AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರಣಾಸಿ ನೋಡಲು ಯಾತ್ರೆ ಹೊರಟ ಧಾರವಾಡ ಜನ; ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್​ಗೆ ಟ್ವೀಟ್ ಮೂಲಕ ಮಾಹಿತಿ

ಈಗಾಗಲೇ ಸಮಿತಿ ಮುಖಂಡರು ಇಷ್ಟೊಂದು ಜನರ ಪ್ರಯಾಣ, ವಸತಿ, ಊಟ ಹಾಗೂ ಇತರೆ ವ್ಯವಸ್ಥೆಗಳ ಬಗ್ಗೆ ವಿವಿಧೆಡೆಯಿಂದ ಮಾಹಿತಿ ಪಡೆದು ಅಂತಿಮ ರೂಪು-ರೇಷೆ ಹಾಕುತ್ತಿದ್ದಾರೆ. ಕಾಶಿಯಲ್ಲಿ ವೀರಶೈವ ಸಮಾಜದ ಬಹುದೊಡ್ಡ ಕಾಶಿಪೀಠದಲ್ಲಿ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ.

ವಾರಣಾಸಿ ನೋಡಲು ಯಾತ್ರೆ ಹೊರಟ ಧಾರವಾಡ ಜನ; ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್​ಗೆ ಟ್ವೀಟ್ ಮೂಲಕ ಮಾಹಿತಿ
ವಾರಣಾಸಿ
TV9 Web
| Updated By: sandhya thejappa|

Updated on:Dec 26, 2021 | 8:48 AM

Share

ಧಾರವಾಡ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಿಂದೂಗಳ ಪವಿತ್ರ ಮತ್ತು ಮೋಕ್ಷ ಸ್ಥಳವೆಂದು ಗುರುತಿಸುವ ವಾರಣಾಸಿ (ಕಾಶಿ)ಯನ್ನು ಇಡೀ ಜಗತ್ತೇ ಅಚ್ಚರಿ ಪಡುವಂತೆ ಸುಧಾರಣೆಗೊಳಿಸಿದ್ದಾರೆ. ಕಾಶಿ ವಿಶ್ವನಾಥ ದೇವಸ್ಥಾನ ಸುಧಾರಣೆಗೊಳ್ಳುತ್ತಿದ್ದಂತೆಯೇ ಧಾರವಾಡದಿಂದ ಏಕಕಾಲಕ್ಕೆ ನೂರಾರು ಜನರು ಕಾಶಿಯಾತ್ರೆಗೆ ಸಜ್ಜಾಗಿದ್ದಾರೆ. ಕಾಶಿಯಲ್ಲಿರುವ ಗಂಗಾ ನದಿಯ ಸ್ವಚ್ಛತೆ ಸೇರಿದಂತೆ ಕಾಶಿ ವಿಶ್ವನಾಥ ದೇವಸ್ಥಾನ ನವೀಕರಣ, ಆವರಣದ ಆಗಲೀಕರಣ, ವಾರಣಾಸಿ ರೈಲು ನಿಲ್ದಾಣ ಸೇರಿದಂತೆ ಇಡೀ ಕಾಶಿಯ ಚಿತ್ರಣವನ್ನೇ ಅಲ್ಲಿನ ಸಂಸದರೂ ಆಗಿರುವ ಪ್ರಧಾನಿ ಮೋದಿ ಬದಲು ಮಾಡಿದ್ದಾರೆ. ನವೀಕರಣಗೊಂಡ ಕಾಶಿಯನ್ನು ಕಣ್ಣಿನಿಂದ ಸವಿಯಲು ಧಾರವಾಡದಿಂದ ಮಹಿಳೆಯರು ಸೇರಿದಂತೆ 25 ಜನರ ಹತ್ತು ತಂಡಗಳಾಗಿ ಇನ್ನೂರಕ್ಕೂ ಹೆಚ್ಚು ಜನರು ಸಜ್ಜಾಗಿದ್ದಾರೆ.

ಹತ್ತು ತಂಡಗಳಾಗಿ ಇನ್ನೂರಕ್ಕೂ ಹೆಚ್ಚು ಜನ ಏಕಕಾಲಕ್ಕೆ ಕಾಶಿಯಾತ್ರೆ ನವೀಕರಣಗೊಂಡ ಕಾಶಿ ವೈಭೋಗದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಧಾರವಾಡದ ಮಾಳಮಡ್ಡಿ ಬಡಾವಣೆಯಲ್ಲಿ ಕಾಶಿಯಾತ್ರೆಯ ಸಮಿತಿಯೊಂದು ರಚನೆಯಾಯಿತು. ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಆರ್ಎಸ್ ಪಾಟೀಲ, ಶಿಕ್ಷಣ ತಜ್ಞ ವಿನಾಯಕ ಜೋಶಿ, ಬಸವರಾಜ ಗರಗ, ಅಶೋಕ ಜೋಶಿ, ರಾಜು ಪಾಟೀಲ ಕುಲಕರ್ಣಿ, ಶರಣು ಅಂಗಡಿ, ಪ್ರಮೋದ ಕಾರಕೂನ್ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಜನ ಮುಖಂಡರು ಒಗ್ಗೂಡಿ ಸಮಿತಿ ಮಾಡಿಕೊಂಡಿದ್ದಾರೆ. ಒಂದೇ ವಾರದಲ್ಲಿ ಎರಡು ಸಭೆಗಳನ್ನ ಮಾಡಿ ಇನ್ನೂರು ಜನ ಈ ಯಾತ್ರೆಗೆ ಹೋಗಲು ಹೆಸರು ನೋಂದಣಿ ಸಹ ಮಾಡಿಸಿಕೊಂಡಿದ್ದಾರೆ. ಈ ಪೈಕಿ 50 ಜನ ಮಹಿಳೆಯರು ಹಾಗೂ ಉಳಿದವರು ಪುರುಷರಿದ್ದಾರೆ. 25 ಜನರಿಗೆ ಒಬ್ಬ ಮುಖಂಡನಾಗಿ ನೇಮಕ ಮಾಡಿದ್ದು, ಅಂತಹ 10 ತಂಡಗಳನ್ನಾಗಿ ರಚನೆ ಮಾಡಲಾಗಿದೆ.

ಪ್ರಯಾಣ, ವಸತಿ, ಊಟ ಹಾಗೂ ಇತರೆ ವ್ಯವಸ್ಥೆಗಳ ಬಗ್ಗೆ ವಿವಿಧೆಡೆಯಿಂದ ಮಾಹಿತಿ ಈಗಾಗಲೇ ಸಮಿತಿ ಮುಖಂಡರು ಇಷ್ಟೊಂದು ಜನರ ಪ್ರಯಾಣ, ವಸತಿ, ಊಟ ಹಾಗೂ ಇತರೆ ವ್ಯವಸ್ಥೆಗಳ ಬಗ್ಗೆ ವಿವಿಧೆಡೆಯಿಂದ ಮಾಹಿತಿ ಪಡೆದು ಅಂತಿಮ ರೂಪು-ರೇಷೆ ಹಾಕುತ್ತಿದ್ದಾರೆ. ಕಾಶಿಯಲ್ಲಿ ವೀರಶೈವ ಸಮಾಜದ ಬಹುದೊಡ್ಡ ಕಾಶಿಪೀಠದಲ್ಲಿ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಧಾರವಾಡದಿಂದ ರೈಲು ಮೂಲಕ ಫೆಬ್ರವರಿ ತಿಂಗಳಲ್ಲಿ ಹೋಗಲು ತೀರ್ಮಾನ ಮಾಡಲಾಗಿದೆ. ಪ್ರಯಾಣಕ್ಕಾಗಿ ನಾಲ್ಕು ದಿನ ಹಾಗೂ ಕಾಶಿ, ತ್ರಿವೇಣಿ ಸಂಗಮ ಸೇರಿದಂತೆ ಸಮೀಪದ ಯಾತ್ರಾ ಸ್ಥಳಗಳನ್ನು ಉಳಿದ ಮೂರು ದಿನಗಳಲ್ಲಿ ನೋಡಿಕೊಂಡು ಬರುವುದು. ಹೀಗೆ ಒಟ್ಟು ಏಳು ದಿನಗಳ ಕಾಶಿಯಾತ್ರೆಯ ಯೋಜನೆಯಿದು. ಸುಮಾರು ಇನ್ನೂರಕ್ಕೂ ಹೆಚ್ಚು ನೂರು ಜನರು ಒಟ್ಟಿಗೆ ಬರುತ್ತಿರುವ ಸಂಗತಿಯನ್ನು ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಟ್ವೀಟ್ ಮೂಲಕ ಮಾಹಿತಿ ನೀಡಿದ್ದೇವೆ ಅಂತ ವಿನಾಯಕ ಜೋಶಿ ಮಾಹಿತಿ ನೀಡಿದ್ದಾರೆ.

ಕಾಶಿ ಸುಧಾರಣೆಗೊಳ್ಳುತ್ತಿದ್ದಂತೆ ಮೋದಿ ಕಾರ್ಯಕ್ಕೆ ಪ್ರೇರಿತಗೊಂಡು ಈ ಯಾತ್ರೆ ಕಾಶಿ ವಿಶ್ವನಾಥ ದೇವಾಲಯವು ಹಿಂದೂಗಳ ಪ್ರಮುಖ ಪೂಜಾ ಸ್ಥಳಗಳಲ್ಲಿ ಒಂದು. ವಿಶ್ವನಾಥ ದೇವಾಲಯದಲ್ಲಿ ಶಿವ, ವಿಶ್ವೇಶ್ವರ ಜ್ಯೋತಿರ್ಲಿಂಗವಿದೆ. ಇದು ಭಾರತದ ಆಧ್ಯಾತ್ಮಿಕ ಇತಿಹಾಸದಲ್ಲಿ ವಿಶೇಷ ಮಹತ್ವ ಹೊಂದಿದೆ. ಈ ದೇವಸ್ಥಾನಕ್ಕೆ ಭೇಟಿ ನೀಡುವುದು, ಗಂಗಾನದಿಯಲ್ಲಿ ಸ್ಥಾನ ಹಾಗೂ ಗಂಗಾ ಆರತಿ ವೀಕ್ಷಣೆ ನೋಡುವುದು ಜೀವನದಲ್ಲಿ ಮೋಕ್ಷ ಪಡೆದಂತೆ ಎಂಬ ನಂಬಿಕೆ. ಈಗ ಹೋಗುತ್ತಿರುವ ಜನರಲ್ಲಿ ಸಾಕಷ್ಟು ಮಂದಿ ಕಾಶಿಯಾತ್ರೆ ಮಾಡಿದ್ದಾರೆ. ಆದರೆ, ಇದೀಗ ಮೋದಿ ಕಾಶಿ ಸೊಬಗನ್ನು ಮತ್ತಷ್ಟು ಹೆಚ್ಚಿಸಿದ್ದರಿಂದ ನವೀಕರಣ ಕಾಶಿ ನೋಡುವ ಬಯಕೆ ಉಂಟಾಗಿದೆ. ಹಿಂದೂಗಳು ಪ್ರಪಂಚದ್ಯಾಂತ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕಾಶಿಗೆ ಭೇಟಿ ನೀಡಲು ಪ್ರಯತ್ನಿಸುತ್ತಾರೆ. ಅಂಥವರ ಆಶಯ ಸಹ ಈ ಯಾತ್ರೆ ಮೂಲಕ ಈಡೇರಲಿದೆ. ನಮ್ಮ ಪ್ರಯತ್ನಕ್ಕೆ ಬಹಳಷ್ಟು ಜನರು ಸ್ಪಂದಿಸಿದ್ದು, ಯಾತ್ರೆಗೆ ಹೊರಡಲು ತೀರ್ಮಾನಿಸಿದ್ದಾರೆ. ಒಬ್ಬರಿಗೆ ಕೇವಲ 5 ರಿಂದ 6 ಸಾವಿರ ರೂಪಾಯಿ ಖರ್ಚು ಬರುವ ಸಾಧ್ಯತೆ ಇದೆ. ರೈಲಿನ ಮೂರು ಬೋಗಿಗಳನ್ನು ಬುಕ್ ಮಾಡಲಾಗುತ್ತಿದೆ. ಸದ್ಯ ಎಲ್ಲೆಡೆ ಚಳಿ ಇರುವ ಕಾರಣ ಫೆಬ್ರವರಿ ತಿಂಗಳಲ್ಲಿ ಯಾತ್ರೆಗೆ ಹೊರಡಲಿದ್ದೇವೆ ಅಂತಾ ವಿಶ್ವ ಹಿಂದೂ ಪರಿಷತ್ ಮುಖ್ಯಸ್ಥ ಆರ್ ಎಸ್. ಪಾಟೀಲ ಟಿವಿ-9 ಜತೆಗೆ ಮಾಹಿತಿ ಹಂಚಿಕೊಂಡರು.

ವರದಿ: ನರಸಿಂಹಮೂರ್ತಿ ಪ್ಯಾಟಿ

ಇದನ್ನೂ ಓದಿ

ಅಫ್ಘಾನಿಸ್ತಾನ- ಪಾಕಿಸ್ತಾನದ ಗಡಿ ಸಂಘರ್ಷ; ಡ್ಯುರಾಂಡ್​ ಲೈನ್​ನಲ್ಲಿ ಉಭಯ ರಾಷ್ಟ್ರಗಳಿಂದ ಗುಂಡಿನ ದಾಳಿ

Year Ender 2021: ಕಷ್ಟದಲ್ಲೂ ಗಮನ ಸೆಳೆದ ಕನ್ನಡ ಸಿನಿಮಾಗಳು; ಈ ವರ್ಷ ಗೆದ್ದವರು ವಿರಳ, ಸೋತವರು ಬಹಳ

Published On - 8:45 am, Sun, 26 December 21

ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?