ಹುಬ್ಬಳ್ಳಿಯ ಮನೆಯೊಂದರಲ್ಲಿ ಏಕಾಏಕಿ ಉದ್ಭವಿಸಿದ ದ್ಯಾಮಮ್ಮ: ದರ್ಶನಕ್ಕೆ ಮುಗಿಬಿದ್ದ ಮಂದಿ
ಮನೆಯಲ್ಲಿ ಮೂರ್ತಿ ಉದ್ಭವವಾಗಿದ್ದು ದೇವಿ ಪವಾಡ ಎಂದು ಗ್ರಾಮದ ಜನ ಹೇಳುತ್ತಿದ್ದಾರೆ. ಲಡ್ಡು ಮುತ್ಯಾ ಸ್ವಾಮೀಜಿ ಬಂದು ಪೂಜೆ ಮಾಡಿದ ಬಳಿಕ, ಇದೀಗ ಗ್ರಾಮದ ಸುತ್ತ ಮುತ್ತಲಿನ ಜನ ಬಂದು ದೇವಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಿದ್ದಾರೆ.
ಹುಬ್ಬಳ್ಳಿ: ಕಳೆದ ಹದಿನೈದು ದಿನಗಳ ಹಿಂದೆ ಎಂದಿನಂತೆ ಇದ್ದ ಮನೆಯಲ್ಲಿ ಇಂದು ಜನ ಮರಳೋ ಜಾತ್ರೆ ಮರಳೋ ಅನ್ನೋವಂತೆ ಜನ ತುಂಬಿ ತುಳುಕುತ್ತಿದ್ದಾರೆ. ಸಾಮಾನ್ಯ ಮನೆ ಈಗ ಮಂದಿರವಾಗಿದೆ. ಸರತಿ ಸಾಲಿನಲ್ಲಿ ನಿಂತು ಮನೆಯೊಳಗೆ ಕೈ ಮುಗಿದು ಹೋಗ್ತೀದಾರೆ. ಇದಕ್ಕೆ ಕಾರಣ ಏಕಾಏಕಿ ಉದ್ಭವವಾದ ಮೂರ್ತಿ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸುರಶೆಟ್ಟಿ ಕೊಪ್ಪ ಗ್ರಾಮದಲ್ಲಿ ಪವಾಡವೊಂದು ಸೃಷ್ಟಿಯಾಗಿದ್ದು ಮನೆ ಒಳಗೆ ಏಕಾಏಕಿ ದೇವರ ಮೂರ್ತಿ ಉದ್ಭವಿಸಿದೆ ಎಂಬ ಮಾತು ಕೇಳಿ ಬಂದಿದೆ.
ಸುರಶೆಟ್ಟಿ ಕೊಪ್ಪ ಗ್ರಾಮದ ಬಸವರಾಜ್ ಕಲಭಾವಿ ಎಂಬುವವರ ಮನೆಯಲ್ಲಿ ಏಕಾಏಕಿ ದ್ಯಾಮಮ್ಮನ ಉದ್ಭವ ಮೂರ್ತಿಯೊಂದು ಸೃಷ್ಟಿಯಾಗಿದೆ. ಕಲಭಾವಿ ಅವರ ಮನೆಯ ಕೋಣೆಯೊಂದರ ಮೂಲೆಯಲ್ಲಿ ಕಳೆದ ಹದಿನೈದು ದಿನಗಳ ಹಿಂದೆ ದ್ಯಾಮಮ್ಮನ ಉದ್ಭವ ಮೂರ್ತಿ ಸೃಷ್ಟಿಯಾಗಿದೆ. ಇದೀಗ ಮನೆಯವರು ದ್ಯಾಮಮ್ಮನಿಗೆ ಅಲಂಕಾರ ಮಾಡಿ ಪೂಜೆ ಮಾಡ್ತಿದಾರೆ. ಉದ್ಭವ ಮೂರ್ತಿಗೆ ಹೂವಿನ ಅಲಂಕಾರ ಮಾಡಿದ್ದು, ಗ್ರಾಮದ ಜನರು ಪವಾಡ ಕಂಡು ಕೈ ಮುಗಿದು ಹೋಗುತ್ತಿದ್ದಾರೆ. ಬಸವರಾಜ್ ಗೆ ಕಳೆದ ಒಂದು ವರ್ಷದಿಂದ ಮೈಮೇಲೆ ದೇವಿ ಬರ್ತಿದ್ದಾಳಂತೆ. ನಾನು ನಿಮ್ಮ ಮನೆಯಲ್ಲಿ ಉದ್ಭವ ಮೂರ್ತಿಯಾಗ್ತೀನಿ ಎಂದು ದೇವಿ ಈ ಮೊದಲೇ ಹೇಳಿದ್ಲಂತೆ. ಮೊದಲೇ ದೇವಿ ನಾನು ಇಲ್ಲಿ ಉದ್ಭವ ಮೂರ್ತಿ ಯಾಗ್ತೀನಿ ಎಂದು ಬಸವರಾಜ್ ಗೆ ತಿಳಿಸಿದ್ಲಂತೆ. ನಾನು ಹೇಳೋವರೆಗೂ ಕೋಣೆ ತೆರೆಯಬೇಡಿ ಎಂದು ದೇವಿ ಹೇಳಿದ್ರಂತೆ. ಬಳಿಕ ದೇವಿಯ ಅಪ್ಪಣೆ ಮೇರೆಗೆ ಬಸವರಾಜ್ ಕೋಣೆ ತೆರೆದಿದ್ದು ಕೋಣೆಯಲ್ಲಿ ಮೂರ್ತಿ ಉದ್ಭವವಾಗಿದೆಯಂತೆ. ಹೀಗಾಗಿ ಬಸವರಾಜ್ ಅವರು ಲಡ್ಡು ಮುತ್ಯಾ ಅಜ್ಜರನ್ನ ಕರೆದು ಪೂಜೆ ಮಾಡಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್, ಹಲಾಲ್ ವಿರುದ್ಧ ಧ್ವನಿ ಎತ್ತಿದಾಗ ನನಗೆ, ನನ್ನ ಮಗನಿಗೆ ದುಬೈನಿಂದ ಬೆದರಿಕೆ ಕರೆ ಬಂದಿತ್ತು: ರೇಣುಕಾಚಾರ್ಯ
ಇನ್ನು ಈ ಮನೆಯಲ್ಲಿ ಮೂರ್ತಿ ಉದ್ಭವವಾಗಿದ್ದು ದೇವಿ ಪವಾಡ ಎಂದು ಗ್ರಾಮದ ಜನ ಹೇಳುತ್ತಿದ್ದಾರೆ. ಲಡ್ಡು ಮುತ್ಯಾ ಸ್ವಾಮೀಜಿ ಬಂದು ಪೂಜೆ ಮಾಡಿದ ಬಳಿಕ, ಇದೀಗ ಗ್ರಾಮದ ಸುತ್ತ ಮುತ್ತಲಿನ ಜನ ಬಂದು ದೇವಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಿದ್ದಾರೆ. ಪವಾಡವೋ ಅಥವಾ ಕಲ್ಲಿಗೆ ಆ ರೀತಿ ಅಲಂಕಾರ ಮಾಡಿ ಅದೇ ಉದ್ಭವ ಮೂರ್ತಿ ಎಂದು ಜನರಿಗೆ ಮರಳು ಮಾಡಲಾಗಿದೆಯಾ ಅನ್ನೋ ಪ್ರಶ್ನೆಯೂ ಕಾಡ್ತಿದೆ. ಯಾಕಂದ್ರೆ ದೇವಿ ಮೈಮೇಲೆ ಬಂದು ಉದ್ಭವ ವಾಗ್ತಿನಿ ಅಂತಾ ಹೇಳಿದ್ದು ಕೇಳಿದ್ರೆ ಅನುಮಾನ ಸೃಷ್ಟಿಯಾಗ್ತಿದೆ. ಆದ್ರೆ ಗ್ರಾಮದ ಜನ ಮಾತ್ರ ಇದೊಂದು ಪವಾಡ ಎಂದು ಪೂಜೆ ಮಾಡ್ತಿದಾರೆ. ಮಹಿಳೆಯರು ಕುಂಬ ಹೊತ್ತು ದ್ಯಾಮಮ್ಮನಿಗೆ ಪೂಜೆ ಸಲ್ಲಿಸಿದ್ದಾರೆ. ನಾವು ಮೊದಲು ನಂಬಲಿಲ್ಲ, ಆದ್ರೆ ಅಜ್ಜರನ್ನ ಕರೆಸಿ ನಾವು ಕೋಲೆ ತಗೆದಿದ್ದೇವೆ, ನಮಗೆ ಬಹಳ ಆಶ್ಚರ್ಯವಾಗಿದೆ ಅನ್ನೋದು ಸ್ಥಳೀಯರ ಮಾತು. ದೇವಿ ಪವಾಡವೋ ಏನೋ ಮನೆಯಲ್ಲಿ ಏಕಾಏಕಿ ದೇವಿ ಉದ್ಭವ ಮೂರ್ತಿ ಸೃಷ್ಟಿಯಾಗಿದ್ದು, ಜನರು ಇದೀಗ ಬಸವರಾಜ್ ಕಲಭಾವಿ ಅವರ ಮನೆಯತ್ತ ಓಡೋಡಿ ಬರ್ತಿದ್ದಾರೆ.
ಒಟ್ಟಿನಲ್ಲಿ ಜನ ಮರಳೋ ಜಾತ್ರೆ ಮರಳೋ ಅನ್ನೋ ತರಹ ಮನೆ ಇದೀಗ ದೇವಸ್ಥಾನವಾಗಿದೆ. ಮನೆಯಲ್ಲಿ ಏಕಾಏಕಿ ದೇವಿ ಮೂರ್ತಿ ಉದ್ಭವವಾಗಿರೋದ ಹಲವು ಅನುಮಾನಕ್ಕೆ ಕಾರಣವಾಗಿದೆ. ಜನರನ್ನ ತನ್ನತ್ತ ಸೆಳೆಯಲು ಬಸವರಾಜ್ ಉದ್ಭವ ಮೂರ್ತಿ ಬಂದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರಾ ಎಂಬ ಅನುಮಾನವೂ ವ್ಯಕ್ತವಾಗಿದೆ.
ವರದಿ: ಶಿವಕುಮಾರ್ ಪತ್ತರ್, ಟಿವಿ9 ಹುಬ್ಬಳ್ಳಿ