ಕೈಗಾರಿಕೆಗಳನ್ನು ಸ್ಥಾಪಿಸುವ ವಿಚಾರದಲ್ಲಿ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ: ಮಾಜಿ ಸಿಎಂ ಜಗದೀಶ್ ಶೆಟ್ಟರ್

| Updated By: ವಿವೇಕ ಬಿರಾದಾರ

Updated on: Oct 03, 2022 | 3:13 PM

ಕೈಗಾರಿಕೆಗಳನ್ನು ಸ್ಥಾಪಿಸುವ ವಿಚಾರದಲ್ಲಿ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಜಗದೀಶ್ ಶೆಟ್ಟರ್ ಅಸಮಾಧಾನ ಹೊರಹಾಕಿದ್ದಾರೆ.

ಕೈಗಾರಿಕೆಗಳನ್ನು ಸ್ಥಾಪಿಸುವ ವಿಚಾರದಲ್ಲಿ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ: ಮಾಜಿ ಸಿಎಂ ಜಗದೀಶ್ ಶೆಟ್ಟರ್
ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್
Follow us on

ಧಾರವಾಡ: ಕೈಗಾರಿಕೆಗಳನ್ನು ಸ್ಥಾಪಿಸುವ ವಿಚಾರದಲ್ಲಿ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಅಸಮಾಧಾನ ಹೊರಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ (Hubli) ಐಟಿ-ಬಿಟಿ ಇಲಾಖೆಯ ಅಡಿ ನಡೆದ ಬಿಯೋಂಡ್​​ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯೋಜನೆಯ ವಿಚಾರ ಕೇವಲ ಭಾಷಣಕ್ಕೆ ಸೀಮಿತವಾಗುತ್ತಿದೆ. ಕಾರ್ಯಕ್ರಮಗಳು ಅನುಷ್ಠಾನ ಆಗುತ್ತಿಲ್ಲ. ಇದಕ್ಕೆ ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳು ಕೆಲಸ‌ ಮಾಡಬೇಕು ಎಂದು ಹೇಳಿದರು.

ಫಿಲ್ಡ್ ನಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ‌ ಮಾಡುತ್ತಿಲ್ಲ. ಕೈಗಾರಿಕಾ ಸ್ಥಾಪನೆಗೆ ಪೂರಕ ವಾತಾವರಣ ಮಾತಿನಲ್ಲಿ ಮಾಡಿದರೆ ಸಾಲದು, ಕಾರ್ಯ ಆಗಬೇಕು. ಎಂದು ಪರೋಕ್ಷವಾಗಿ ಮುರುಗೇಶ್ ನಿರಾಣಿ ವಿರುದ್ಧ ಶೆಟ್ಟರ್ ಅಸಮಾಧಾನ ಹೊರ ಹಾಕಿದ್ದಾರೆ.

ವಿಶೇಷ ಹೂಡಿಕೆ ವಲಯ ಬಗ್ಗೆಯೂ ಘೋಷಣೆ ಆಗಿದೆ. ಅದು ಕೂಡ ಕಾರ್ಯಗತವಾಗಿಲ್ಲ. ಕೂಡಲೇ ಸಚಿವ ಸಂಪುಟದಲ್ಲಿ ಚರ್ಚಿಸಿ ಕಾರ್ಯಗತಗೊಳಿಸಿ. ಸಚಿವ ಅಶ್ವತ್ಥ್​ ನಾರಾಯಣ ಈ ಕೆಲಸವನ್ನ ಮಾಡಬೇಕು ಎಂದು ಒತ್ತಾಯಿಸಿದರು.

ಚೆನ್ನಮ್ಮ ಕಿತ್ತೂರು ಬಳಿ ಇಂಟರ್ನ್ಯಾಷನಲ್ ಏರ್ಪೋರ್ಟ್ ​ಸ್ಥಾಪಿಸುವುದಾಗಿ ಸಚಿವರು ಹೇಳಿದ್ದರು. ಇದು ಸಾದ್ಯನಾ? ಯಾವುದಾದರು ತಂಡ ಭೇಟಿ‌ ನೀಡಿದೆಯಾ? ಭೂಮಿ ಮಂಜೂರು ಮಾಡಲು ಎರಡು ಮೂರು ವರ್ಷಗಳಾಗುತ್ತಿದೆ. ಏರ್​​ಪೋರ್ಟ್ ಸಾಧ್ಯತೆ ಬಗ್ಗೆ ಈವರೆಗೂ ಚರ್ಚೆ ಆಗಿದೆಯಾ? ಎಂದು ಶೆಟ್ಟರ್ ಪ್ರಶ್ನಿಸಿದರು. ನಾನು‌ ಸಿಎಂ ಆದಾಗ, ಇನ್ಫೋಸಿಸ್​ಗೆ ಜಾಗ ನೀಡಿದ್ದೆ. ಆದರೇ ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿಲ್ಲ ಎಂದರು.

ಅಂಕೋಲಾ ರೇಲ್ವೆ ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ನಡೆಸಿದ್ದೇನೆ: ಪ್ರಲ್ಹಾದ್​  ಜೋಶಿ 

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಜೋಶಿ  ಮಾತನಾಡಿ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬದಲಾವಣೆಯಾಗುತ್ತಿದೆ. ಬಿಯಾಂಡ್ ಬೆಂಗಳೂರಿಗೆ ಪ್ರಚಾರ ಕೊಡಬೇಕಿದೆ. ಶೆಟ್ಟರ್ ಅಂಕೋಲಾ ರೇಲ್ವೆ ಯೋಜನೆ ಬಗ್ಗೆ ಹೇಳಿದರು. ದೇಶದಲ್ಲಿ ಕೋರ್ಟ್​ಗೆ ಹೋಗೋರು ಹೆಚ್ಚಾಗಿದ್ದಾರೆ. ಕಸ ಹಾಕುವ ವಿಚಾರಕ್ಕೂ ಕೋರ್ಟ್​ಗೆ ಹೋಗುತ್ತಾರೆ. ಅದೇ ರೀತಿ ಅಂಕೋಲಾ ರೇಲ್ವೆ ವಿಚಾರದಲ್ಲೂ ಕೋರ್ಟ್ ಮೊರೆ ಹೋಗಿದ್ದಾರೆ. ನಾವು ಅಂಕೋಲಾ ರೈಲ್ವೆಗೆ ಪ್ರಯತ್ನ ನಡೆಸಿದ್ದೇವೆ. ನಾನು ಅದಕ್ಕಾಗಿ ದೆಹಲಿಯಿಂದ ಬಂದಿದ್ದು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:05 pm, Mon, 3 October 22