AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹು ಧಾ ಕಮೀಷನರೇಟ್ ಸಖತ್ ಪ್ಲಾನ್! ಇ-ಪೋರ್ಟಲ್ ಮೂಲಕ ಮೂರು ಲಕ್ಷ ರೂ ಮೌಲ್ಯದ ಮೊಬೈಲ್​ಗಳ ಪತ್ತೆ ಮಾಡಿದ ಖಾಕಿ

ಕಳೆದು ಹೋದ ಹಾಗೂ ಕಳ್ಳತನ ಮಾಡಿದ ಮೊಬೈಲ್‌ಗಳನ್ನು ಪತ್ತೆ ಹಚ್ಚಲು ಹು-ಧಾ ನಗರ ಪೊಲೀಸರು ಇ-ಪೋರ್ಟ್‌ಲ್ ಆರಂಭಿಸಿದ್ದು ವಾರದಲ್ಲಿ ಮೂರು ಲಕ್ಷ ರೂ. ಮೌಲ್ಯದ 30 ಮೊಬೈಲ್‌ಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಹು ಧಾ ಕಮೀಷನರೇಟ್ ಸಖತ್ ಪ್ಲಾನ್! ಇ-ಪೋರ್ಟಲ್ ಮೂಲಕ ಮೂರು ಲಕ್ಷ ರೂ ಮೌಲ್ಯದ ಮೊಬೈಲ್​ಗಳ ಪತ್ತೆ ಮಾಡಿದ ಖಾಕಿ
ಇ-ಪೋರ್ಟಲ್ ಮೂಲಕ ಮೂರು ಲಕ್ಷ ರೂ ಮೌಲ್ಯದ ಮೊಬೈಲ್​ಗಳ ಪತ್ತೆ ಮಾಡಿದ ಖಾಕಿ
TV9 Web
| Edited By: ಆಯೇಷಾ ಬಾನು|

Updated on: Mar 04, 2023 | 2:55 PM

Share

ಹುಬ್ಬಳ್ಳಿ: ರಾಜ್ಯದಲ್ಲಿಯೇ ಹೈ ವೋಲ್ಟೇಜ್ ಸಿಟಿ, ಎರಡನೇ ಅತಿದೊಡ್ಡ ಮಹಾನಗರ ಕೂಡ ಆಗಿರುವ ಹುಬ್ಬಳ್ಳಿಯಲ್ಲಿ ಸ್ವಲ್ಪ ಯಾಮಾರಿದರೂ ಮೊಬೈಲ್ ಮಾತ್ರ ಕೈ ತಪ್ಪುತ್ತಿತ್ತು. ಬಸ್ ಹತ್ತಿ ಇಳಿಯುವಷ್ಟರಲ್ಲಿ ಮೊಬೈಲ್ ಕಳ್ಳತನವಾಗುತ್ತಿತ್ತು. ಆದರೆ ಈಗ ಪೊಲೀಸ್ ಇಲಾಖೆಯ ಕಾರ್ಯದಿಂದ ಕಳೆದು ಹೋಗಿದ್ದ ಮೊಬೈಲ್​ಗಳು ಮಾಲೀಕರ ಕೈ ಸೇರುವಂತಾಗಿದೆ.

ಕಳೆದು ಹೋದ ಹಾಗೂ ಕಳ್ಳತನ ಮಾಡಿದ ಮೊಬೈಲ್‌ಗಳನ್ನು ಪತ್ತೆ ಹಚ್ಚಲು ಹು-ಧಾ ನಗರ ಪೊಲೀಸ್ ಆರಂಭಿಸಿದ ಇ-ಪೋರ್ಟ್‌ಲ್ ಎಂಬ ನೂತನ ಪ್ರಯೋಗದಿಂದ ವಾರದಲ್ಲಿ ಮೂರು ಲಕ್ಷ ರೂ. ಮೌಲ್ಯದ 30 ಮೊಬೈಲ್‌ಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೊಬೈಲ್ ಕಳೆದುಕೊಂಡವರು ಅನಾವಶ್ಯಕವಾಗಿ ಪೊಲೀಸ್ ಠಾಣೆಯ ಮಟ್ಟಿಲೇರಿ ದೂರ ನೀಡಬೇಕಿತ್ತು. ಇದರಿಂದ ಅವರ ಸಮಯ ವ್ಯರ್ಥವಾಗುತ್ತಿತ್ತು. ಅಲ್ಲದೆ ಪೊಲೀಸರು ಬೇರೆ ಕೆಲಸದ ಒತ್ತಡದಲ್ಲಿ ಯಾವುದೇ ಕಳೆದು ಹೋದ ಮೊಬೈಲ್‌ಗಳನ್ನು ಹುಡುಕುವುದು ಅಥವಾ ದೂರು ತೆಗೆದುಕೊಳ್ಳುವುದರ ಬಗ್ಗೆ ಹೆಚ್ಚಾಗಿ ಗಮನ ಹರಿಸುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಈಗ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವಿನೂತನ ಪ್ರಯೋಗದ ಮೂಲಕ ಮೊಬೈಲ್ ಕಾರ್ಯಾಚರಣೆ ನಡೆಸುತ್ತಿದೆ.

ಇದನ್ನೂ ಓದಿ: ಕಾರವಾರ: ಠಾಣೆ ಮೆಟ್ಟಿಲೇರಿದ ಹಾಲಿ ಮಾಜಿ ಶಾಸಕರಿಬ್ಬರ ಜಗಳ, ಏನಿದು ಅಂತೀರಾ ಈ ಸ್ಟೋರಿ ನೋಡಿ

ಸದ್ಯ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಒಂದು ತಾಂತ್ರಿಕ ಕೊಠಡಿ ಆರಂಭಿಸಿದ್ದು, ಡಿಸಿಪಿ ಗೋಪಾಲ ಬ್ಯಾಕೋಡ ಅವರ ಮಾರ್ಗದರ್ಶನದಲ್ಲಿ ನಾಲ್ಕು ಜನರ ತಂಡ ಕಾರ್ಯ ನಿರ್ವಹಿಸುತ್ತಿದೆ. 2022 ವರ್ಷದ ಇತ್ತೀಚಿನ ಮೊಬೈಲ್ ಪತ್ತೆ ಹಚ್ಚಲಾಗುತ್ತಿದೆ. ಮರಳಿ ಮೊಬೈಲ್ ನೀಡಿದ ಬಹುತೇಕರು ಬೇರೆಯವರಿಂದ ಮೊಬೈಲ್ ತೆಗೆದುಕೊಂಡವರಾಗಿದ್ದಾರೆ. ಪೊಲೀಸ್ ಸಿಬ್ಬಂದಿ ದೂರವಾಣಿ ಮೂಲಕ ಸಂಪರ್ಕಿಸಿದಾಗ ಸ್ವತಃ ಪೋಸ್ಟ್ ಮೂಲಕ ಕಚೇರಿಗೆ ಕಳಹಿಸಿಕೊಡುತ್ತಿದ್ದಾರೆ. ಆದರೆ ಮೊಬೈಲ್ ಕಳ್ಳತನ ಮಾಡುವರನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ. ಸದ್ಯ ನಮ್ಮ ಆದ್ಯತೆ ಮೊಬೈಲ್ ಕಳೆದುಕೊಂಡವರಿಗೆ ಹುಡುಕಿ ಕೊಡುವುದಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಒಟ್ಟಿನಲ್ಲಿ ನಗರ ಪೊಲೀಸರು ಇ-ಪೋರ್ಟ್‌ಲ್ ಆರಂಭಿಸಿದ್ದಾರೆ. ಅವರು ನೀಡಿದ ದೂರವಾಣಿ ಸಂಖ್ಯೆ ಮೊಬೈಲ್ ಕಳೆದುಕೊಂಡವರು ಹಾಯ್.. ಎಂದು ಸಂದೇಶ ಕಳುಹಿಸಿದರೆ ಅವರಿಗೆ ಮರಳಿ ಒಂದು ವೆಬ್‌ಸೈಟ್ ಲಿಂಕ್ ಬರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ವೆಬ್‌ಸೈಟ್ ಓಪನ್‌ಆಗಿ ಮೊಬೈಲ್ ಬಗ್ಗೆ ಮಾಹಿತಿಯ ಹಲವು ಪ್ರಶ್ನೆಗಳು ಬರುತ್ತವೆ. ಅಲ್ಲಿ ಎಲ್ಲದಕ್ಕೂ ಸೂಕ್ತವಾಗಿ ಉತ್ತರಿಸಬೇಕು. ಬಳಿಕ ಪೊಲೀಸರು ಈ ಮಾಹಿತಿಯ ಸಹಾಯದಿಂದ ಮೊಬೈಲ್ ಪತ್ತೆ ಹಚ್ಚಲು ಪ್ರಯತ್ನಿಸುತ್ತಾರೆ. ಮೊಬೈಲ್ ಸಿಕ್ಕರೆ ತಕ್ಷಣ ನಿಮ್ಮ ದೂರವಾಣಿಗೆ ಕರೆ ಮಾಡಿ ನೀಡುತ್ತಾರೆ.

ವರದಿ: ಶಿವಕುಮಾರ್ ಪತ್ತರ್, ಟಿವಿ9 ಹುಬ್ಬಳ್ಳಿ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ