ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯನ್ನು (Chandrashekhar Guruji Murder) ಚಾಕುವಿನಿಂದ ಇರಿದು ಮಂಗಳವಾರ (ಜುಲೈ 5) ಹತ್ಯೆ ಮಾಡಲಾಗಿದೆ. ನಗರದ ಖಾಸಗಿ ಹೊಟೆಲ್ನಲ್ಲಿ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಪ್ರಕರಣ ಹಿನ್ನಲೆ ಗುರೂಜಿಯ ಆಪ್ತ ಮಹಾಂತೇಶ ಶಿರೋಳ್ ಪತ್ನಿ ವನಜಾಕ್ಷಿಯನ್ನು ಗೋಕುಲ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವನಜಾಕ್ಷಿಯನ್ನು ನಿನ್ನೆ ಸತತ ನಾಲ್ಕು ಗಂಟೆಗಳ ಕಾಲ ಖಾಕಿ ಡ್ರಿಲ್ ನಡೆಸಿದ್ದು, ಟಿರ್ವಿ ವನಜಾಕ್ಷಿ ವಿಚಾರಣೆಯ ಫಿನ್ ಟು ಫಿನ್ ಮಾಹಿತಿಯನ್ನ ಬಯಲು ಮಾಡುತ್ತಿದೆ. ಹಂತಕ ಮಹಾಂತೇಶ್ ಪತ್ನಿ ವನಜಾಕ್ಷಿ, ಗುರೂಜಿಗೂ ತನಗಿರೋ ಸಂಬಂಧವೇನು ಇಲ್ಲ. ತನ್ನ ಪತಿ ಹೆಸರಿನಲ್ಲಿ ಆಸ್ತಿ ಪಾಸ್ತಿ ಮಾಡಿದ್ದು ನಿಜ. 2008ರಿಂದ ತನ್ನ ಪತಿ ಗುರೂಜಿ ಬಳಿ ಕೆಲಸಕ್ಕಿದ್ದ. ಪತಿ ಮುಖಾಂತರರವೇ ತಾನು ಕೆಲಸಕ್ಕೆ ಸೇರಿದ್ದ. ಹುಬ್ಬಳ್ಳಿಯ ಯಾವ ಅಪಾಟ್೯ ಮೆಂಟ್ ಕೂಡಾ ತನ್ನ ಹೆಸರಿನಲಿಲ್ಲ. ಬದಲಿಗೆ ಒಂದಿಷ್ಟು ಸೈಟ್ ಇರೋದು ನಿಜ. ಅದೆಲ್ಲವೋ ಪತಿ ಮಹಾಂತೇಶಗೆ ಗೊತ್ತು. ಈ ಹತ್ಯೆಗೂ ತನಗು ಯಾವುದೇ ಸಂಬಂಧವಿಲ್ಲ ಎಂದು ವನಜಾಕ್ಷಿ ಹೇಳುತ್ತಿದ್ದಾರೆ. ಸರಳವಾಸ್ತುವಿನಲ್ಲಿ ಮೂರು ವರ್ಷ ಕೆಲಸ ಮಾಡಿದ್ದೆ. ಗಂಡ ಸರಳವಾಸ್ತು ನ್ಯಾಷನಲ್ ಲೀಡರ್ ಆಗಿದ್ದರು. ಗುರೂಜಿ-ಮಹಾಂತೇಶ ನಡುವಿನ ವ್ಯವಹಾರ ಗೊತ್ತಿಲ್ಲ. ಆದರೆ ಕುಟುಂದ ಜೊತೆ ಬೇನಾಮಿ ಆಸ್ತಿ ವವ್ಯಹಾರ ಇರೋದನ್ನ ವನಜಾಕ್ಷಿ ಒಪ್ಪಿಕೊಂಡಿದ್ದಾರೆ.
ಕೊಲೆ ಮಾಡಿದ್ದು ನನ್ನ ಪತಿ ಮಹಾಂತೇಶ: ವನಜಾಕ್ಷಿ
ಗುರೂಜಿಯನ್ನ ನನ್ನ ಗಂಡನೇ ಕೊಲೆ ಮಾಡಿದ್ದಾನೆ. ಆತ ಮಾಡಿದ್ದು ತಪ್ಪು, ಗುರೂಜಿ ಬಹಳ ಒಳ್ಳೆಯವರು ಎಂದು ಟಿರ್ವಿಗೆ ಹಂತಕ ಮಹಾಂತೇಶ ಪತ್ನಿ ವನಜಾಕ್ಷಿ ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿದ್ದಾರೆ. ನಮಗೂ ಸ್ವಾಮಿಜಿಗೂ ಯಾವುದೆ ಹಣಕಾಸಿನ ವಿಚಾರದಲ್ಲಿ ಗಲಾಟೆಯಿಲ್ಲ. ಕೊಲೆ ಮಾಡಿದ್ದು, ನನ್ನ ಪತಿ ಮಾಂತೇಶ. ಕೊಲೆಗೆ ಕಾರಣ ಏನೂ ಅನ್ನೋದು ಗೊತ್ತಿಲ್ಲ. ಅಪಾರ್ಟ್ಮೆಂಟ್ ನನ್ನ ಹೆಸರಲ್ಲಿದೆ ಎನ್ನುವುದು ಸುಳ್ಳು. ಬ್ಯಾಂಕ್ನಲ್ಲಿ ಸಾಲ ಮಾಡಿ ಪ್ಲ್ಯಾಟ್ ಖರೀದಿ ಮಾಡಲಾಗಿದೆ. ನಾನು 2005ರಲ್ಲಿ ಸರಳ ಜೀವನ ಸಂಸ್ಥೆ ಸೇರಿಕೊಂಡಿದ್ದು, 2019 ರಲ್ಲಿ ಮುಂಬೈಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ರಿಸೈನ್ ಮಾಡಿದ್ದೆ. ನನ್ನ ಪತಿ ಕೂಡಾ 2016 ರಲ್ಲಿ ರಿಸೈನ್ ಮಾಡಿದ್ರು. ಯಾವ ಕಾರಣಕ್ಕೆ ಎನ್ನುವುದು ಗೊತ್ತಿಲ್ಲ. ಪತಿ ಹೆಸರಿನಲ್ಲಿ ಆಸ್ತಿ ಪಾಸ್ತಿ ಮಾಡಿದ್ದು ನಂಗೆ ಗೊತ್ತಿಲ್ಲ. ಯಾವ ಉದ್ದೇಶಕ್ಕೆ ಕೊಲೆ ಮಾಡಿದ್ದಾರೆ, ಅದರ ಹಿಂದೆ ಯಾರಿದ್ದಾರೆ ಎನ್ನೋದು ಗೊತ್ತಿಲ್ಲ. ನಾಲ್ಕೈದು ದಿನಗಳ ಪತಿ ಮನೆಗೆ ಬಂದಿರಲಿಲ್ಲ. ಪೋನ್ ಮಾಡಿ ಕೆಲದಲ್ಲಿದ್ದೆನೆ ಎನ್ನುತ್ತಿದ್ದರು. ಆದರೆ ಟಿರ್ವಿಯಲ್ಲಿ ನೋಡಿ ನಂಗೆ ಗೊತ್ತಾಯಿತು.
ಬೇನಾಮಿ ಆಸ್ತಿಗಾಗಿ ನಡೆಯಿತಾ ಕೊಲೆ?
ಗುರೂಜಿಯ ಬರ್ಬರ ಕೊಲೆ ಬೇನಾಮಿ ಆಸ್ತಿಗಾಗಿ ನಡೆಯಿತಾ ಎಂದು ಅನುಮಾನ ವ್ಯಕ್ತವಾಗಿದೆ. ಆರೋಪಿ ವನಜಾಕ್ಷಿ ಸರಳವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿಯಾಗಿದ್ದು, 2019ರವರೆಗೆ ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಗುರೂಜಿ ವನಜಾಕ್ಷಿ ಹೆಸರಿಗೆ ಗೋಕುಲ ರಸ್ತೆ ಬಳಿಯ ಅಪಾರ್ಟ್‌ಮೆಂಟ್ ಮತ್ತು ಹಲವು ಆಸ್ತಿಗಳನ್ನು ನೋಂದಣಿ ಮಾಡಿಸಿದ್ದರು. ಬಳಿಕ ಆಸ್ತಿ ವಾಪಸ್ ಕೇಳಿದಾಗ ಗಲಾಟೆ ಆರಂಭವಾಗಿತ್ತು. ಆಸ್ತಿ ಜೊತೆಗೆ ಹಣಕಾಸಿನ ವಿಚಾರವಾಗಿಯೂ ಆಗಾಗ ಗಲಾಟೆ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಚಂದ್ರಶೇಖರ್ ಗುರೂಜಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಆರೋಪಿಗಳು ಅರೆಸ್ಟ್:
ಗುರೂಜಿ ಕೊಲೆಯಾದ 4 ಗಂಟೆಯಲ್ಲೇ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಅರೆಸ್ಟ್ ಮಾಡಿದ್ದಾರೆ. ಹುಬ್ಬಳ್ಳಿ, ರಾಮದುರ್ಗ ಪೊಲೀಸರಿಂದ ಜಂಟಿ ಕಾರ್ಯಾಚರಣೆ ನಡೆಸಿ ಮಹಾಂತೇಶ ಶಿರೂರು, ಮಂಜುನಾಥ ದುಮ್ಮವಾಡ ಬಂಧಿಸಿದ್ದಾರೆ. ಆರೋಪಿಗಳಾದ ಮಹಾಂತೇಶ, ಮಂಜುನಾಥ್ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಆರೋಪಿಗಳಿಬ್ಬರೂ ಚಂದ್ರಶೇಖರ ಗುರೂಜಿಗೆ ಆಪ್ತರಾಗಿದ್ದರು. ಸರಳವಾಸ್ತು ಸಂಸ್ಥೆಯಲ್ಲಿ ಗುರೂಜಿ ಜತೆ ಕೆಲಸ ಮಾಡ್ತಿದ್ದರು. 2013ರಿಂದ 2019ರವರೆಗೆ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ಆರೋಪಿ ಮಹಾಂತೇಶ್ ಗುರೂಜಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ. ಹಾಗೂ ಗುರೂಜಿಯ ಖಾಸಗಿ ವ್ಯವಹಾರ ನೋಡಿಕೊಳ್ತಿದ್ದ.
4 ವರ್ಷದ ಹಿಂದೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಆಗಾಗ ಗಲಾಟೆ ಆಗ್ತಿತ್ತು. ಅಲ್ಲದೆ ಗುರೂಜಿ ಮೇಲಿನ ದ್ವೇಷದಿಂದ ಸಾಮಾಜಿಕ ಜಾಲತಾಣದಲ್ಲಿ ಅವಹೇಳಕಾರಿ ಪೋಸ್ಟ್ ಹಾಕ್ತಿದ್ದ. ಸರಳವಾಸ್ತು ಸಂಸ್ಥೆಯಲ್ಲಿ ಮಹಾಂತೇಶ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ 25 ಉದ್ಯೋಗಿಗಳನ್ನು ಕೆಲ್ಸದಿಂದ ತೆಗೆದಿದ್ದಕ್ಕೆ ಮತ್ತಷ್ಟು ಮುನಿಸಿತ್ತು. ಎಲ್ಲಾ ಉದ್ಯೋಗಿಗಳು ಮಹಾಂತೇಶ ನೇತೃತ್ವದಲ್ಲಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದವು. ಸಂಧಾನ ಹೆಸರಲ್ಲಿ ಆಗಾಗ ಬಂದು ಮಹಾಂತೇಶ ಹಣ ಪಡೆದು ತೆರಳುತ್ತಿದ್ದ. ಈ ಬಾರಿಯೂ ಆರೋಪಿಗಳು ಕೋರ್ಟ್ ಕೇಸ್ ಸಂಧಾನಕ್ಕಾಗಿ ಹುಬ್ಬಳ್ಳಿಗೆ ಬಂದಿದ್ದರು.
Published On - 7:32 am, Wed, 6 July 22