AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲ್ಲ ಸಲ್ಲದ ಕಾಯಿಲೆ ನೆಪ ಹೇಳಿ ವಿಮೆ ತಿರಸ್ಕರಿಸಿದ ಅಂಚೆ ಇಲಾಖೆಗೆ 3 ಲಕ್ಷ ದಂಡ ವಿಧಿಸಿದ ಧಾರವಾಡ ಗ್ರಾಹಕರ ಆಯೋಗ

ತನ್ನ ಚಿಕ್ಕಪ್ಪ ಯಾವುದೇ ಕಾಯಿಲೆಯಿಂದ ಬಳಲುತ್ತಿರಲಿಲ್ಲ. ಆದರೆ ಹೃದಯಾಘಾತದಿಂದ ಅವರು ಮೃತಪಟ್ಟಿರುವುದರಿಂದ ಅಂಚೆ ಇಲಾಖೆಯವರ ತೀರ್ಮಾನ ತಪ್ಪು ಮತ್ತು ಇದು ಸೇವಾ ನ್ಯೂನ್ಯತೆ ಆಗಿದೆ ಅಂತಾ ಅಂಚೆ ಇಲಾಖೆ ಮೇಲೆ ಕ್ರಮ ಕೈಗೊಂಡು ಪರಿಹಾರ ಕೊಡಿಸುವಂತೆ ಅರ್ಚನಾ ಗ್ರಾಹಕರ ರಕ್ಷಣಾಕಾಯ್ದೆಯಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.

ಇಲ್ಲ ಸಲ್ಲದ ಕಾಯಿಲೆ ನೆಪ ಹೇಳಿ ವಿಮೆ ತಿರಸ್ಕರಿಸಿದ ಅಂಚೆ ಇಲಾಖೆಗೆ 3 ಲಕ್ಷ ದಂಡ ವಿಧಿಸಿದ ಧಾರವಾಡ ಗ್ರಾಹಕರ ಆಯೋಗ
ವಿಮೆ ತಿರಸ್ಕರಿಸಿದ ಅಂಚೆ ಇಲಾಖೆಗೆ 3.03 ಲಕ್ಷ ದಂಡ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: ಸಾಧು ಶ್ರೀನಾಥ್​|

Updated on: Sep 12, 2023 | 5:35 PM

Share

ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಹಿರೇಹರಕುಣಿ ಗ್ರಾಮದ ನಾಗಪ್ಪ ಶಿವಪ್ಪ ಕುರಹಟ್ಟಿ ಅವರು ಮೆಣಸಿನಕಾಯಿ ವ್ಯಾಪಾರಸ್ಥರು. ವ್ಯಾಪಾರಕ್ಕೆಂದು ಶಿವಮೊಗ್ಗ ಜಿಲ್ಲೆಯ ಸೊರಬಕ್ಕೆ ಆಗಾಗ್ಗೆ ಹೋಗಿ ಬರುತ್ತಿದ್ದರು. ಹೀಗೆ ವ್ಯಾಪಾರಕ್ಕೆಂದು ಹೋದಾಗ 28 ಮಾರ್ಚ್, 2019 ರಂದು ರೂ.7,291/- ಪ್ರೀಮಿಯಮ್ ನೀಡಿ ಸೊರಬ ಅಂಚೆ ಕಛೇರಿಯಿಂದ ಗ್ರಾಮೀಣ ಅಂಚೆ ಜೀವ ವಿಮೆಯನ್ನು ಪಡೆದುಕೊಂಡಿದ್ದರು. ನಾಗಪ್ಪ ಕುರಹಟ್ಟಿ 31 ಜನವರಿ, 2019 ರಂದು ತೀವ್ರ ಹೃದಯಾಘಾತದಿಂದ ಹಿರೆಹರಕುಣಿಯ ತಮ್ಮ ಮನೆಯಲ್ಲಿ ನಿಧನ ಹೊಂದಿದ್ದರು. ಆ ವಿಮೆ ಪಾಲಸಿಗೆ ನಾಗಪ್ಪ ಅವರ ಸಹೋದರನ ಮಗಳು ಅರ್ಚನಾ ನಾಮಿನಿ ಆಗಿದ್ದಳು. ವಿಮೆದಾರ ನಾಗಪ್ಪನ ಮರಣಾನಂತರ (health) ಅರ್ಚನಾ ಹುಬ್ಬಳ್ಳಿಯ ಅಂಚೆ ಕಛೇರಿಗೆ ವಿಮೆ ಪರಿಹಾರ ( postal insurance) ರೂ. 2 ಲಕ್ಷ 50 ಸಾವಿರ ಕೊಡುವಂತೆ ದಾಖಲೆಗಳ ಸಮೇತ ಕ್ಲೇಮ್ ಅರ್ಜಿ ಸಲ್ಲಿಸಿದ್ದರು.

ವಿಮೆ ಮಾಡಿಸುವ ಮೊದಲು ಮೃತ ನಾಗಪ್ಪ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದನು. ಆದರೆ ವಿಮೆ ಪಡೆಯುವಾಗ ಆ ಸಂಗತಿಗಳನ್ನು ಅಂಚೆ ಇಲಾಖೆಗೆ ಬಹಿರಂಗ ಪಡಿಸಿರಲಿಲ್ಲ ಅಂತಾ ಹುಬ್ಬಳ್ಳಿಯ ಅಂಚೆ ಕಛೇರಿಯವರು ಅರ್ಚನಾಳ ಕ್ಲೇಮ್‍ನ್ನು ತಿರಸ್ಕರಿಸಿದ್ದರು. ತನ್ನ ಚಿಕ್ಕಪ್ಪ ಯಾವುದೇ ಕಾಯಿಲೆಯಿಂದ ಬಳಲುತ್ತಿರಲಿಲ್ಲ. ಆದರೆ ಹೃದಯಾಘಾತದಿಂದ ಅವರು ಮೃತಪಟ್ಟಿರುವುದರಿಂದ ಅಂಚೆ ಇಲಾಖೆಯವರ ತೀರ್ಮಾನ ತಪ್ಪು ಮತ್ತು ಇದು ಸೇವಾ ನ್ಯೂನ್ಯತೆ ಆಗಿದೆ ಅಂತಾ ಅಂಚೆ ಇಲಾಖೆ ಮೇಲೆ ಕ್ರಮ ಕೈಗೊಂಡು ಪರಿಹಾರ ಕೊಡಿಸುವಂತೆ ಅರ್ಚನಾ ಗ್ರಾಹಕರ ರಕ್ಷಣಾಕಾಯ್ದೆಯಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ (District Consumer Disputes Redressal Commission -DCDRC) ದೂರನ್ನು ಸಲ್ಲಿಸಿದ್ದರು.

ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು ಮೃತ ನಾಗಪ್ಪ ಕುರಹಟ್ಟಿ ಅವರ ಅಂಚೆ ಜೀವವಿಮೆ ಪಾಲಸಿ, ಅವರು ನಿಧನ ಹೊಂದುವ ಕಾಲಕ್ಕೆ ಚಾಲ್ತಿಯಲ್ಲಿತ್ತು. ಅಂಚೆ ಕಛೇರಿಯವರು ತಮ್ಮ ವಿಮಾ ನಿಯಮಾವಳಿಯಂತೆ ವಿಮಾ ಹಣವನ್ನು ಅರ್ಚನಾಳಿಗೆ ಕೊಡುವುದು ಕರ್ತವ್ಯವಾಗಿರುತ್ತದೆ. ಆದರೆ ಅಂತಹ ಕರ್ತವ್ಯ ನಿರ್ವಹಣೆಯಲ್ಲಿ ಅಂಚೆ ಜೀವವಿಮಾ ಕಛೇರಿ ವಿಫಲವಾಗಿದೆ. ಅವರು ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಅಭಿಪ್ರಾಯಪಟ್ಟಿದೆ.

Also Read: ಡೆಪಾಸಿಟ್​ ಹಿಂದಿರುಗಿಸದ ಸರಸ್ವತಿ ಕೋ ಆಪ್​​ ಸೊಸೈಟಿಗೆ 11 ಲಕ್ಷ ರೂ ದಂಡ ವಿಧಿಸಿದ ಕೋರ್ಟ್​​

ವಿಮಾ ಪಾಲಸಿಯ ನಿಯಮದಂತೆ ನಾಮಿನಿಯಾದ ಅರ್ಚನಾಳಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ರೂ. 2 ಲಕ್ಷ 50 ಸಾವಿರ ವಿಮಾ ಹಣ ಮತ್ತು ಅದರ ಮೇಲೆ ಕ್ಲೇಮನ್ನು ತಿರಸ್ಕರಿಸಿದ ದಿನದಿಂದ ಶೇ. 8 ರಂತೆ ಬಡ್ಡಿ ಲೆಕ್ಕ ಹಾಕಿ ಸಂದಾಯ ಮಾಡುವಂತೆ ಆಯೋಗ ತನ್ನ ತೀರ್ಪಿನಲ್ಲಿ ಆದೇಶಿಸಿದೆ. ದೂರುದಾರಳಿಗೆ ಆಗಿರುವ ಮಾನಸಿಕ ತೊಂದರೆ ಹಾಗೂ ಅನಾನುಕೂಲಕ್ಕಾಗಿ ರೂ. 50 ಸಾವಿರ ಪರಿಹಾರ ಮತ್ತು ರೂ. 3 ಸಾವಿರ ಪ್ರಕರಣದ ಖರ್ಚು ವೆಚ್ಚವನ್ನು ಕೊಡುವಂತೆ ಅಂಚೆ ಜೀವವಿಮೆ ಕಛೇರಿಯವರಿಗೆ ಆದೇಶಿಸಿದೆ.

ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು