ಲಸಿಕೆ ಬಗ್ಗೆ ಜಿಲ್ಲಾಧಿಕಾರಿ ಬಳಿ ಗ್ಯಾರಂಟಿ ಕೇಳಿದ ವ್ಯಕ್ತಿ, ಲಸಿಕೆ ಅಂದಾಗ ಮನೆ ಹತ್ತಿದ ವೃದ್ಧ! ವಿವರ ಇಲ್ಲಿದೆ

| Updated By: ganapathi bhat

Updated on: Nov 28, 2021 | 6:51 PM

Dharwad News: ಗ್ಯಾರಂಟಿ ಬರೆದುಕೊಡುವಂತೆ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದ್ದಾರೆ. ಸಹಿ ಮಾಡಿಕೊಡ್ತೇನೆ ನೀವು ಲಸಿಕೆ ಹಾಕಿಸಿಕೊಳ್ಳಿ ಎಂದು ಈ ಬಗ್ಗೆ ಜಿಲ್ಲಾಧಿಕಾರಿ ಪ್ರತ್ಯುತ್ತರ ನೀಡಿದ್ದಾರೆ. ಪಾಲಿಕೆ ಆಯುಕ್ತ ವ್ಯಕ್ತಿಗೆ ಗ್ಯಾರಂಟಿ ಪತ್ರವನ್ನು ಬರೆದುಕೊಟ್ಟಿದ್ದಾರೆ.

ಲಸಿಕೆ ಬಗ್ಗೆ ಜಿಲ್ಲಾಧಿಕಾರಿ ಬಳಿ ಗ್ಯಾರಂಟಿ ಕೇಳಿದ ವ್ಯಕ್ತಿ, ಲಸಿಕೆ ಅಂದಾಗ ಮನೆ ಹತ್ತಿದ ವೃದ್ಧ! ವಿವರ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us on

ಧಾರವಾಡ: ಲಸಿಕೆ ಬಗ್ಗೆ ಧಾರವಾಡ ಜಿಲ್ಲಾಧಿಕಾರಿಗೆ ವ್ಯಕ್ತಿಯೊಬ್ಬ ಗ್ಯಾರಂಟಿ ಕೇಳಿದ ಘಟನೆ ಇಂದು (ನವೆಂಬರ್ 28) ನಡೆದಿದೆ. ಜಿಲ್ಲಾಧಿಕಾರಿ ಬಳಿ, ನನಗೇನು ಆಗಲ್ಲ ಎಂದು ಬರೆದು ಕೊಡಿ ಎಂದು ವ್ಯಕ್ತಿ ಕೇಳಿಕೊಂಡಿದ್ದಾರೆ. ಹುಬ್ಬಳ್ಳಿಯ ಪಾಲಿಕೆ ಆವರಣದಲ್ಲಿ ಘಟನೆ ನಡೆದಿದೆ. ಗ್ಯಾರಂಟಿ ಬರೆದುಕೊಡುವಂತೆ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದ್ದಾರೆ. ಸಹಿ ಮಾಡಿಕೊಡ್ತೇನೆ ನೀವು ಲಸಿಕೆ ಹಾಕಿಸಿಕೊಳ್ಳಿ ಎಂದು ಈ ಬಗ್ಗೆ ಜಿಲ್ಲಾಧಿಕಾರಿ ಪ್ರತ್ಯುತ್ತರ ನೀಡಿದ್ದಾರೆ. ಪಾಲಿಕೆ ಆಯುಕ್ತ ವ್ಯಕ್ತಿಗೆ ಗ್ಯಾರಂಟಿ ಪತ್ರವನ್ನು ಬರೆದುಕೊಟ್ಟಿದ್ದಾರೆ.

ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಈಳಿಗನೂರು ಗ್ರಾಮದಲ್ಲಿ ಲಸಿಕೆ ಹಾಕಿಸಿಕೊಳ್ಳಲು ವೃದ್ಧೆ ರಂಪಾಟ ಮಾಡಿದ ಘಟನೆ ಸಂಭವಿಸಿದೆ. ಶಿವಗಂಗಮ್ಮ ಎಂಬ ವೃದ್ಧೆ ಆರೋಗ್ಯ ಸಿಬ್ಬಂದಿ ಕಂಡು ಓಡಿದ್ದಾರೆ. ವೃದ್ಧೆ‌ಯನ್ನು ಹಿಡಿದು ಕರೆತಂದು ವ್ಯಾಕ್ಸಿನ್ ಹಾಕಲು ಯತ್ನಿಸಲಾಗಿದೆ. ಸಿಬ್ಬಂದಿಯಿಂದ ಮತ್ತೆ ತಪ್ಪಿಸಿಕೊಂಡು ವೃದ್ಧೆ ಓಡಿ ಹೋಗಿದ್ದಾರೆ. ಕೊನೆಗೂ ಲಸಿಕೆ ಹಾಕಿಸಿಕೊಳ್ಳದೆ ವೃದ್ಧೆ ಎಸ್ಕೇಪ್ ಆಗಿದ್ದಾರೆ.

ಕೊರೊನಾ ಲಸಿಕೆ ಅಂದ ತಕ್ಷಣ ವೃದ್ಧರೊಬ್ಬರು ಮನೆ ಹತ್ತಿದ್ದ ಘಟನೆ ದಾವಣಗೆರೆ ತಾಲೂಕು ಹದಡಿ ಗ್ರಾಮದ ಕುರುಬರ ರಸ್ತೆಯಲ್ಲಿ ಸಂಭವಿಸಿದೆ. ಬಳಿಕ, ವೃದ್ಧನನ್ನು ಮನ ಒಲಿಸಿ ಲಸಿಕೆ ಹಾಕಿಸಲು ಕರೆತರಲಾಗಿದೆ. ನಂತರ ಆರೋಗ್ಯ ಮತ್ತು ಕಂದಾಯ ಇಲಾಖೆ ಸಿಬ್ಬಂದಿ 77 ವರ್ಷದ ಹನಮಂತಪ್ಪ ಎಂಬವರಿಗೆ ಲಸಿಕೆ ಹಾಕಿಸಿದ್ದಾರೆ. ಸಂಬಂಧಿಕರು ಇಲಾಖೆ ಸಿಬ್ಬಂದಿ ಸೇರಿ ಹನಮಂತಪ್ಪನ ಮನ ಒಲಿಸಿ ಕೊರೊನಾ ಮೊದಲ ಡೋಸ್ ಕೊಡಿಸಿದ್ದಾರೆ.

ಧಾರವಾಡ: ಲಸಿಕೆ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಮನವಿ
ವ್ಯಾಕ್ಸಿನೇಷನ್​ ಕಡಿಮೆ ಇರುವ ಪ್ರದೇಶಕ್ಕೆ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಭೇಟಿ ನೀಡಿದ್ದಾರೆ. ಹಳೆ ಹುಬ್ಬಳ್ಳಿಯ ಮೆಹಬೂಬ್​ನಗರಕ್ಕೆ ಡಿಸಿ ನಿತೇಶ್ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳುವಂತೆ ಮನೆಮನೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಜತೆ ತೆರಳಿ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಕರ್ನಾಟಕ ರಾಜ್ಯದಲ್ಲೂ ಕೊರೊನಾ ರೂಪಾಂತರಿ ಒಮಿಕ್ರಾನ್ ಆತಂಕ ಹಿನ್ನೆಲೆ, ಹುಬ್ಬಳ್ಳಿ- ಧಾರವಾಡದಲ್ಲಿ ನಾಳೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವ ಬಗ್ಗೆ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್​ ಹೇಳಿಕೆ ನೀಡಿದ್ದಾರೆ. ಈಜು ಕೊಳ, ಜಿಮ್, ಛತ್ರ, ಮಾಲ್​ ಮಾಲೀಕರ ಜತೆ ಸಭೆ ನಡೆಸಲಾಗಿದೆ. ಹುಬ್ಬಳ್ಳಿಯ ಪಾಲಿಕೆ ಕಚೇರಿಯಲ್ಲಿ ಸಭೆ ನಂತರ ಡಿಸಿ ಮಾತನಾಡಿದ್ದಾರೆ. ಕೆಲವು ಏರಿಯಾಗಳಲ್ಲಿ ಲಸಿಕೆ ತೆಗೆದುಕೊಳ್ಳಲು ಮುಂದಾಗಿಲ್ಲ. ಎಲ್ಲಾ ಸಮುದಾಯದ ಮುಖಂಡರ ಜತೆ ಲಸಿಕೆ ಬಗ್ಗೆ ಚರ್ಚೆ ಮಾಡಲಾಗಿದೆ. ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆಯುವಂತೆ ಮನವಿ ಮಾಡಲಾಗಿದೆ. ಚಿತ್ರಮಂದಿರ, ಛತ್ರಕ್ಕೆ 2 ಡೋಸ್ ಪಡೆದರೆ ಮಾತ್ರ ಪ್ರವೇಶ ಇರಲಿದೆ. ಈ ಬಗ್ಗೆ ಚಿತ್ರಮಂದಿರ, ಛತ್ರಗಳ ಮಾಲೀಕರಿಗೆ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್​ ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಕಾಣಿಸಿಕೊಂಡ ಕ್ಲಸ್ಟರ್​ಗಳಲ್ಲಿ ಕೊವಿಡ್19 ಪರೀಕ್ಷೆ ಕಡ್ಡಾಯ; ಶಿಕ್ಷಣ ಸಂಸ್ಥೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬ್ರೇಕ್

ಇದನ್ನೂ ಓದಿ: ಹೊಸ ತಳಿಯ ಕೊರೊನಾ ಆತಂಕ ಹಿನ್ನೆಲೆ; ಆರೋಗ್ಯ ಇಲಾಖೆ, ತಾಂತ್ರಿಕ ಸಲಹಾ ಸಮಿತಿ ಜೊತೆ ಸಚಿವ ಸುಧಾಕರ್ ಸಭೆ