ಸರ್ಕಾರಿ ಇಲಾಖೆ ಸಿಬ್ಬಂದಿಯಿಂದಲೇ ವಂಚನೆ; ಮೇಲಾಧಿಕಾರಿಗಳ ಸಹಿ ನಕಲು ಮಾಡಿ 2 ಕೋಟಿ ರೂ. ಲೂಟಿ

| Updated By: preethi shettigar

Updated on: Oct 26, 2021 | 11:59 AM

ದೀಪಕ್ ಧಾರವಾಡ ಕಚೇರಿಯಲ್ಲಿ ಅಥಣಿ ವಿಭಾಗದ ಹಿಪ್ಪರಗಿ ಬ್ಯಾರೇಜ್‌ ಕಾಲುವೆ ಕಾಮಗಾರಿಯ ವಿಭಾಗದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಈ ವೇಳೆ ನಕಲಿ ಬಿಲ್‌ಗಳನ್ನು ಸೃಷ್ಟಿಸಿಕೊಂಡು ಅವುಗಳನ್ನೇ ನಿಜವಾದ ಬಿಲ್‌ಗಳು ಎಂದು ಬಿಂಬಿಸಿರುವುದು ಲೆಕ್ಕ ಪರಿಶೋಧನೆ ಮಾಡುತ್ತಿದ್ದಾಗ ತಿಳಿದು ಬಂದಿದೆ.

ಸರ್ಕಾರಿ ಇಲಾಖೆ ಸಿಬ್ಬಂದಿಯಿಂದಲೇ ವಂಚನೆ; ಮೇಲಾಧಿಕಾರಿಗಳ ಸಹಿ ನಕಲು ಮಾಡಿ 2 ಕೋಟಿ ರೂ. ಲೂಟಿ
ಕರ್ನಾಟಕ ನೀರಾವರಿ ನಿಗಮ
Follow us on

ಧಾರವಾಡ: ಉತ್ತರ ಕರ್ನಾಟಕ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಧಾರವಾಡದಲ್ಲಿ ಕರ್ನಾಟಕ ನೀರಾವರಿ ನಿಗಮದ ಕಚೇರಿ ಇದೆ. ಇಲ್ಲಿನ ಕೇಂದ್ರ ಕಚೇರಿಯಲ್ಲಿ ನಡೆದಿರುವ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಿಗಮದ ವ್ಯಾಪ್ತಿಯ ಬೆಳಗಾವಿ ಜಿಲ್ಲೆಯ ಅಥಣಿ ವಿಭಾಗದ ಅಡಿಯಲ್ಲಿ ಹಿಪ್ಪರಗಿ ಬ್ಯಾರೇಜ್‌ ಇದ್ದು, ಇದು ಮುಂದೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಹಾದು ಹೋಗುತ್ತದೆ. ಸದ್ಯ ಈ ಬ್ಯಾರೇಜ್​ನ ಕಾಲುವೆ ಕಾಮಗಾರಿಯ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ನೀರಾವರಿ ನಿಗಮದ ಸಿಬ್ಬಂದಿ 2 ಕೋಟಿ 89 ಲಕ್ಷ ರೂಪಾಯಿ ಲಪಟಾಯಿಸಿದ್ದಾನೆ.

ಕರ್ನಾಟಕ ನೀರಾವರಿ ನಿಗಮದ ಸಿಬ್ಬಂದಿ ದೀಪಕ್ ಮೂಡಲಗಿಯದ್ದು ಮಾಸ್ಟರ್ ಮೈಂಡ್. ಕಚೇರಿಯಲ್ಲಿಯೇ ಕುಳಿತು ದೂರದಲ್ಲಿನ ಬ್ಯಾರೇಜ್​ವೊಂದರ ಕಾಲವೆ ಹಾಗೂ ಅದರ ಪಕ್ಕದಲ್ಲಿರುವ ರಸ್ತೆ ದುರಸ್ತಿಯ ನಕಲಿ ಬಿಲ್ ಅನ್ನು ಸೃಷ್ಟಿಸಿದ್ದಾನೆ. ತನಗೆ ತೀರಾ ಆತ್ಮೀಯರಾಗಿರುವ ಇಬ್ಬರ ಖಾತೆಗೆ ಈ ಹಣವನ್ನು ಜಮಾ ಮಾಡಿಸಿದ್ದಾನೆ. ಆತನ ಸ್ನೇಹಿತರಾದ ಆರ್‌.ಬಿ. ಶೇಖ್ ಖಾತೆಗೆ 1.44 ಕೋಟಿ ರೂಪಾಯಿ ಮತ್ತು ಎ.ವೈ. ಮುಲ್ಲಾ ಖಾತೆಗೆ 1.45 ಕೊಟಿ ರೂಪಾಯಿ ಜಮಾ ಆಗಿದೆ.

ದೀಪಕ್ ಧಾರವಾಡ ಕಚೇರಿಯಲ್ಲಿ ಅಥಣಿ ವಿಭಾಗದ ಹಿಪ್ಪರಗಿ ಬ್ಯಾರೇಜ್‌ ಕಾಲುವೆ ಕಾಮಗಾರಿಯ ವಿಭಾಗದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಈ ವೇಳೆ ನಕಲಿ ಬಿಲ್‌ಗಳನ್ನು ಸೃಷ್ಟಿಸಿಕೊಂಡು ಅವುಗಳನ್ನೇ ನಿಜವಾದ ಬಿಲ್‌ಗಳು ಎಂದು ಬಿಂಬಿಸಿರುವುದು ಲೆಕ್ಕ ಪರಿಶೋಧನೆ ಮಾಡುತ್ತಿದ್ದಾಗ ತಿಳಿದು ಬಂದಿದೆ. ಇಬ್ಬರೂ ಸ್ನೇಹಿತರಿಗೆ ವರ್ಗಾವಣೆಗೊಂಡ ಹಣ ಬಳಿಕ ಅಲ್ಲಿಂದ ದೀಪಕ್ ಖಾತೆಗೆ ಬಂದಿರುವ ದಾಖಲೆಗಳು ಕೂಡ ಲಭ್ಯವಾದ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಧಾರವಾಡದ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ದೀಪಕ್ ಸರಕಾರಿ ನೌಕರನಾಗಿರುವ ಹಿನ್ನೆಲೆಯಲ್ಲಿ ಬೇರೆ ಕಡೆಗಳಲ್ಲಿ ಈತ ಇಂಥ ಕೆಲಸಗಳನ್ನು ಮಾಡಿದ್ದಾನೆಯೇ ಎನ್ನುವುದರ ಬಗ್ಗೆಯೂ ಕೂಲಂಕುಷವಾಗಿ ತನಿಖೆಯಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನಿಗಮದ ಕಚೇರಿಯಲ್ಲಿದ್ದುಕೊಂಡು ಯಾವುದೇ ಕಾಮಗಾರಿಯನ್ನು ಮಾಡಿಸದೇ ಕೋಟಿ ಕೋಟಿ ರೂಪಾಯಿ ಲಪಟಾಯಿಸಿದ ಪ್ರಕರಣದಿಂದ ಈಗ ತಿಳಿದು ಬಂದಿದೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಇಂಥವರಿಗೆ ಸರಿಯಾದ ಶಿಕ್ಷೆ ಕೊಡಿಸುವತ್ತ ಗಮನ ಹರಿಸಬೇಕಿದೆ. ಇಲ್ಲವಾದಲ್ಲಿ ಜನರ ದುಡ್ಡನ್ನು ಇಂಥ ಅಧಿಕಾರಿಗಳು ನುಂಗಿ ನೀರು ಕುಡಿಯುವುದು ಮುಂದುವರಿಯುವುದು ಮಾತ್ರ ಸತ್ಯ.

ವರದಿ: ನರಸಿಂಹಮೂರ್ತಿ ಪ್ಯಾಟಿ

ಇದನ್ನೂ ಓದಿ:
ಉದ್ಯೋಗ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕಿರಣ್ ಗೋಸಾವಿ ಸಹಾಯಕನ ಬಂಧನ

ಮಧುಕರ್ ನಕಲಿ ಸಹಿ ಬಳಸಿ ವಿದ್ಯಾರ್ಥಿಗಳಿಂದ ಹಣ ವಸೂಲಿ: ಸುಧೀರ್ ಅಂಗೂರ್ ಸೇರಿ 10 ಜನರ ವಿರುದ್ಧ FIR

Published On - 11:55 am, Tue, 26 October 21