ಧಾರವಾಡದಲ್ಲಿ ಚನ್ನಬಸವೇಶ್ವರರ ಕಂಚಿನ ಪುತ್ಥಳಿ ಅನಾವರಣ, ಇಡೀ ಲೋಕಕ್ಕೆ ಬೆಳಕು ಕೊಡುವ ಶಕ್ತಿ ಧಾರವಾಡದಲ್ಲಿ ಇದೆ ಎಂದ ಸಿಎಂ ಬೊಮ್ಮಾಯಿ

ಹುಬ್ಬಳ್ಳಿಯ ಗೋಕುಲ್ ಗ್ರಾಮದಲ್ಲಿರುವ ಹನುಮಾನ್‌ ದೇಗುಲಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿದ್ದಾರೆ. ಹನುಮಾನ್‌ ದೇಗುಲದ ಜಾತ್ರೆ ಹಿನ್ನೆಲೆಯಲ್ಲಿ ಸಿಎಂ ಭೇಟಿ ನೀಡಿದ್ದು ಈ ವೇಳೆ ಗ್ರಾಮದ ಹಿರಿಯರು ಹಾಗೂ ಬಾಲ್ಯ ಜೀವನ, ತಮ್ಮ ಓಡನಾಡಿಗಳ ಜತೆಗಿನ ಸ್ನೇಹವನ್ನು ಸಿಎಂ ಬೊಮ್ಮಾಯಿ ನೆನಪಿಸಿಕೊಂಡ್ರು.

ಧಾರವಾಡದಲ್ಲಿ ಚನ್ನಬಸವೇಶ್ವರರ ಕಂಚಿನ ಪುತ್ಥಳಿ ಅನಾವರಣ, ಇಡೀ ಲೋಕಕ್ಕೆ ಬೆಳಕು ಕೊಡುವ ಶಕ್ತಿ ಧಾರವಾಡದಲ್ಲಿ ಇದೆ ಎಂದ ಸಿಎಂ ಬೊಮ್ಮಾಯಿ
ಧಾರವಾಡದಲ್ಲಿ ಚನ್ನಬಸವೇಶ್ವರರ ಕಂಚಿನ ಪುತ್ಥಳಿ ಅನಾವರಣ
Follow us
TV9 Web
| Updated By: ಆಯೇಷಾ ಬಾನು

Updated on: May 15, 2022 | 3:46 PM

ಧಾರವಾಡ: ಜಿಲ್ಲೆಯ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ನಿರ್ಮಿಸಿರುವ ಚನ್ನಬಸವೇಶ್ವರರ ಕಂಚಿನ ಪುತ್ಥಳಿಯನ್ನು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai)  ಅನಾವರಣಗೊಳಿಸಿದ್ದಾರೆ. ಉಳವಿ ಬಸವೇಶ್ವರ ಧರ್ಮ ಸಂಸ್ಥೆಯಿಂದ ಈ ಪುತ್ಥಳಿ ನಿರ್ಮಿಸಿಲಾಗಿದ್ದು ಸಿಎಂ ಇಂದು ಅನಾವರಣಗೊಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಹಾಲಪ್ಪ ಆಚಾರ್, ಶಾಸಕರಾದ ಅರವಿಂದ ಬೆಲ್ಲದ್, ಅಮೃತ ದೇಸಾಯಿ ಉಪಸ್ಥಿತರಿದ್ದರು.

ಇನ್ನು ಹುಬ್ಬಳ್ಳಿಯ ಗೋಕುಲ್ ಗ್ರಾಮದಲ್ಲಿರುವ ಹನುಮಾನ್‌ ದೇಗುಲಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿದ್ದಾರೆ. ಹನುಮಾನ್‌ ದೇಗುಲದ ಜಾತ್ರೆ ಹಿನ್ನೆಲೆಯಲ್ಲಿ ಸಿಎಂ ಭೇಟಿ ನೀಡಿದ್ದು ಈ ವೇಳೆ ಗ್ರಾಮದ ಹಿರಿಯರು ಹಾಗೂ ಬಾಲ್ಯ ಜೀವನ, ತಮ್ಮ ಓಡನಾಡಿಗಳ ಜತೆಗಿನ ಸ್ನೇಹವನ್ನು ಸಿಎಂ ಬೊಮ್ಮಾಯಿ ನೆನಪಿಸಿಕೊಂಡ್ರು.

ದೇವಸ್ಥಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ಮೊದಲು ಒಂದು ಕಾಲವಿತ್ತು, ಹಣ ಇದ್ದವರು ದೇಶ ಆಳುತ್ತಿದ್ದರು. ಈಗ ಯಾರ ಬಳಿ ವಿದ್ಯೆ ಇರುತ್ತದೆ ಅವರು ದೇಶವನ್ನು ಆಳುತ್ತಾರೆ. ಎಲ್ಲರೂ ತಮ್ಮ ಮಕ್ಕಳಿಗೆ ವಿದ್ಯೆಯನ್ನು ನೀಡುವಂತೆ ಸಿಎಂ ಮನವಿ ಮಾಡಿದ್ರು. ಹನಮಂತ ಹುಟ್ಟಿದ್ದು ನಮ್ಮ ರಾಜ್ಯದಲ್ಲಿ, ಆಂಜನೇಯ ಕನ್ನಡನಾಡಿನ ಪುತ್ರ. ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಹನುಮಂತ ಜನಿಸಿದ್ದಾನೆ. ಅಂಜನಾದ್ರಿ ಬೆಟ್ಟ ಅಭಿವೃದ್ಧಿ ಮಾಡಲು ನಮ್ಮ ಸರ್ಕಾರ ಸಿದ್ಧವಿದೆ. ಇದಕ್ಕಾಗಿ ಬಜೆಟ್ನಲ್ಲಿ 100 ಕೋಟಿ ರೂ. ಮೀಸಲು ಇಟ್ಟಿದ್ದೇವೆ. ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳುವೆ. ಧಾರಾವತಿ ದೇವಸ್ಥಾನದ ಅಭಿವೃದ್ಧಿ ಮಾಡುತ್ತೇವೆ ಎಂದರು.

ಇಡೀ ಲೋಕಕ್ಕೆ ಬೆಳಕು ಕೊಡುವ ಶಕ್ತಿ ಧಾರವಾಡದಲ್ಲಿ ಇದೆ. ಇತಿಹಾಸ ತೆರೆದು ನೋಡಿದರೆ ಅಂಥದ್ದೊಂದು ಪರಂಪರೆ ಇದೆ. ಕಲೆ, ಸಾಹಿತ್ಯ, ವಿದ್ಯೆ, ಸಂಗೀತ ಎಲ್ಲವನ್ನೂ ಈ ನೆಲ ಹೊಂದಿದೆ. ಸಂಗೀತ & ಸಾಹಿತ್ಯ ಒಂದೇ ಕಡೆ ಇರುವುದಿಲ್ಲ. ಅದು ಧಾರವಾಡದಲ್ಲಿ ಮಾತ್ರ ಇದೆ. ಇಲ್ಲಿಂದಲೇ ಅನೇಕ ಸಾಹಿತಿ, ಸಂಗೀತಗಾರರು ಪ್ರಸಿದ್ಧರಾಗಿದ್ದಾರೆ. ಅದು ಧಾರವಾಡದ ಮಣ್ಣಿನ ಗುಣಧರ್ಮ.

ಜಗಜ್ಯೋತಿ ಬಸವಣ್ಣನವರ ವಿಚಾರಗಳು ಸರ್ವಕಾಲಕ್ಕೂ ಸತ್ಯ. ಬಸವ ಪರಂಪರೆಯಲ್ಲಿದ್ದವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಚನ್ನಬಸವೇಶ್ವರರು ಇತರರಿಗಿಂತ ಒಂದು ಹೆಜ್ಜೆ ಮುಂದೆ ಇದ್ದರು. ಕಟು ಸತ್ಯಗಳನ್ನು ಚನ್ನಬಸವಣ್ಣನವರು ಹೇಳಿದ್ದಾರೆ. ಬಸವಣ್ಣನವರು ಇನ್ನೂ ಪ್ರಸ್ತುತ ಅಂತಾ ನಾವು ಹೇಳುತ್ತೇವೆ. ಅಸ್ಪೃಶ್ಯತೆ, ಅಸಮಾನತೆ, ಲಿಂಗಬೇಧ ವಿರುದ್ಧ ಹೋರಾಡಿದ್ದರು. ಅವರು ಪ್ರಸ್ತುತ ಅಂತಾದ್ರೆ ಇವೆಲ್ಲವೂ ಇನ್ನೂ ಇದೆ ಅಂತಾ ಅರ್ಥ. 900 ವರ್ಷವಾದರೂ ಅಸಮಾನತೆ, ಮೂಢನಂಬಿಕೆ ಇನ್ನೂ ಇದೆ. ಇದನ್ನು ನೋಡಿದಾಗ ಬಸವಾಭಿಮಾನಿಗಳು ವಿಚಾರ ಮಾಡಬೇಕಿದೆ. 108 ವಚನಕಾರರ ವಿಚಾರ ಪೂರ್ಣ ಪ್ರಮಾಣ ಜಾರಿಗೆ ತರಬೇಕಿದೆ. ಬಸವ ಪಥವೇ ನನ್ನ ಪಥ, ಅದೇ ಮಾದರಿಯಲ್ಲೇ ಕೆಲಸ ಮಾಡ್ತಿದ್ದೇನೆ ಎಂದು ಧಾರವಾಡದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ರು.

ಧಾರವಾಡದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು