ನಾನು ಹಿಂದೂ, ಆದರೆ ಹಿಂದುತ್ವಕ್ಕೆ ವಿರುದ್ಧವಾಗಿದ್ದೇನೆ: ಮಾಜಿ ಸಿಎಂ ಸಿದ್ಧರಾಮಯ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 06, 2023 | 3:04 PM

ನಾನು ಹಿಂದೂ, ಆದರೆ ನಾನು ಹಿಂದುತ್ವಕ್ಕೆ ವಿರುದ್ಧವಾಗಿದ್ದೇನೆ. ಧರ್ಮ ಇಟ್ಟುಕೊಂಡು ರಾಜಕೀಯ ಮಾಡಲು ವಿರೋಧವಿದೆ ಎಂದು ಮಾಜಿ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಾನು ಹಿಂದೂ, ಆದರೆ ಹಿಂದುತ್ವಕ್ಕೆ ವಿರುದ್ಧವಾಗಿದ್ದೇನೆ: ಮಾಜಿ ಸಿಎಂ ಸಿದ್ಧರಾಮಯ್ಯ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
Image Credit source: asianetnews.com
Follow us on

ಹುಬ್ಬಳ್ಳಿ: ನಾನು ಹಿಂದೂ, ಆದರೆ ನಾನು ಹಿಂದುತ್ವಕ್ಕೆ (Hinduism) ವಿರುದ್ಧವಾಗಿದ್ದೇನೆ. ಧರ್ಮ ಇಟ್ಟುಕೊಂಡು ರಾಜಕೀಯ ಮಾಡಲು ವಿರೋಧವಿದೆ. ಸಂವಿಧಾನದಲ್ಲಿ ಎಲ್ಲ ಧರ್ಮಗಳು ಸಮಾನ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಹಿಂದೂ, ಕ್ರೈಸ್ತ, ಮುಸ್ಲಿಂ ಎಲ್ಲ ಧರ್ಮಗಳು ಕೂಡ ಸಮಾನವಾಗಿವೆ. ಯಾವುದೇ ಧರ್ಮ ಹೆಚ್ಚು ಅಲ್ಲ, ಕಡಿಮೆಯೂ ಅಲ್ಲ. ಧರ್ಮ ಮತ್ತು ಜಾತಿ ಆಧಾರದ ಮೇಲೆ ರಾಜಕಾರಣ ಮಾಡಬಾರದು. ಭಾರತ ಬಹುತ್ವದ ದೇಶ. ಎಲ್ಲರನ್ನೂ ಮನುಷ್ಯರಾಗಿ ಕಾಣಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಸಂದರ್ಭದಲ್ಲಿ ಆರ್​​ಎಸ್​ಎಸ್​ ಸ್ಥಾಪನೆ ಆಗಿದೆ. ಆದರೆ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ರಾ ಎಂದು ಪ್ರಶ್ನಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಆರ್​ಎಸ್​ಎಸ್​ನವರು ಭಾಗಿಯಾಗಿಲ್ಲ. 1925-47ರವರೆಗೆ ಯಾರಾದ್ರು ಭಾಗವಹಿಸಿದ್ರೆ ಹೇಳಿ ನೋಡೋಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ತಮ್ಮ ಹೇಳಿಕೆ ಸಮರ್ಥಿಸಿಕೊಂಡ ಸಿದ್ದರಾಮಯ್ಯ

ನಾಯಿಮರಿ ಅಂತಾ ನಾನು ಹೇಳಿರುವುದು ತಪ್ಪಲ್ಲ. ಹಳ್ಳಿ ಭಾಷೆಯಲ್ಲಿ ಹೆದರುವವರಿಗೆ ನಾಯಿಮರಿ ತರಹ ಅಂತೀವಿ. ಹಳ್ಳಿ ಭಾಷೆಯಲ್ಲಿ ನಾನು ಮಾತನಾಡಿದ್ದೇನೆ ಎಂದು ಮೋದಿ ಮುಂದೆ ಸಿಎಂ ಬೊಮ್ಮಾಯಿ ನಾಯಿಮರಿ ರೀತಿ ಇರ್ತಾರೆ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಮುಖ್ಯಮಂತ್ರಿಗಳಿಗೆ ಅಗೌರವ ಮಾಡಬೇಕೆಂಬ ಉದ್ದೇಶ ಇಲ್ಲ. ರಾಜ್ಯದ ಹಿತದೃಷ್ಟಿಯಿಂದ ಪ್ರಧಾನಿ ಬಳಿ ಧೈರ್ಯವಾಗಿರಬೇಕು ಅನ್ನೋ ಅರ್ಥದಲ್ಲಿ ಹೇಳಿದ್ದೇನೆ. ನನಗೆ ಟಗರು, ಹೌದು ಹುಲಿಯಾ ಅನ್ನೋದು ಅನುಮಾನನಾ? ಬಿ.ಎಸ್.ಯಡಿಯೂರಪ್ಪಗೆ ರಾಜಾಹುಲಿ ಅನ್ನೋದು ಅನುಮಾನನಾ? ಎಂದು ಪ್ರಶ್ನಿಸಿದರು. ಪ್ರಾಣಿ, ಪಕ್ಷಿಗಳು, ಮರಗಳಿಗೆ ಹೋಲಿಕೆ ಮಾಡೋದು ಸಹಜ ಎಂದು ಹೇಳಿದರು.

ಇದನ್ನೂ ಓದಿ: ಈ ಕಾರ್ಯ ಮಾಡಿದ್ರೆ ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ರಾಜ ಹುಲಿ ಬಿರುದು ಕೊಡ್ತಾರಂತೆ!

ಸಚಿವರು ಇಲ್ಲ‌, ಮುಖ್ಯಮಂತ್ರಿಗಳಿಗೆ ಕೊಡೋಕೆ ತಂದಿರಬಹುದು

ಇನ್ನು ವಿಧಾನಸೌಧದ ಪಶ್ಚಿಮ ಗೇಟ್​ನಲ್ಲಿ 10.5 ಲಕ್ಷ ಹಣ ಪತ್ತೆ ಪ್ರಕರಣವಾಗಿ ಪ್ರತಿಕ್ರಿಯೆ ನೀಡಿದ್ದು, ವಿಧಾನಸೌಧದಕ್ಕೆ ಹಣ ತಗೊಂಡು ಬಂದಿದಾರೆ ಅಂದ್ರೆ ಏನ ಅರ್ಥ. ಸಚಿವರು ಇಲ್ಲ‌ ಮುಖ್ಯಮಂತ್ರಿಗಳಿಗೆ ಕೊಡೋಕೆ ತಂದಿರಬಹುದು. ಇಂಜನಿಯರ್ ಯಾಕೆ ವಿಧಾನಸೌಧಕ್ಕೆ ದುಡ್ಡು ತಗೊಂಡು ಬರ್ತಾನೆ? ಇದು ನಿಜ ಇರಬಹುದು ಸುಳ್ಳು ಇರಬಹುದು. ಒಂದು ಟ್ರಾನ್ಸಫರ್ ಇರಬೇಕು, ಇಲ್ಲ ಲಂಚ ಕೊಡೋಕೆ ಬಂದಿರಬೇಕು ಎಂದು ಸಂಶಯ ಪಡಬಹುದು. ವಿಚಾರಣೆ ಮಾಡಲಿ ಸತ್ಯ ಗೊತ್ತಾಗಲಿ ಎಂದರು.

ರಾಮ ಮಂದಿರವನ್ನು ರಾಜಕೀಯವಾಗಿ ಬಳಸಿಸಕೊಳ್ಳುವುದಕ್ಕೆ  ವಿರೋಧವಿದೆ

ರಾಮ ಮಂದಿರ ವಿಚಾರವಾಗಿ ಮಾತನಾಡಿ, ರಾಮ ಮಂದಿರ ಕಟ್ಟಿರೋದಕ್ಕೆ ನಮ್ಮ ವಿರೋಧ ಇಲ್ಲ. ಅದನ್ನು ರಾಜಕೀಯ ಬಳಸಿಕೊಳ್ಳೋದಕ್ಕೆ ನಮ್ಮ ವಿರೋಧವಿದೆ. ನಾವು ಹಳ್ಳಿಗಳಲ್ಲಿ ರಾಮಮಂದಿರ, ಆಂಜನೇಯ ಗುಡಿ ಕಟ್ಟಿಲ್ವಾ? ಕೋಮುವಾದ ಮಾಡೋ ಪಾರ್ಟಿ ಜನರನ್ನ ಆಳೋಕೆ ಯೋಗ್ಯ ಅಲ್ಲ ಎಂದು ಪರೋಕ್ಷವಾಗಿ ಬಿಜೆಪಿಗೆ ಟಾಂಗ್​ ನೀಡಿದರು. ಧರ್ಮ, ಜಾತಿ ಹೆಸರಲ್ಲಿ ರಾಜಕಾರಣ ಮಾಡೋದು ತಪ್ಪು ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:02 pm, Fri, 6 January 23