ಸಲಿಂಗ ವಿವಾಹ ಮಾನ್ಯತೆ ರದ್ದುಗೊಳಿಸುವಂತೆ ಧಾರವಾಡ ಸಂಸ್ಕೃತಿ ಟ್ರಸ್ಟ್ ಮಹಿಳಾ ಸದಸ್ಯರಿಂದ ರಾಷ್ಟ್ರಪತಿಗೆ ಪತ್ರ

ಸಲಿಂಗ ವಿವಾಹಕ್ಕೆ ನೀಡಿರುವ ಮಾನ್ಯತೆ ರದ್ದುಗೊಳಿಸುವಂತೆ ಧಾರವಾಡ ಸಂಸ್ಕೃತಿ ಟ್ರಸ್ಟ್ ಮಹಿಳಾ ಸದಸ್ಯರು ಮನವಿ ಮಾಡಿದ್ದು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಿದ್ದಾರೆ.

ಸಲಿಂಗ ವಿವಾಹ ಮಾನ್ಯತೆ ರದ್ದುಗೊಳಿಸುವಂತೆ ಧಾರವಾಡ ಸಂಸ್ಕೃತಿ ಟ್ರಸ್ಟ್ ಮಹಿಳಾ ಸದಸ್ಯರಿಂದ ರಾಷ್ಟ್ರಪತಿಗೆ ಪತ್ರ
ಧಾರವಾಡ ಸಂಸ್ಕೃತಿ ಟ್ರಸ್ಟ್ ಮಹಿಳಾ ಸದಸ್ಯರು
Follow us
|

Updated on:Apr 27, 2023 | 3:45 PM

ಧಾರವಾಡ: ಸಲಿಂಗ ವಿವಾಹಕ್ಕೆ ನೀಡಿರುವ ಮಾನ್ಯತೆ ರದ್ದುಗೊಳಿಸುವಂತೆ ಧಾರವಾಡ ಸಂಸ್ಕೃತಿ ಟ್ರಸ್ಟ್ ಮಹಿಳಾ ಸದಸ್ಯರು ಮನವಿ ಮಾಡಿದ್ದು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಿದ್ದಾರೆ. ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಕುರಿತು ಸುಪ್ರೀಂಕೋರ್ಟ್‌ನಲ್ಲಿ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ವಿವಾಹಕ್ಕೆ ಎರಡು ಲಿಂಗಕ್ಕೆ ಸೇರಿದ ಇಬ್ಬರು ಸಂಗಾತಿಗಳು ಅಗತ್ಯವೇ ಎಂದು ಪ್ರಶ್ನಿಸಿದ್ದರು. ನಾವು ಈ ಸಲಿಂಗ ಸಂಬಂಧಗಳನ್ನು ಕೇವಲ ದೈಹಿಕ ಸಂಬಂಧಗಳಾಗಿ ನೋಡುತ್ತೇವೆ ಆದರೆ ಅಲ್ಲಿ ಹೆಚ್ಚು ಸ್ಥಿರವಾದ, ಭಾವನಾತ್ಮಕ ಸಂಬಂಧವೂ ಇರುತ್ತದೆ ಎಂದಿದ್ದರು. ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕೇ ಅಥವಾ ಬೇಡವೇ ಎಂಬುದರ ವಾದ ಮತ್ತು ಪ್ರತಿವಾದವು ಸುಪ್ರೀಂ ಕೋರ್ಟ್‌ನ ಅಂಗಳದಲ್ಲಿದೆ. ಸದ್ಯ ಸಲಿಂಗ ವಿವಾಹಕ್ಕೆ ನೀಡಿರುವ ಮಾನ್ಯತೆ ರದ್ದುಗೊಳಿಸುವಂತೆ ಧಾರವಾಡ ಸಂಸ್ಕೃತಿ ಟ್ರಸ್ಟ್ ಮಹಿಳಾ ಸದಸ್ಯರು ರಾಷ್ಟ್ರಪತಿಗೆ ಮನವಿ ರವಾನಿಸಿದ್ದಾರೆ.

Same Gender Marriage

ರಾಷ್ಟ್ರಪತಿಗೆ ಸಲ್ಲಿಸಿದ ಪತ್ರ

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳು ಉದ್ಭವಿಸಿದೆ. ಹೀಗಾಗಿ ಪ್ರಶ್ನೆಗಳಿಗೆ ಸಮಂಜಸ ಹಾಗೂ ಸೂಕ್ತ ಉತ್ತರ ಪಡೆಯಲು ಮತ್ತು ತರ್ಕಬದ್ಧ ನಿರ್ಣಯವನ್ನು ತೆಗೆದುಕೊಳ್ಳಲು ಸಂಸತ್‌ಗೆ ಅವಕಾಶ ಮಾಡಿಕೊಡುವಂತೆ ಕೇಂದ್ರಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ.

ಇದನ್ನೂ ಓದಿ: Same-sex marriage hearing: ಸಲಿಂಗ ಸಂಬಂಧ ಎಂಬುದು ಕೇವಲ ದೈಹಿಕ ಮಾತ್ರವಲ್ಲ: ಸಿಜೆಐ ಡಿವೈ ಚಂದ್ರಚೂಡ್

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಸಂವಿಧಾನ ಪೀಠಕ್ಕೆ, ಕೇಂದ್ರ ಸರ್ಕಾರ ಪರವಾಗಿ ಹಾಜರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಈ ಮನವಿಯನ್ನು ಮಾಡಿದ್ದಾರೆ. ಸುಪ್ರೀಂ ಕೋರ್ಟ್ ವ್ಯವಹರಿಸುತ್ತಿರುವ ಈ ವಿಚಾರವು ತೀರಾ ಸೂಕ್ಷ್ಮವಾಗಿದೆ. ಅಲ್ಲದೆ, ಸಮಾಜದ ಮೇಲೆ ತೀವ್ರತರದ ಪರಿಣಾಮವನ್ನೂ ಬೀರುತ್ತದೆ. ಮುಖ್ಯವಾಗಿ ಮದುವೆ ಎಂದರೇನು? ಯಾರ ನಡುವೆ ನಡೆಯುತ್ತದೆ? ಎಂಬುದೇ ಪ್ರಶ್ನೆಯಾಗಿದೆ. ಈ ಸಂಬಂಧಿಸಿದಂತೆ ಸಮಾಜದಲ್ಲಿ ಮತ್ತು ವಿವಿಧ ರಾಜ್ಯಗಳ ಸದನಗಳಲ್ಲಿ ಚರ್ಚೆಯ ಅಗತ್ಯವಿರುವ ಹಿನ್ನೆಲೆ ಸಂಸತ್ತಿನಲ್ಲಿ ಈ ವಿಚಾರದ ನಿರ್ಣಯಕ್ಕೆ ಅನುವು ಮಾಡಿಕೊಡಬೇಕು ಎಂದು ಕೋರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:42 pm, Thu, 27 April 23

ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​