ಮಾಜಿ ಸಚಿವ ವಿನಯ್ ಕುಲಕರ್ಣಿ ಪತ್ನಿಗೆ ಜಿಪಿಎ ಅಧಿಕಾರ ಪತ್ರ ಹಸ್ತಾಂತರ ಈಗೇಕೆ?
ಈ ಹಿನ್ನೆಲೆ ಧಾರವಾಡದ ಉಪ ನೋಂದಣಾಧಿಕಾರಿ ಕಚೇರಿಗೆ ಬೆಳಗಾವಿ ಹಿಂಡಲಗಾ ಜೈಲಿನಿಂದ ಆಗಮಿಸಿದ ವಿನಯ್ ಕುಲಕರ್ಣಿ, ಪತ್ನಿ ಶಿವಲೀಲಾ ಅವರಿಗೆ ಜಿಪಿಎ (General Power Of Attorney) ನೀಡುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ, ಪತ್ನಿ ಶಿವಲೀಲಾ ಅವರಿಗೆ ಸಾಮಾನ್ಯ ಅಧಿಕಾರ ಪತ್ರ (ಜಿಪಿಎ) ನೀಡಲು ಇಂದು (ಜುಲೈ 27) ಧಾರವಾಡಕ್ಕೆ ಆಗಮಿಸಿದರು. ತಮ್ಮ ವ್ಯವಹಾರಗಳನ್ನು ನೋಡಿಕೊಳ್ಳಲು ಹಾಗೂ ಹಣಕಾಸು ವ್ಯವಹಾರವನ್ನು ನಿಭಾಯಿಸಲು ಅನುಕೂಲವಾಗುವ ಹಿನ್ನೆಲೆಯಲ್ಲಿ ಜಿಪಿಎ ನೀಡಲು ಅವಕಾಶ ಕಲ್ಪಿಸುವಂತೆ ವಿನಯ್ ಕುಲಕರ್ಣಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಪಿಎ ನೀಡಲು ಹಾಗೂ ಬ್ಯಾಂಕ್ನಲ್ಲಿ ಜಂಟಿ ಖಾತೆ ತೆರೆಯಲು ಅವಕಾಶ ಕಲ್ಪಿಸಿ ನ್ಯಾಯಾಲಯ ಆದೇಶ ನೀಡಿತ್ತು.
ಈ ಹಿನ್ನೆಲೆ ಧಾರವಾಡದ ಉಪ ನೋಂದಣಾಧಿಕಾರಿ ಕಚೇರಿಗೆ ಬೆಳಗಾವಿ ಹಿಂಡಲಗಾ ಜೈಲಿನಿಂದ ಆಗಮಿಸಿದ ವಿನಯ್ ಕುಲಕರ್ಣಿ, ಪತ್ನಿ ಶಿವಲೀಲಾ ಅವರಿಗೆ ಜಿಪಿಎ (General Power Of Attorney) ನೀಡುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಜಿಪಿಎ ನೀಡುವ ಪ್ರಕ್ರಿಯೆಯ ಬಳಿಕ ನೇರವಾಗಿ ಹಳೆ ಡಿಎಎಸ್ಪಿ ವೃತ್ತದ ಬಳಿಯ ಬ್ಯಾಂಕ್ ಆಫ್ ಇಂಡಿಯಾಕ್ಕೆ ತೆರಳಿದ ವಿನಯ್, ತಮ್ಮ ಹಾಗೂ ಪತ್ನಿಯ ಹೆಸರಿನಲ್ಲಿ ಜಂಟಿ ಖಾತೆಯನ್ನು ತೆರೆದರು. ಹಣಕಾಸು ವ್ಯವಹಾರ ಸೇರಿದಂತೆ ತೆರಿಗೆ ಸಂಬಂಧಿತ ಪ್ರಕ್ರಿಯೆಗಳನ್ನು ನಿರ್ವಹಿಸಲು ಈ ಜಂಟಿ ಖಾತೆಯನ್ನು ತೆರೆಯಲಾಗಿದೆ.
ವಿನಯ್ ಕುಲಕರ್ಣಿ ಕಚೇರಿಯಿಂದ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಕೇಕೆ ಹಾಕಿ, ಜೈಕಾರ ಹಾಕಿದರು. ಆಗ ವಿನಯ್ ಅಭಿಮಾನಿಗಳತ್ತ ಕೈ ಬೀಸಿದರು. ಸಾಮಾನ್ಯ ಅಧಿಕಾರ ಪತ್ರ ನೀಡುವ ಪ್ರಕ್ರಿಯೆ ಮುಕ್ತಾಯವಾದ ಬಳಿಕ ಮತ್ತೆ ವಿನಯ್ ಕುಲಕರ್ಣಿಯನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಕರೆದೊಯ್ಯಲಾಗುವುದು. ಈ ವೇಳೆ ವಿನಯ್ ಹಿರಿಯ ಮಗಳು ವೈಶಾಲಿ, ಮಗ ಹೇಮಂತ್, ಸಹೋದರ ವಿಜಯ್ ಕುಲಕರ್ಣಿ ಹಾಜರಿದ್ದರು.
ವರದಿ: ನರಸಿಂಹಮೂರ್ತಿ ಪ್ಯಾಟಿ
ಇದನ್ನೂ ಓದಿ
ವಿನಯ್ ಕುಲಕರ್ಣಿ ಆಪ್ತ, ಕೆಎಎಸ್ ಸೋಮು ನ್ಯಾಮಗೌಡ ಬಂಧನದ ಹಿಂದಿದೆ ಸಿಬಿಐ ಮಾಸ್ಟರ್ ಪ್ಲಾನ್; ಕೇಸು ಮತ್ತಷ್ಟು ಬಿಗಿ
ಯೋಗೀಶ್‌ಗೌಡ ಕೊಲೆ ಕೇಸ್‌ನಲ್ಲಿ ವಿನಯ್‌ಗೆ ಜೈಲು: ವಿನಯ್ ಕುಲಕರ್ಣಿ ನಿವಾಸಕ್ಕೆ ನಟ ದರ್ಶನ್ ಭೇಟಿ
(Former minister Vinay Kulkarni handed over the GPA letter to his wife in Dharwad)
Published On - 11:27 am, Tue, 27 July 21