Viral Video: ‘ನನ್ನನ್ನು ಕೊಲ್ಲಲು ಒಯ್ಯುತ್ತಿದ್ದಾರೆ..‘ ಕೊವಿಡ್ ಪಾಸಿಟಿವ್ ವ್ಯಕ್ತಿ ಕೂಗಾಡಿದ ವಿಡಿಯೋ ವೈರಲ್

| Updated By: ಆಯೇಷಾ ಬಾನು

Updated on: Jun 13, 2021 | 9:20 AM

ಕೊವಿಡ್ ದೃಢಪಟ್ಟ ನಂತರ ಆರೋಗ್ಯ ಸಿಬ್ಬಂದಿ ವ್ಯಕ್ತಿಯನ್ನು ಕೊವಿಡ್ ಕೇರ್ ಸೆಂಟರ್​ಗೆ ಕರೆದೊಯ್ಯಲು ಬಂದಿದ್ದರು. ಆಗಿನಿಂದಲೂ ವ್ಯಕ್ತಿ ವಿಡಿಯೋ ಮಾಡಿದ್ದಾನೆ. ಕೊವಿಡ್ ಕೇರ್​ ಸೆಂಟರ್​ನಲ್ಲಿ ನೇಣು ಹಾಕಿಕೊಳ್ಳುವುದಾಗಿ ನಾಟಕವಾಡಿ ಅದನ್ನೂ ವಿಡಿಯೋ ಮಾಡಿದ್ದಾನೆ.

Viral Video: ‘ನನ್ನನ್ನು ಕೊಲ್ಲಲು ಒಯ್ಯುತ್ತಿದ್ದಾರೆ..‘ ಕೊವಿಡ್ ಪಾಸಿಟಿವ್ ವ್ಯಕ್ತಿ ಕೂಗಾಡಿದ ವಿಡಿಯೋ ವೈರಲ್
ವಿಡಿಯೋದ ದೃಶ್ಯಗಳು
Follow us on

ಧಾರವಾಡ: ವ್ಯಕ್ತಿಯೋರ್ವ ಸೋಂಕು ದೃಢಪಟ್ಟ ಬಳಿಕ ಆಸ್ಪತ್ರೆಗೆ ದಾಖಲಾಗುವವರೆಗೂ ಕ್ಷಣಕ್ಷಣದ ವಿಡಿಯೋ ಮಾಡಿ, ಕೋವಿಡ್ ಕೇರ್ ಕೇಂದ್ರದಲ್ಲಿ ನೇಣು ಹಾಕಿಕೊಳ್ಳುವಂತೆ ನಟಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ವಿಡಿಯೋವೊಂದು ವೈರಲ್ ಆಗಿದೆ. ಧಾರವಾಡ ತಾಲೂಕಿನ ತಡಕೋಡ ಗ್ರಾಮದ ಪರಪ್ಪ ಎಂಬ ವ್ಯಕ್ತಿಯೇ ಈ ಚೇಷ್ಟೆ ನಡೆಸಿದಾತ.

ಕೊವಿಡ್ ದೃಢಪಟ್ಟ ನಂತರ ಆರೋಗ್ಯ ಸಿಬ್ಬಂದಿ ವ್ಯಕ್ತಿಯನ್ನು ಕೊವಿಡ್ ಕೇರ್ ಸೆಂಟರ್​ಗೆ ಕರೆದೊಯ್ಯಲು ಬಂದಿದ್ದರು. ಆಗಿನಿಂದಲೂ ವ್ಯಕ್ತಿ ವಿಡಿಯೋ ಮಾಡಿದ್ದಾನೆ. ಕೊವಿಡ್ ಕೇರ್​ ಸೆಂಟರ್​ನಲ್ಲಿ ನೇಣು ಹಾಕಿಕೊಳ್ಳುವುದಾಗಿ ನಾಟಕವಾಡಿ ಅದನ್ನೂ ವಿಡಿಯೋ ಮಾಡಿದ್ದಾನೆ. ಆನಂತರ ಜಿಲ್ಲಾಸ್ಪತ್ರೆಗೆ ದಾಖಲು ಮಾಡುವಾಗಲೂ ಪರಪ್ಪ ಮಂಗಾಟ ನಡೆಸಿದ್ದಾನೆ. ನನ್ನನ್ನು ಕೊಲ್ಲಲು ಒಯ್ಯುತ್ತಿದ್ದಾರೆ ಎಂದು ಜಿಲ್ಲಾಸ್ಪತ್ರೆಗೆ ಒಯ್ಯುವಾಗ ವಿಡಿಯೋ ಮಾಡಿದ್ದಾನೆ. ಕೆಲ ದಿನಗಳ ನಂತರ ಕೊವಿಡ್​​ ಸೋಂಕಿನಿಂದ ಗುಣಮುಖನಾಗಿದ್ದಾನೆ ಪರಪ್ಪ. ಆದರೆ ಅಷ್ಟಕ್ಕೇ ನಿಲ್ಲದೇ, ಗುಣಮುಖನಾದ ನಂತರ ಈ ಮೊದಲು ತಾನು ಮಾಡಿದ್ದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಡಿಬಿಟ್ಟಿದ್ದಾನೆ.

ಸದ್ಯ ಪರಪ್ಪ ಹರಿಬಿಟ್ಟ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವ್ಯಕ್ತಿಯ ಕುಚೇಷ್ಟೆಯ ವಿಡಿಯೋದಿಂದ ಆರೋಗ್ಯ ಸಿಬ್ಬಂದಿ ಪರದಾಟ ಪಟ್ಟಿದ್ದಾರೆ.

ಮಾಸ್ಕ್ ಧರಿಸದೆ ಓಡಾಡಿದವರಿಗೆ ಮಂಗಳಾರತಿ ಬೆಳಗಿ ಹಾಡು ಹೇಳಿದ ಮಹಿಳಾ ಪೊಲೀಸ್ ಅಧಿಕಾರಿ

ಇಡೀ ದೇಶವು ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದು, ಅನೇಕ ಜನರು ಕೊವಿಡ್​ನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಕೊರೊನಾ ಸೋಂಕನ್ನು ದೂರವಾಗಿಸಲು ನಾನಾ ಪ್ರಯತ್ನಗಳು ನಡೆಯುತ್ತಿವೆ. ಅದರಲ್ಲೂ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಲ್ಲಿ ಜನರು ಈಗಲೂ ಕೂಡ ಹಿಂದೇಟು ಹಾಕುತ್ತಿದ್ದಾರೆ. ಈ ರೀತಿಯಾಗಿ ಸರ್ಕಾರದ ನಿಯಮವನ್ನು ಗಾಳಿಗೆ ತೂರಿದವರಿಗೆ ತಕ್ಕ ಪಾಠ ಕಲಿಸುವಲ್ಲಿ ಪೊಲೀಸರು ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಎಷ್ಟೇ ಬುದ್ಧಿವಾದ ಹೇಳಿದರು ಕೇಳದ ಜನರಿಗೆ ಪೊಲೀಸರು ವಿಭಿನ್ನ ರೀತಿಯಲ್ಲಿ ಎಚ್ಚರಿಕೆ ನೀಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ನೋಡುಗರನ್ನು ನಗಿಸುವುದರ ಜೊತೆಗೆ ಆಶ್ಚರ್ಯಚಕಿತರನ್ನಾಗಿ ಮಾಡಿದೆ.

ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ಮಾಸ್ಕ್ ಕಡ್ಡಾಯ. ಆದರೆ ಇದನ್ನು ಮರೆತ ಇಬ್ಬರು ಪುರುಷರು ಮಾಸ್ಕ್ ಧರಿಸದೆ ರಸ್ತೆಯಲ್ಲಿ ಓಡಾಡುತ್ತಿದ್ದರು. ಹೀಗೆ ಮಾಸ್ಕ್ ಧರಿಸದೆ ಓಡಾಡುವಾಗ ಮಹಿಳಾ ಪೊಲೀಸ್ ಅಧಿಕಾರಿಗಳ ಕೈಗೆ ಇಬ್ಬರು ಸಿಕ್ಕಿಹಾಕಿಕೊಂಡಿದ್ದಾರೆ. ಈ ಇಬ್ಬರನ್ನು ನಿಲ್ಲಿಸಿಕೊಂಡ ಮಹಿಳಾ ಪೊಲೀಸ್ ಅಧಿಕಾರಿ ಮಂಗಳಾರತಿ ತಟ್ಟೆ ಹಿಡಿದು ಆರತಿ ಬೆಳಗಿದ್ದಾರೆ. ಅಷ್ಟೇ ಅಲ್ಲದೆ ಮಾಸ್ಕ್ ಹಾಕಿಕೊಳ್ಳಿ ಮಹಾರಾಜರೇ ಎಂದು ಹಾಡು ಕೂಡ ಹೇಳಿದ್ದಾರೆ. ಈ ಸನ್ನಿವೇಶ ಆಶ್ಚರ್ಯಕರವಾಗಿದ್ದಷ್ಟೇ ಅಲ್ಲದೆ ದೊಡ್ಡ ಪಾಠವನ್ನು ಕೂಡ ಕಲಿಸಿದೆ. ಹಾಸ್ಯಮಯವಾದ ಈ ವಿಡಿಯೋ ಸದ್ಯ ವೈರಲ್ ಆಗಿದೆ.

ಇದನ್ನೂ ಓದಿ: ಕೊವಿಡ್​ ಅಸ್ಪತ್ರೆಗಳ ನೆಲದ ಮೇಲೆ ಸಾರ್ಸ್-ಕೊವ್-2 ವೈರಸ್ ಅಲ್ಲದಿದ್ದರೂ ಅದರ ಆನುವಂಶಿಕ ಸ್ವರೂಪ ಇರುತ್ತದೆ: ವರದಿ

2 ತೊಲೆ ಬಂಗಾರದ ಸರ ನುಂಗಿದ ಸಾಕುನಾಯಿ; ಯಾವಾಗ ಹೊರಬರುತ್ತೆ ಎಂದು ನಾಯಿಯ ಹಿಂದೆ ಅಲೆಯುವಂತಾಗಿದೆ ಪರಿಸ್ಥಿತಿ

(Dharwad Covid patient Man makes videos like he abused by Covid Care Centre staff and share it after when he cure