವೆ ಒದಗಿಸಿದ ಬೆನ್ನಲ್ಲೆ ಹುಬ್ಬಳ್ಳಿಯಿಂದ ಪುಣೆಗೂ ನೇರ ವಿಮಾನ ಸೇವೆ ಒದಗಿಸುವ ಕುರಿತಂತೆ ಈ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಮಾನಯಾನ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.