ಚಂದ್ರಶೇಖರ್ ಗುರೂಜಿ ಕೊಲೆ ಪ್ರಕರಣ: ಹಂತಕ ಮಹಾಂತೇಶ ಗುರೂಜಿ ಆಪ್ತನಾಗಿದ್ದೆ ಒಂದು ರೋಚಕ!

| Updated By: ಗಂಗಾಧರ​ ಬ. ಸಾಬೋಜಿ

Updated on: Jul 06, 2022 | 9:37 AM

9 ಗಂಟೆಯ ನಂತರ ಕಿಮ್ಸ್​​ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಿದ್ದು, ಬೆಳಗ್ಗೆ 10ಗಂಟೆಗೆ ನಗರದ ಶಿವಪ್ರಭು ಲೇಔಟ್​ನಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಚಂದ್ರಶೇಖರ್ ಗುರೂಜಿ ಕೊಲೆ ಪ್ರಕರಣ: ಹಂತಕ ಮಹಾಂತೇಶ ಗುರೂಜಿ ಆಪ್ತನಾಗಿದ್ದೆ ಒಂದು ರೋಚಕ!
ಚಂದ್ರಶೇಖರ್ ಗೂರೂಜಿ, ಹಂತಕ ಮಹಾಂತೇಶ
Follow us on

ಹುಬ್ಬಳ್ಳಿ: ಗ್ರಾಮೀಣ ಪ್ರದೇಶದಿಂದ ಹೋಗಿದ್ದ ಮಹಾಂತೇಶ (Mahatesh) ಗುರೂಜಿ (Chandrasekhar Guruji) ಆಪ್ತನಾಗಿದ್ದೆ ಒಂದು ರೋಚಕ. ಸಿಜೆ ಪರಿವಾರದ ಪ್ರತಿನಿಧಿಯಾಗಿ ಹಂತಕ ಎಂಟಿ ಕೊಟ್ಟಿದ್ದು, ಕಂಪನಿಯ ನ್ಯಾಷನಲ್ ಲೀಡರ್ ಆಗಿದ್ದ. ಸರಳವಾಸ್ತು ಕಂಪನಿಯಲ್ಲಿ ಹಂತಕ ಹಂತ ಹಂತವಾಗಿ ಬೆಳದ ಕಹಾನಿಯೇ ರೋಚಕ. ಕೇವಲ ಮೂರ್ನಾಲ್ಕು ವರ್ಷಗಳಲ್ಲೇ ಗುರೂಜಿಯ ಆಪ್ತ ಸಹಾಯಕನಾಗಿದ್ದ‌. ಅಲ್ಲಿಂದ ತಿರುಗಿ ನೋಡಿದ್ದೆ ಇಲ್ಲ. ಗುರೂಜಿಯ ಹೆಚ್ಚು ಕಮ್ಮಿ ಎಲ್ಲಾ ವ್ಯವಹಾರವನ್ನ ಮಹಾಂತೇಶ ನೋಡಿಕೊಳುತ್ತಿದ್ದ. ಸುಮಾರು ವರ್ಷಗಳ ಕಾಲ ಮುಂಬೈನಲ್ಲೇ ಕೆಲಸ ಮಾಡಿದ್ದ. ಹೀಗಾಗೇ ನೂರಾರು ಕೋಟಿ ಆಸ್ತಿ ಮಹಾಂತೇಶ ಹಾಗೂ ಆತನ ಆಪ್ತರ ಹೆಸರಿಗಿತ್ತಂತೆ. ಸಿಜೆ ಪರಿವಾರದ ಪ್ರತಿನಿಧಿ ಕೋಟ್ಯಧೀಶನಾಗಿದ್ದೆ ಸ್ವಾಮೀಜಿಯಿಂದ. ಪತ್ನಿ ಹುಬ್ಬಳ್ಳಿಯಲ್ಲಿದ್ದರೆ ಪತಿ ಮುಂಬಯಿನಲ್ಲಿ. ಹೀಗಾಗೇ ಮಹಾಂತೇಶ ಕೆಲಸ ಬಿಟ್ಟಿದ್ದ. ಅದಾದ ಬಳಿಕ ಆಸ್ತಿ ಪರಭಾರೆ ಗಲಾಟೆ ಶುರುವಾಗಿದ್ದು, ಇತ್ತಿಚಿಗಷ್ಟೇ ಐದು ಕೋಟಿಗೆ ಒಂದು ಆಸ್ತಿಯನ್ನ ಮಾರಿದ್ದರು. ಎಲ್ಲವನ್ನೂ ವಾಪಸ್ ನೀಡುವಂತೆ ಸ್ವಾಮೀಜಿ ಒತ್ತಡ ಹಾಕಿದ್ದರು. ಕಳೆದ ಹಲವಾರು ತಿಂಗಳುಗಳಿಂದ ನಿರತಂರ ಒತ್ತಡ ಹೇರ್ತಿದ್ದ ಸ್ವಾಮೀಜಿ, ಅದಕ್ಕಾಗಿ ಮಹಾಂತೇಶ ರೋಸಿ ಹೋಗಿದ್ದ. ಸ್ವಾಮೀಜಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದೀನಿ ಆಸ್ತಿ ಯಾಕೆ ಕೊಡಬೇಕು ಎಂದು ಹಂತಕ ತಗಾದೆ ತೆಗೆದಿದ್ದ.

ಚಂದ್ರಶೇಖರ್ ಗೂರೂಜಿ ಹತ್ಯೆಯ ಏಫ್​ಐಆರ್​​ನಲ್ಲಿ ಏನಿದೆ?

ಚಂದ್ರಶೇಖರ್​ ಸಹೋದರ ಸಂಜಯ್​ ಅಂಗಡಿ ಇಂದ ಪೊಲೀಸರಿಗೆ ದೂರು ನೀಡಿದ್ದು, ಸಂಜಯ್​ ಅಂಗಡಿ ದೂರಿನ ಮೇಲೆ  ಹುಬ್ಬಳ್ಳಿ ವಿದ್ಯಾನಗರ ಪೊಲೀಸರು ಎಫ್​​ಐಆರ್​ ದಾಖಲಿಸಿದ್ದಾರೆ. 2008ರಿಂದ ಮಹಾಂತೇಶ ಶಿರೂರು ಗುರೂಜಿ ಹತ್ತಿರ ಕೆಲಸಕ್ಕೆ ಆರೋಪಿ ಸೇರಿದ್ದ. 2015ರಲ್ಲಿ ಮಹಾಂತೇಶ್ ಶಿರೂರನನ್ನು ಮುಂಬೈಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಕಂಪನಿಗೆ ನೇಮಕಗೊಂಡಿದ್ದ. ಕಂಪನಿಗೆ ಬರುತ್ತಿದ್ದ ಜನರ ಹತ್ತಿರ ಹಣವನ್ನು ಮಹಾಂತೇಶ್ ಪಡೆಯುತ್ತಿದ್ದ ಆರೋಪ ಕೇಳಿಬರುತ್ತದೆ. ಮಹಾಂತೇಶ್ ಜೊತೆಗೆ 20-25 ಜನರು ಶಾಮೀಲಾಗಿದ್ದರು. ಈ ಬಗ್ಗೆ ಎಮ್.ಡಿ.ಯವರಿಗೆ ಹಾಗೂ ಫಿರ್ಯಾದಿದಾರರಿಗೆ ವಿಷಯ ಗೊತ್ತಾಗಿ ಕೆಲಸದಿಂದ ತೆಗೆದು ಹಾಕುತ್ತಾರೆ. ಇದೆ ಸಿಟ್ಟಿನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಹಾಂತೇಶ ಶಿರೂರ ಈತನು ಹುಬ್ಬಳ್ಳಿಯ ಗೋಕುಲ ರೋಡ್ ನ ಜೆ.ಪಿ.ನಗರದಲ್ಲಿ ಹತ್ಯೆ ಮಾಡಿದ್ದಾರೆ ಎಂದು ಧಾರವಾಡ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ; ಬೆಂಗಳೂರಿನಲ್ಲಿ 18 ವರ್ಷಕ್ಕಿಂತ ಕೆಳ ವಯಸ್ಸಿನವರಲ್ಲಿಯೇ ಡೆಂಘೀ ಜ್ವರ ಪತ್ತೆ! ಮುಂಜಾಗ್ರತಾ ಕ್ರಮಗಳು ಇಲ್ಲಿವೆ

ನ್ಯಾಯಾಲಯದ ಪ್ರಕರಣವನ್ನು ಹಿಂದೆ ಪಡೆಯಲು ಹಣ ಕೇಳುತ್ತಿದ್ದರು. ಹಣ ಕೊಡದೇ ಇದ್ದಾಗ ಚಂದ್ರಶೇಖರ್ ಗೂರೂಜಿಗೆ ಧಮಕಿ ಹಾಕುತ್ತಿದ್ದರು. ಅಲ್ಲದೇ ಕೆಲಸದಿಂದ ತೆಗೆದು ಹಾಕಿ ಹಾಕಿದ್ದು, ನ್ಯಾಯಾಲಯದ ಪ್ರಕರಣಕ್ಕೆ ಹಣ ಕೊಟ್ಟಿಲ್ಲ ಎಂದು ಮಹಾಂತೇಶ್ ಹಾಗೂ ಮಂಜುನಾಥ್ ಮರೆವಾಡ ಇಬ್ಬರು ಹತ್ಯೆ ಮಾಡಿದ್ದಾರೆ. ಹುಬ್ಬಳ್ಳಿಯ ಹೋಟೆಲ್​​ನಲ್ಲಿ ಚಂದ್ರಶೇಖರ್​ ಹಾಗೂ ಹೆಂಡತಿ ಅಂಕಿತಾ ಇಬ್ಬರು ಉಳಿದುಕೊಂಡಿರುವ ಹೋಟೆಲ್​​ಗೆ ಹೋಗಿ ಆರೋಪಿಗಳು ಹತ್ಯೆ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.

ಹಂತಕ ಮಹಾಂತೇಶ ಬಗ್ಗೆ ಅಚ್ಚರಿಯ ಸಂಗತಿ ಬಯಲು:

ಹಂತಕ ಮಹಾಂತೇಶ ಬಗ್ಗೆ ಅಚ್ಚರಿಯ ಸಂಗತಿಗಳು ಬಯಲಿಗೆ ಬಂದಿದ್ದು, ಮಹಾಂತೇಶ ಮತ್ತು ವನಜಾಕ್ಷಿ ಪ್ರೀತಿಸಿ ಮದುವೆಯಾಗಿದ್ದರು. ಗುರೂಜಿ ಬಳಿಯೇ ಕೆಲಸಕ್ಕಿದ್ದ ಮಹಾಂತೇಶ-ವನಜಾಕ್ಷಿ, ಮೊದಲಿಗೆ ವನಜಾಕ್ಷಿ ಕೆಲಸಕ್ಕೆ ಸೇರಿದ್ದು,  ಬಳಿಕ ಮಹಾಂತೇಶ ಕೆಲಸಕ್ಕೆ ಸೇರಿದ್ದ. ಅಲ್ಲಿಯೇ ಇಬ್ಬರ ಮಧ್ಯೆ ಪ್ರೇಮ ಶುರುವಾಗಿದೆ. ಮನೆಯವರಿಗೂ ಗೊತ್ತಿಲ್ಲದೇ ಇಬ್ಬರಿಗೂ ಗುರೂಜಿ ಮದುವೆ ಮಾಡಿಸಿದ್ದರು. ಅಷ್ಟೊಂದು ಗುರೂಜಿಯನ್ನು ಹಚ್ಚಿಕೊಂಡಿದ್ದ ಜೋಡಿ, ಮನೆಯವರಿಗೆ ಹೇಳದೇ ಮಹಾಂತೇಶ ಮದುವೆ ಮಾಡಿಕೊಂಡಿದ್ದ. ಹುಬ್ಬಳ್ಳಿಯ ಜೆ.ಪಿ. ನಗರದಲ್ಲಿ ಗುರೂಜಿಯಿಂದ ಅಪಾರ್ಟ್ಮೆಂಟ್ ನಿರ್ಮಾಣ ಮಾಡಿದ್ದು, ದಂಪತಿ ಸಾಲ‌ ಮಾಡಿ ಅದರಲ್ಲಿ 306 ನಂಬರಿನ ಫ್ಲ್ಯಾಟ್​ ಖರೀದಿ ಮಾಡಿದ್ದಾರೆ. ನಾಲ್ಕು ವರ್ಷಗಳಿಂದ ಗುರೂಜಿ ಜೊತೆ ಹಳಸಿದ ಸಂಬಂಧ ಹೊಂದಿದ್ದರು. ಇದೀಗ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರೋ ಮಹಾಂತೇಶ, ಎರಡು ಹೆಣ್ಣು ಮಕ್ಕಳೊಂದಿಗೆ ಹುಬ್ಬಳ್ಳಿಯ ಫ್ಲ್ಯಾಟ್​ನಲ್ಲಿಯೇ ಸಂಸಾರ ಮಾಡುತ್ತಿದ್ದಾನೆ.

ಪೊಲೀಸರಿಂದ ಹಂತರಿಗೆ ಡ್ರಿಲ್:

ನಿನ್ನೆ ರಾತ್ರಿಯಿಂದ ಪೊಲೀಸರು ಹಂತಕರಿಗೆ ಡ್ರಿಲ್ ಮಾಡಿದ್ದು, ಸಿಸಿಬಿ ಎಸಿಪಿ. ಎಸಪಿ ಉತ್ತರ ಉಪವಿಭಾಗ ಹಾಗೂ ಮೂವರ ಇನ್ಸ್ಪೆಕ್ಟರ್​ಗಳಿಂದ ವಿಚಾರಣೆ ಮಾಡಿದ್ದಾರೆ. ವಿಚಾರಣೆ ವೇಳೆ ಗುರೂಜಿಯನ್ನ ಕೊಲೆ ಮಾಡಿದ್ದಾಗಿ ಹಂತಕರು ಒಪ್ಪಿಕೊಂಡಿದ್ದಾರೆ. ಬೇನಾಮಿ ಆಸ್ತಿಗೋಸ್ಕರ ಕೊಲೆ‌ ಮಾಡಿದ್ದೇವೆ ಎಂದು ಹಂತಕರು ಎನ್ನುತ್ತಿದ್ದಾರೆ. ಎಷ್ಟು ಪ್ರಮಾಣದ ಆಸ್ತಿ, ಎಲ್ಲಿಯ ಆಸ್ತಿ, ಯಾರ ಹೆಸರಲ್ಲಿರೋ ಎಲ್ಲದರ ಬಗ್ಗೆ ಫಿನ್ ಟು ಫಿನ್ ಮಾಹಿತಿ ಖಾಕಿ ಪಡೆ ಕೆದಕುತ್ತಿದೆ. ಗುರೂಜಿ ಹತ್ಯೆಯ ಹಿಂದಿನ ಅಸಲಿಯತ್ತನ್ನ ಖಾಕಿ ಬಯಲು ಮಾಡುತ್ತಿದೆ.

ಗುರೂಜಿ ಅಂತ್ಯಕ್ರಿಯೆ: 

9 ಗಂಟೆಯ ನಂತರ ಕಿಮ್ಸ್​​ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಿದ್ದು, ಬೆಳಗ್ಗೆ 10ಗಂಟೆಗೆ ನಗರದ ಶಿವಪ್ರಭು ಲೇಔಟ್​ನಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಸುಳ್ಳಾ ರಸ್ತೆಯ ಜಮೀನಿನಲ್ಲಿ ಗುರೂಜಿ ಅಂತ್ಯಕ್ರಿಯೆ ನಡೆಯಲಿದೆ. 15 ದಿನದ ಹಿಂದೆಯಷ್ಟೇ 2ನೇ ಪತ್ನಿಯ ಊರಾದ ಶಿವಮೊಗ್ಗ ಜಿಲ್ಲೆ ಹೆಮ್ಮಕ್ಕಿಯಲ್ಲಿ ಜ್ವರ ಹಿನ್ನೆಲೆ ಒಂದು ವಾರ ಗ್ರಾಮದಲ್ಲಿ ತಂಗಿದ್ದರು.

ಇದನ್ನೂ ಓದಿ: LPG Gas Cylinder Price: ಗೃಹಬಳಕೆ ಸಿಲಿಂಡರ್ ಬೆಲೆ 50 ರೂಪಾಯಿ ಏರಿಕೆ

Published On - 9:36 am, Wed, 6 July 22