ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾ ಸ್ಫೋಟ; ಮತ್ತೆ ಹೊಸದಾಗಿ 25 ಕೇಸ್​ಗಳು ಪತ್ತೆ, ಕೊವಿಡ್ ಪರೀಕ್ಷೆ ಸಂಖ್ಯೆ ಹೆಚ್ಚಳ

ಕಳೆದ ಮೂರ್ನಾಲ್ಕು ದಿನದಿಂದ ಎಸ್‌ಡಿಎಂ ಕಾಲೇಜಿನಲ್ಲಿ ಸೋಂಕು ಸ್ಫೋಟಗೊಳ್ಳುತ್ತಿದೆ. ಮೊದಲು 66 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿತ್ತು. ಬಳಿಕ 182 ವಿದ್ಯಾರ್ಥಿಗಳಲ್ಲಿ ಸೋಂಕು ಕಂಡು ಬಂದಿತ್ತು. ಈಗ ಒಟ್ಟು 306 ಪ್ರಕರಣಗಳು ದಾಖಲಾಗಿವೆ.

ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾ ಸ್ಫೋಟ; ಮತ್ತೆ ಹೊಸದಾಗಿ 25 ಕೇಸ್​ಗಳು ಪತ್ತೆ, ಕೊವಿಡ್ ಪರೀಕ್ಷೆ ಸಂಖ್ಯೆ ಹೆಚ್ಚಳ
ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜ್
Follow us
| Updated By: ಆಯೇಷಾ ಬಾನು

Updated on:Nov 28, 2021 | 1:32 PM

ಧಾರವಾಡ: ನಗರದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾ ಸೋಂಕಿತರು ಸಂಖ್ಯೆ ಹೆಚ್ಚಾಗುತ್ತಲೇ ಇದೆ. ನಿನ್ನೆ ಮತ್ತೆ ಹೊಸದಾಗಿ 25 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈವರೆಗೆ ಎಸ್‌ಡಿಎಂ ಕಾಲೇಜಿನ 306 ಜನರಿಗೆ ಸೋಂಕು ತಗುಲಿದೆ.

ಕಳೆದ ಮೂರ್ನಾಲ್ಕು ದಿನದಿಂದ ಎಸ್‌ಡಿಎಂ ಕಾಲೇಜಿನಲ್ಲಿ ಸೋಂಕು ಸ್ಫೋಟಗೊಳ್ಳುತ್ತಿದೆ. ಮೊದಲು 66 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿತ್ತು. ಬಳಿಕ 182 ವಿದ್ಯಾರ್ಥಿಗಳಲ್ಲಿ ಸೋಂಕು ಕಂಡು ಬಂದಿತ್ತು. ಈಗ ಒಟ್ಟು 306 ಪ್ರಕರಣಗಳು ದಾಖಲಾಗಿವೆ. ಒಟ್ಟು 3973 ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿತ್ತು. 2,217 ಜನರ ಪೈಕಿ 25 ಜನರಿಗೆ ಮಾತ್ರ ಸೋಂಕು ದೃಢಪಟ್ಟಿರೋದ್ರಿಂದ ಎಸ್‌ಡಿಎಂ ಕಾಲೇಜಿನಲ್ಲಿ ಕೊಂಚ ಮಟ್ಟಿಗೆ ನಿರಾಳ ಕಂಡುಬಂದಿದೆ.

ಮೊದಲಿಗೆ ಪರೀಕ್ಷೆ ಮಾಡಿದ್ದ 1,756 ಪ್ರಕರಣಗಳಲ್ಲಿ 281 ಪ್ರಕರಣ ಪತ್ತೆಯಾಗಿದ್ದವು. ಇದರಿಂದ ಅಧಿಕಾರಿಗಳಿಗೆ ಆತಂಕ ಹೆಚ್ಚಾಗಿತ್ತು. ಇನ್ನುಳಿದ 2,217 ಜನರಿಗೂ ಕೊರೊನಾ ಪರೀಕ್ಷೆ ಮಾಡಲಾಗಿದ್ದು ಅದರಲ್ಲಿ ಕೇವಲ 25 ಪಾಸಿಟಿವ್ ಪತ್ತೆಯಾಗಿದೆ. ಕಡಿಮೆ ಸೋಂಕಿತರು ಪತ್ತೆಯಾದ ಹಿನ್ನೆಲೆ ಜಿಲ್ಲಾಡಳಿತ ನಿಟ್ಟುಸಿರು ಬಿಟ್ಟಿದೆ. ಆದರೂ ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ಧಾರ ಮಾಡಿದೆ. ಎಸ್ಡಿಎಂ ಕಾಲೇಜಿನಲ್ಲಿ ಸಂಪೂರ್ಣ ಕೊವಿಡ್ ಇಳಿಯುವವರೆಗೆ ಒಪಿಡಿ ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ.

ಇನ್ನು ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ‌ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಕೊವಿಡ್ ಪರೀಕ್ಷೆ ಸಂಖ್ಯೆ ಹೆಚ್ಚಳಕ್ಕೆ ರಾಜ್ಯ ಸರಕಾರದಿಂದ ನೂತನ ಆದೇಶ ಹೊರಡಿಸಲಾಗಿದೆ. ನಿತ್ಯವೂ 5000 ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಈ ಮುಂಚೆ ನಿತ್ಯ 500 ಪರೀಕ್ಷೆ ಮಾಡಲಾಗುತ್ತಿತ್ತು. ಕೊರೊನಾ ಸ್ಫೋಟದ ಬಳಿಕ ಕೊರೊನಾ ಪರೀಕ್ಷೆಯ ಸಂಖ್ಯೆ ಹೆಚ್ಚಿಸಲಾಗಿದೆ.

ವ್ಯಾಕ್ಸಿನೇಷನ್​​​ ಪ್ರಮಾಣ ಹೆಚ್ಚಳ ವ್ಯಾಕ್ಸಿನೇಷನ್​​​ ಪ್ರಮಾಣ ಹೆಚ್ಚಳ ಮಾಡಲಾಗುವುದು. ಕೊರೊನಾ ಸೋಂಕು ಎಲ್ಲರೂ ಸೇರಿ ನಿಯಂತ್ರಿಸಿದ್ದೇವೆ ಎಂದು SDM ಕಾಲೇಜಿಗೆ ಭೇಟಿ ಬಳಿಕ ಧಾರವಾಡದಲ್ಲಿ ಸಚಿವ ಮುನೇನಕೊಪ್ಪ ತಿಳಿಸಿದ್ದಾರೆ. ಆಸ್ಪತ್ರೆ, ಜಿಲ್ಲಾಡಳಿತ ಸೇರಿ ಕೊರೊನಾ ನಿಯಂತ್ರಿಸಿದ್ದೇವೆ. ಒಪಿಡಿ ಪುನರಾಂಭದ ಬಗ್ಗೆ ಡಿಸಿ, ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸ್ತಾರೆ. ಕಂಟೇನ್ಮೆಂಟ್ ಜೋನ್​ನಲ್ಲಿರುವ ಎಲ್ಲರಿಗೂ ತಪಾಸಣೆ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ.

ಮದುವೆಗೆ ಕಂಟಕವಾದ ಕೊರೊನಾ ನ‌. 17ರಂದು ಸಭಾಭವನದಲ್ಲಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಸಮಾರಂಭವಿತ್ತು. ಅದೇ ಸಭಾ ಭವನದಲ್ಲಿ ನ. 19ರಂದು ಅದ್ದೂರಿ ಮದುವೆ ಕೂಡ ನಡೆದಿದೆ. ಸದ್ಯ ಮದುವೆಗೆ ಬಂದವರ ಪತ್ತೆಗಾಗಿ ಜಿಲ್ಲಾಡಳಿತ ಹರ ಸಾಹಸ ಪಡುತ್ತಿದೆ. ಮದುವೆ ಮನೆಯವರನ್ನೂ ತಪಾಸಣೆ ಮಾಡಲು ನಿರ್ಧಾರ ಮಾಡಿದೆ. ಧಾರವಾಡ SDM ಕಾಲೇಜಿನಲ್ಲಿ ಕೊರೊನಾ ಸ್ಫೋಟ ಹಿನ್ನೆಲೆ ಕಾಲೇಜು ಸುತ್ತಮುತ್ತಲಿನ ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ಶಾಲಾ-ಕಾಲೇಜು, ಅಂಗನವಾಡಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಮತ್ತೊಂದು ಆಟ ಕಟ್ಟಿದ ಕೊರೊನಾ: ಆನೇಕಲ್​ ಶಾಲೆಯಲ್ಲೇ ವಿದ್ಯಾರ್ಥಿಗಳಿಗೆ ಕ್ವಾರಂಟೈನ್, ಧಾರವಾಡ ಕಾಲೇಜಿನಲ್ಲಿ ಉಲ್ಬಣ, ಮದುವೆಗೆ ಕಂಟಕ

Published On - 7:47 am, Sun, 28 November 21