ಹುಬ್ಬಳ್ಳಿ: ಮಹಾಮಾರಿ ಕೊರೊನಾ ಮತ್ತೆ ಗುಪ್ತಗಾಮಿನಿಯಾಗಿ ಜನರ ದೇಹ ಸೇರಲು ಶುರು ಮಾಡಿದೆ. ರಾಜ್ಯದಲ್ಲಿ ಆತಂಕದ ಮೋಡ ಕವಿದಿದೆ. ಅದರಲ್ಲೂ ಧಾರವಾಡದ ಎಸ್ಡಿಎಂ ಕಾಲೇಜು ಕೊರೊನಾ ಹಾಟ್ ಸ್ಪೋರ್ಟ್ ಆಗಿದೆ. 300ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಸದ್ಯ ಈಗ ಧಾರವಾಡದ ಎಸ್ಡಿಎಂ ಕಾಲೇಜಿನಲ್ಲಿ ಕೊರೊನಾ ಸ್ಫೋಟಕ್ಕೆ ಕೇರಳ ನಂಟೇ ಕಾರಣ ಎನ್ನಲಾಗುತ್ತಿದೆ.
ಮೂವರಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೊನಾ
ಮೂವರು ವಿದ್ಯಾರ್ಥಿಗಳಿಂದ ಇಡೀ ಜಿಲ್ಲೆಗೆ ಆತಂಕ ಶುರುವಾಗಿದೆ. ಕೇರಳದ ಇಬ್ಬರು ಹಾಗೂ ಮಹಾರಾಷ್ಟ್ರದ ಒಬ್ಬ ವಿದ್ಯಾರ್ಥಿ ಸೇರಿದಂತೆ ಮೂವರು ತಮ್ಮ ತವರಿಗೆ ಹೋಗಿ ಬಂದಿದ್ದರು. ಅವರಿಂದಲೇ ಕೊರೊನಾ ಬೇರೆಯವರಿಗೂ ತಗುಲಿದೆ ಎಂದು ಧಾರವಾಡ ಜಿಲ್ಲಾಡಳಿತ ಸ್ಫೋಟಕ ಮಾಹಿತಿ ಹೊರ ಹಾಕಿದೆ.
ಈ ಮೂವರು ವಿದ್ಯಾರ್ಥಿಗಳು ತವರಿನಿಂದ ಬಂದು ಕಾಲೇಜಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ರು. ಹೀಗಾಗೇ ಎಲ್ಲರಿಗೂ ಸೋಂಕು ಹರಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ಱಂಡಮ್ ಟೆಸ್ಟ್ಗೆ ನಿರ್ಧಾರ ಮಾಡಲಾಗಿದೆ. ಆ ಮೂವರು ವಿದ್ಯಾರ್ಥಿಗಳನ್ನ ಐಸೋಲೆಟ್ ಮಾಡದ್ದಾರೆ.
ಕೊರೊನಾ ಹಾಟ್ ಸ್ಪೋರ್ಟ್ ಆದ ಎಸ್ಡಿಎಂ ಕಾಲೇಜು
ಕಳೆದ ಮೂರ್ನಾಲ್ಕು ದಿನದಿಂದ ಎಸ್‌ಡಿಎಂ ಕಾಲೇಜಿನಲ್ಲಿ ಸೋಂಕು ಸ್ಫೋಟಗೊಳ್ಳುತ್ತಿದೆ. ಮೊದಲು 66 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿತ್ತು. ಬಳಿಕ 182 ವಿದ್ಯಾರ್ಥಿಗಳಲ್ಲಿ ಸೋಂಕು ಕಂಡು ಬಂದಿತ್ತು. ಈಗ ಒಟ್ಟು 306 ಪ್ರಕರಣಗಳು ದಾಖಲಾಗಿವೆ. ಒಟ್ಟು 3973 ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿತ್ತು. 2,217 ಜನರ ಪೈಕಿ 25 ಜನರಿಗೆ ಮಾತ್ರ ಸೋಂಕು ದೃಢಪಟ್ಟಿರೋದ್ರಿಂದ ಎಸ್‌ಡಿಎಂ ಕಾಲೇಜಿನಲ್ಲಿ ಕೊಂಚ ಮಟ್ಟಿಗೆ ನಿರಾಳ ಕಂಡುಬಂದಿದೆ.
ಮೊದಲಿಗೆ ಪರೀಕ್ಷೆ ಮಾಡಿದ್ದ 1,756 ಪ್ರಕರಣಗಳಲ್ಲಿ 281 ಪ್ರಕರಣ ಪತ್ತೆಯಾಗಿದ್ದವು. ಇದರಿಂದ ಅಧಿಕಾರಿಗಳಿಗೆ ಆತಂಕ ಹೆಚ್ಚಾಗಿತ್ತು. ಇನ್ನುಳಿದ 2,217 ಜನರಿಗೂ ಕೊರೊನಾ ಪರೀಕ್ಷೆ ಮಾಡಲಾಗಿದ್ದು ಅದರಲ್ಲಿ ಕೇವಲ 25 ಪಾಸಿಟಿವ್ ಪತ್ತೆಯಾಗಿದೆ. ಕಡಿಮೆ ಸೋಂಕಿತರು ಪತ್ತೆಯಾದ ಹಿನ್ನೆಲೆ ಜಿಲ್ಲಾಡಳಿತ ನಿಟ್ಟುಸಿರು ಬಿಟ್ಟಿದೆ. ಆದರೂ ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ಧಾರ ಮಾಡಿದೆ. ಎಸ್ಡಿಎಂ ಕಾಲೇಜಿನಲ್ಲಿ ಸಂಪೂರ್ಣ ಕೊವಿಡ್ ಇಳಿಯುವವರೆಗೆ ಒಪಿಡಿ ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ.
ಇನ್ನು ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಕೊವಿಡ್ ಪರೀಕ್ಷೆ ಸಂಖ್ಯೆ ಹೆಚ್ಚಳಕ್ಕೆ ರಾಜ್ಯ ಸರಕಾರದಿಂದ ನೂತನ ಆದೇಶ ಹೊರಡಿಸಲಾಗಿದೆ. ನಿತ್ಯವೂ 5000 ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಈ ಮುಂಚೆ ನಿತ್ಯ 500 ಪರೀಕ್ಷೆ ಮಾಡಲಾಗುತ್ತಿತ್ತು. ಕೊರೊನಾ ಸ್ಫೋಟದ ಬಳಿಕ ಕೊರೊನಾ ಪರೀಕ್ಷೆಯ ಸಂಖ್ಯೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾ ಸ್ಫೋಟ; ಮತ್ತೆ ಹೊಸದಾಗಿ 25 ಕೇಸ್ಗಳು ಪತ್ತೆ, ಕೊವಿಡ್ ಪರೀಕ್ಷೆ ಸಂಖ್ಯೆ ಹೆಚ್ಚಳ