ಆರ್‌ಟಿಐ ಕಾರ್ಯಕರ್ತನ ಕಿರುಕುಳ: ಬೇಸತ್ತ ಪಿಡಿಒ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನ
ಧಾರವಾಡ(Dharwad) ತಾಲೂಕಿನ ಯರಿಕೊಪ್ಪ ಗ್ರಾಮ ಪಂಚಾಯತಿ ಪಿಡಿಒ ‘ನನಗೂ ಸೇರಿದಂತೆ ಬಹಳ ಅಧಿಕಾರಿಗಳಿಗೆ ರೊಟ್ಟಿಗವಾಡ ಕಿರುಕುಳ ಕೊಟ್ಟಿದ್ದಾರೆ. ಮಾಡಲು ಆಗದೇ ಇರುವ ಕೆಲಸಗಳನ್ನು ಮಾಡಲು ಒತ್ತಾಯಿಸುತ್ತಾರೆ. ಅದಕ್ಕಾಗಿ ನನ್ನ ಜೀವನ ಇಲ್ಲಿಗೆ ಮುಕ್ತಾಯಗೊಳಿಸಲು ತಿರ್ಮಾನಿಸಿದ್ದೇನೆ. ವಿಷ ಕುಡಿಯುತ್ತಿದ್ದೇನೆ I am SORRY ಎಂದು ವಿಡಿಯೋ ಮಾಡಿ ಸ್ನೇಹಿತರಿಗೆ ಹಾಗೂ ಅನೇಕರಿಗೆ ವಾಟ್ಸಾಪ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಧಾರವಾಡ, ನ.29: ಆರ್‌ಟಿಐ ಕಾರ್ಯಕರ್ತ(RTI Activist) ನ ಕಿರುಕುಳಕ್ಕೆ ಬೇಸತ್ತು ಧಾರವಾಡ(Dharwad) ತಾಲೂಕಿನ ಯರಿಕೊಪ್ಪ ಗ್ರಾಮ ಪಂಚಾಯತಿ ಪಿಡಿಒ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಪಿಡಿಒ ನಾಗರಾಜ್ ಆತ್ಮಹತ್ಯೆ ಯತ್ನಕ್ಕೂ ಮುಂಚೆ ವಿಡಿಯೋ ಮಾಡಿ, ಆರ್‌ಟಿಐ ಕಾರ್ಯಕರ್ತ ಮಲ್ಲಿಕಾರ್ಜುನ ರೊಟ್ಟಿಗವಾಡ ಎಂಬಾತ ಕಿರುಕುಳ ನೀಡಿದ ಹಿನ್ನಲೆ ಇಲಿ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
‘ನನಗೂ ಸೇರಿದಂತೆ ಬಹಳ ಅಧಿಕಾರಿಗಳಿಗೆ ರೊಟ್ಟಿಗವಾಡ ಕಿರುಕುಳ ಕೊಟ್ಟಿದ್ದಾರೆ. ಮಾಡಲು ಆಗದೇ ಇರುವ ಕೆಲಸಗಳನ್ನು ಮಾಡಲು ಒತ್ತಾಯಿಸುತ್ತಾರೆ. ಅದಕ್ಕಾಗಿ ನನ್ನ ಜೀವನ ಇಲ್ಲಿಗೆ ಮುಕ್ತಾಯಗೊಳಿಸಲು ತಿರ್ಮಾನಿಸಿದ್ದೇನೆ. ವಿಷ ಕುಡಿಯುತ್ತಿದ್ದೇನೆ I am SORRY ಎಂದು ವಿಡಿಯೋ ಮಾಡಿ ಸ್ನೇಹಿತರಿಗೆ ಹಾಗೂ ಅನೇಕರಿಗೆ ವಾಟ್ಸಾಪ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದರು. ವಾಟ್ಸಾಪ್ ಗಮನಿಸಿ ಸ್ನೇಹಿತರು ಹುಡುಕಿದ್ದು ಧಾರವಾಡ-ಬೆಳಗಾವಿ ರಸ್ತೆಯಲ್ಲಿ ಪಕ್ಕದಲ್ಲಿ ವಿಷ ಕುಡಿದ ಬಳಿಕ ಸಿಕ್ಕಿದ್ದು, ಕೂಡಲೇ ಆತನನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಇದನ್ನೂ ಓದಿ:ಹಾವೇರಿ: ಪ್ರಿನ್ಸಿಪಾಲ್ ನಿಂದನೆ ಆರೋಪ; ದ್ವಿತೀಯ ಪಿಯು ವಿದ್ಯಾರ್ಥಿ ಆತ್ಮಹತ್ಯೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ