ಕೊರೊನಾ ಕಾಣಿಸಿಕೊಂಡ ಕ್ಲಸ್ಟರ್ಗಳಲ್ಲಿ ಕೊವಿಡ್19 ಪರೀಕ್ಷೆ ಕಡ್ಡಾಯ; ಶಿಕ್ಷಣ ಸಂಸ್ಥೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬ್ರೇಕ್
ಕೇರಳದಿಂದ ಬರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ಮಾಡಿಸಬೇಕು. 7 ದಿನಗಳ ನಂತರ ಮತ್ತೊಮ್ಮೆ RTPCR ಟೆಸ್ಟ್ ಮಾಡಬೇಕು. ಕೇರಳ ಗಡಿ ಭಾಗದ ಜಿಲ್ಲೆಗಳಲ್ಲಿ ಬರುವವರಿಗೆ ಸ್ಕ್ರೀನಿಂಗ್ ಮಾಡಬೇಕು ಎಂದು ಹೇಳಲಾಗಿದೆ.
ಬೆಂಗಳೂರು: ಕೊರೊನಾ ಕಾಣಿಸಿಕೊಂಡ ಕ್ಲಸ್ಟರ್ಗಳಲ್ಲಿ ಕಡ್ಡಾಯ ಕೊವಿಡ್19 ಪರೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ. ಧಾರವಾಡ, ಬೆಂಗಳೂರು, ಮೈಸೂರು ಕ್ಲಸ್ಟರ್ ಮೇಲೆ ನಿಗಾ ವಹಿಸಬೇಕು ಎಂದು ಸೂಚಿಸಿ, ಧಾರವಾಡ, ಬೆಂಗಳೂರು, ಮೈಸೂರು ಭಾಗಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಮೂರು ಭಾಗದ ಶಿಕ್ಷಣ ಸಂಸ್ಥೆಗಳಿಗೆ ಹೊಸ ಮಾರ್ಗಸೂಚಿ ನೀಡಲಾಗಿದೆ.
ಕೇರಳ, ಮಹರಾಷ್ಟ್ರದಿಂದ ಬಂದವರಿಗೆ ಟೆಸ್ಟ್ ಮಾಡಿಸಬೇಕು. 3 ಕ್ಲಸ್ಟರ್ ಶಿಕ್ಷಣ ಸಂಸ್ಥೆಗಳಿಗೆ ಬಂದ ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ಮಾಡಿಸಬೇಕು. ಕೇರಳ, ಮಾಹಾರಾಷ್ಟ್ರದಿಂದ ಬರುವವರಿಗೆ ಕೊವಿಡ್19 ನೆಗೆಟಿವ್ ವರದಿ ಕಡ್ಡಾಯ ಆಗಿರಲಿದೆ. ವಿದ್ಯಾರ್ಥಿಗಳಿಗೆ 72 ಗಂಟೆಯೊಳಗಿನ ನೆಗೆಟಿವ್ ವರದಿ ಕಡ್ಡಾಯ ಆಗಿದೆ. ಕೇರಳದಿಂದ ಬರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ಮಾಡಿಸಬೇಕು. 7 ದಿನಗಳ ನಂತರ ಮತ್ತೊಮ್ಮೆ RTPCR ಟೆಸ್ಟ್ ಮಾಡಬೇಕು. ಕೇರಳ ಗಡಿ ಭಾಗದ ಜಿಲ್ಲೆಗಳಲ್ಲಿ ಬರುವವರಿಗೆ ಸ್ಕ್ರೀನಿಂಗ್ ಮಾಡಬೇಕು ಎಂದು ಹೇಳಲಾಗಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲು ಸಲಹೆ ನೀಡಲಾಗಿದೆ. ಶಿಕ್ಷಣ ಸಂಸ್ಥೆಗಳಿಗೆ ಈ ಕುರಿತು ರಾಜ್ಯ ಸರ್ಕಾರ ಸೂಚನೆ ನೀಡಿದೆ. 2 ತಿಂಗಳು ಕಾರ್ಯಕ್ರಮಗಳನ್ನ ಮುಂದೂಡಲು ಸೂಚನೆ ಕೊಡಲಾಗಿದೆ. ಕಾರ್ಯಾಗಾರ, ಸೆಮಿನಾರ್ಗಳನ್ನ ಸಾಧ್ಯವಾದ್ರೆ ಮುಂದೂಡಿ. ಮುಂದೂಡಲಾಗದಿದ್ರೆ ಕಡಿಮೆ ವಿದ್ಯಾರ್ಥಿಗಳೊಂದಿಗೆ ನಡೆಸಿ ಎಂದು ಹೇಳಲಾಗಿದೆ.
ಉಳಿದ ವಿದ್ಯಾರ್ಥಿಗಳಿಗೆ ವರ್ಚುವಲ್ನಲ್ಲಿ ಅವಕಾಶ ಕಲ್ಪಿಸಿ. ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಸ್ಕ್ರೀನಿಂಗ್ ಮಾಡಬೇಕು. ಆರೋಗ್ಯ ವಲಯದಲ್ಲಿರುವವರು ವರ್ಚುವಲ್ ಸಭೆ ನಡೆಸಬೇಕು. ವಿದ್ಯಾರ್ಥಿಗಳು ಲಸಿಕೆ ಪಡೆದಿರುವ ಬಗ್ಗೆ ಖಚಿತಪಡಿಸಿಕೊಳ್ಳಿ ಎಂದು ಹೇಳಿ ಶಿಕ್ಷಣ ಸಂಸ್ಥೆಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ಸಲಹೆಯನ್ನ ನೀಡಿದೆ.
ಇದನ್ನೂ ಓದಿ: ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಕ್ಷಣಗಣನೆ; ಜಾತ್ರೆ ನಡೆಯುವ ಸ್ಥಳದಲ್ಲಿಯೇ ಕೊರೊನಾ ಟೆಸ್ಟಿಂಗ್, ವ್ಯಾಕ್ಸಿನೇಷನ್ಗೆ ಸಿದ್ಧತೆ
ಇದನ್ನೂ ಓದಿ: ಕೊವ್ಯಾಕ್ಸಿನ್, ಕೊವಿಶೀಲ್ಡ್ ಲಸಿಕೆ ಪಡೆದವರಿಗೂ ಕೊರೊನಾ! ಬಿಬಿಎಂಪಿ ಅಧ್ಯಯನದಲ್ಲಿ ಆತಂಕಕಾರಿ ಮಾಹಿತಿ ಬಯಲು
Published On - 2:37 pm, Sun, 28 November 21