ಧಾರವಾಡ: ಬುಕ್ ಮಾಡಿದ ಕಾರಿನ ಬದಲು ಬೇರೆ ಕಾರು ನೀಡಿದ ಶೋರೂಂಗೆ ಪಾಠ ಕಲಿಸಿದ ಗ್ರಾಹಕರ ನ್ಯಾಯಾಲಯ, ಭಾರಿ ಮೊತ್ತದ ದಂಡ

ಹೊಸ ಮಾದರಿಯ ವಾಹನ ಬಿಟ್ಟು ಹಳೆ ಮಾದರಿಯ ವಾಹನ ನೀಡಿದ ಹುಬ್ಬಳ್ಳಿಯ ಕಾರ್ ಶೋರೂಂಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯವು ದೊಡ್ಡ ಮೊತ್ತದ ದಂಡವನ್ನು ವಿಧಿಸಿದೆ.

ಧಾರವಾಡ: ಬುಕ್ ಮಾಡಿದ ಕಾರಿನ ಬದಲು ಬೇರೆ ಕಾರು ನೀಡಿದ ಶೋರೂಂಗೆ ಪಾಠ ಕಲಿಸಿದ ಗ್ರಾಹಕರ ನ್ಯಾಯಾಲಯ, ಭಾರಿ ಮೊತ್ತದ ದಂಡ
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on:Mar 04, 2023 | 1:03 PM

ಧಾರವಾಡ: ಬುಕ್ ಮಾಡಿದ ಹೊಸ ಮಾದರಿಯ ವಾಹನ ಬಿಟ್ಟು ಹಳೆ ಮಾದರಿಯ ವಾಹನ ನೀಡಿದ ಹುಬ್ಬಳ್ಳಿಯ ಕಾರ್ ಶೋರೂಂಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯವು ಪರಿಹಾರದೊಂದಿಗೆ ದೊಡ್ಡ ಮೊತ್ತದ ದಂಡವನ್ನು ವಿಧಿಸಿ ಆದೇಶ ನೀಡಿದೆ.

ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್. ಕಾಲೇಜಿನ ಉಪನ್ಯಾಸಕ ನಾಗರಾಜ ಪಾಟೀಲ ಎಂಬುವರು 2020ರ ಮೇ ತಿಂಗಳಲ್ಲಿ ರೂ. 14,85,110 ಹಣವನ್ನು ನವನಗರದಲ್ಲಿರುವ ನಾಗಶಾಂತಿ ಕಿಯಾ ಡೀಲರ್‌ಗೆ ತುಂಬಿ ಫೇಸ್ ಲಿಫ್ಟ್ + ಮಫರ್ ಬಂಪರ್ ಸೌಲಭ್ಯದ ಎಚ್. ಟಿ. ಕೆ. + ಜಿ. ಸ್ಮಾರ್ಟ್ ಸ್ಟ್ರೀಮ್ 1.5 ಲೀಟರ್ ವಾಹನವನ್ನು ಬುಕ್ ಮಾಡಿದ್ದರು. ಆ ವಾಹನ ಜೂನ್ 2 ರಂದು ಬಿಡುಗಡೆಯಾಗುವುದಿತ್ತು. ಆದರೆ ನಾಗಶಾಂತಿ ಕಿಯಾ ಡೀಲರ್ ಬಿಡುಗಡೆಯ ದಿನವೇ  ಸೆಲಟೋಜ್ ಎಚ್. ಟಿ. ಕೆ. + 1.5 ಪೆಟ್ರೋಲ್ ಹಳೆ ಮಾದರಿಯ ವಾಹನವನ್ನು ದೂರುದಾರರಿಗೆ ಕೊಟ್ಟಿದ್ದರು. ಒಂದು ತಿಂಗಳ ನಂತರ ತಾನು ಬುಕ್ ಮಾಡಿದ ವಾಹನದ ಬದಲಿಗೆ ಹಳೇ ಮಾದರಿ ಕಾರು ನೀಡಲಾಗಿದೆ ಎಂಬ ವಿಷಯ ನಾಗರಾಜ ಅವರಿಗೆ ತಿಳಿದಿದೆ. ಈ ಕುರಿತು ನಾಗಶಾಂತಿ ಕಿಯಾ ಡೀಲರ್ ಜನರಲ್ ಮ್ಯಾನೇಜರ್ ವಿಜಯ ಪಿಳ್ಳೆ ಹಾಗೂ ಇತರರನ್ನು ಸಂಪರ್ಕಿಸಿದ್ದಾರೆ. ವಾಹನ ಬದಲಾವಣೆ ಮಾಡಿಕೊಡಲು ಆಗುವುದಿಲ್ಲ. ಆದರೆ ಹೊಸ ವಾಹನಕ್ಕೆ ಇರುವ ಸೌಲಭ್ಯಗಳನ್ನು ಈಗ ಕೊಟ್ಟಿರುವ ವಾಹನಕ್ಕೆ ಅಳವಡಿಸಿ ಕೊಡುವುದಾಗಿ ಹೇಳಿದ್ದರು.

ಇದನ್ನೂ ಓದಿ: ಸುಟ್ಟು ಹೋದ ಬೈಕ್​ಗೆ ಖಾಯಂ ನೊಂದಣಿ ಇಲ್ಲ ಎಂದು ಪರಿಹಾರ ನೀಡಲು ನಿರಾಕರಿಸಿದ ಕಂಪನಿಗೆ 15 ಲಕ್ಷ ದಂಡ ವಿಧಿಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ

ಅದಕ್ಕೆ ಒಪ್ಪದ ದೂರುದಾರ ನಾಗರಾಜ ಅವರು, ನಾಗಶಾಂತಿ ಕಿಯಾ ಡೀಲರ್‌ನಿಂದಾಗಿ ತನಗೆ ಮೋಸವಾಗಿದೆ ಹಾಗೂ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗಿದೆ ಎದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆದರೆ, ಶೋರೂಂನವರು ಬುಕ್ ಮಾಡಿದ ವಾಹನವನ್ನೇ ದೂರುದಾರರಿಗೆ ನೀಡಿದ್ದೇವೆಂದು ಪ್ರಕರಣ ವಜಾ ಮಾಡುವಂತೆ ಆಕ್ಷೇಪಣೆ ಎತ್ತಿದ್ದರು. ದೂರು ಮತ್ತು ಆಕ್ಷೇಪಣೆಯ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ, ಲಭ್ಯವಿರುವ ಸಾಕ್ಷಾಧಾರಗಳನ್ನು ಆಧರಿಸಿ ದೂರುದಾರ ಬುಕ್ ಮಾಡಿರುವ ಕಾರಿನ ಬದಲು ಹಳೇ ಮಾದರಿ ಕಾರು ನೀಡಿರುವುದು ಖಚಿತ ಪಡಿಸಿಕೊಂಡು, ಡೀಲರ್ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ತೀರ್ಪು ನೀಡಿದೆ.

2020 ರ ಜುಲೈದಿಂದ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ಪರಿಹಾರ ನೀಡಿ

ಯಾವುದೇ ವ್ಯವಹಾರದಲ್ಲಿ ನಂಬಿಕೆ ಮುಖ್ಯ. ಆದರೆ ನಾಗಶಾಂತಿ ಕಿಯಾ ಡೀಲರ್‌ರವರು ಈ ಪ್ರಕರಣದಲ್ಲಿ ದೂರುದಾರ ಬುಕ್ ಮಾಡಿದ ವಾಹನ ಬಿಟ್ಟು ಬೇರೆ ಹಳೆ ಮಾದರಿಯ ವಾಹನವನ್ನು ಕೊಟ್ಟು ಗ್ರಾಹಕರ ನಂಬಿಕೆಗೆ ಮೋಸ ಮಾಡಿದ್ದಾರೆ ಎಂದು ತೀರ್ಮಾನಿಸಿ ದೂರುದಾರರಿಗೆ ಕೊಟ್ಟಿರುವ ಹಳೆ ಮಾದರಿ ವಾಹನ ವಾಪಸ್ಸು ಪಡೆದು ಅವರು ಬುಕ್ ಮಾಡಿದ ಹೊಸ ಮಾದರಿಯ ವಾಹನವನ್ನು ಒಂದು ತಿಂಗಳ ಒಳಗಾಗಿ ನೀಡುವಂತೆ ತೀರ್ಪು ನೀಡಿದೆ. ದೊಡ್ಡ ಮೊತ್ತದ ಹಣ ನೀಡಿ ವಾಹನ ಖರೀದಿಸುವಾಗ ಗ್ರಾಹಕರು ಸಹ ಎಚ್ಚರಿಕೆಯಿಂದ ವ್ಯವಹರಿಸುವಂತೆ ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ. ಇದಕ್ಕೆ ತಪ್ಪಿದ್ದಲ್ಲಿ ವಾಹನ ಖರೀದಿಸಲು ದೂರುದಾರ ಕೊಟ್ಟಿರುವ ಹಣವನ್ನು 2020 ರ ಜುಲೈದಿಂದ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರನಿಗೆ ಹಣ ಹಿಂದಿರಿಗಿಸುವಂತೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ 1 ಲಕ್ಷ ರೂಪಾಯಿ‌ ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ ರೂ. 10,000 ಗಳನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ನೀಡುವಂತೆ ಆದೇಶಿಸಿದೆ.

ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9, ಧಾರವಾಡ

Published On - 1:03 pm, Sat, 4 March 23

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು