ಆರ್.ಟಿ.ಐ. ಕಾರ್ಯಕರ್ತ ಪುತ್ರನ ಬರ್ತಡೇ ಪಾರ್ಟಿಯಲ್ಲಿ ಗುಂಡಿನ ಸದ್ದು: ಪಿಸ್ತೂಲ್ ವಶಕ್ಕೆ ಪಡೆದ ಪೊಲೀಸ್
ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆಯಾಗಿರುವಂತಹ ಘಟನೆ ಜಿಲ್ಲೆಯ ಕೊಲ್ಹಾರ ಪಟ್ಟಣದ ಹೊರ ಭಾಗದ ಕೂಡಗಿ ತಾಂಡಾ ರಸ್ತೆಯಲ್ಲಿ ಪತ್ತೆಯಾಗಿದೆ.
ಹುಬ್ಬಳ್ಳಿ: ಆರ್.ಟಿ.ಐ. ಕಾರ್ಯಕರ್ತ ಪುತ್ರನ ಬರ್ತಡೇ ಪಾರ್ಟಿ ಗುಂಡು ಹಾರಿಸಿರುವಂತಹ ಘಟನೆ ನಗರದ ಕುಸಗಲ್ ರಸ್ತೆಯ ಪಾರ್ಮ್ ಹೌಸ್ನಲ್ಲಿ ನಡೆದಿದೆ. ಹುಟ್ಟು ಹಬ್ಬದ ಪಾರ್ಟಿಯಲ್ಲಿ ಗುಂಡಿನ ಸದ್ದಾಗಿದ್ದು, 20ಕ್ಕೂ ಹೆಚ್ಚು ಪುಡಾರಿಗಳು ಸೇರಿ ವೇದಿಕೆಯಲ್ಲಿ ಆರು ಸುತ್ತು ಗುಂಡು ಹಾರಿಸಿದ್ದಾರೆ. ಕೇಶ್ವಾಪುರದ ಫಿಲೋಮಿನಾ ಪೌಲ್ ಪುತ್ರ ಸುಂದರ ಪೌಲ್ ಹುಟ್ಟುಹಬ್ಬದಲ್ಲಿ ಈ ಘಟನೆ ಸಂಭವಿಸಿದ್ದು, ರಾತ್ರಿ ಫಾರ್ಮ್ ಹೌಸ್ನಲ್ಲಿ ಗುಂಡು, ತುಂಡಿನ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರ ಸ್ಥಳಕ್ಕೆ ಭೇಟಿ ನೀಡಿದ್ದು, ಇನ್ಸ್ಪೆಕ್ಟರ್ ರಮೇಶ್ ಗೋಕಾಕ್ ನೇತೃತ್ವದ ತಂಡ ಫಾರ್ಮ್ ಹೌಸ್ ತಲಾಷ್ ಮಾಡಿದ್ದಾರೆ. ಹೊಸೂರು, ಸೆಟಲಮೆಂಟ್ ಸೇರಿದಂತೆ ನಗರದ ವಿವಿಧ ಪ್ರದೇಶದ ರೌಡಿಗಳು ಒಂದಡೇ ಸೇರಿಸಿದ್ದರು. ಫಿಲೋಮಿನ್ ಬಳಿ ಇದ್ದ ಲೈಸನ್ಸ್ ಪಿಸ್ತೂಲ್ ವಶಕ್ಕೆ ಪಡೆದಿದ್ದು, ಹುಬ್ಬಳ್ಳಿಯಲ್ಲಿ ರೌಡಿ ಉಪಟಗಳಕ್ಕೆ ಜನರು ಬೆಚ್ಚಿಬಿದಿದ್ದಾರೆ. ತಂದೆಯ ಫಿಸ್ತೂಲ್ ಇಟ್ಟುಕೊಂಡು ಶೋಕಿ ಮಾಡೋ ಐನಾತಿ. ಸುಂದರ ಪೌಲ್ ಉಪಟಳ ಇದೇ ಮೊದಲಲ್ಲ. ಈ ಹಿಂದೇ ಕಾಲೇಜ ಕ್ಯಾಂಪಸ್ನಲ್ಲಿ ಪಿಸ್ತೂಲ್ ತೋರಿಸಿ ಸುದ್ದಿಯಾಗಿದ್ದ.
ಗಾಂಜಾ ಮತ್ತು ಚಿರತೆ ಚರ್ಮ ಮಾರಾಟ: ರೌಡಿಶೀಟರ್ ಬಂಧನ
ಬೆಂಗಳೂರು: ಗಾಂಜಾ ಮತ್ತು ಚಿರತೆ ಚರ್ಮ ಮಾರಾಟ ಮಾಡುತ್ತಿದ್ದವನನ್ನು ಭಾರತಿನಗರ ಠಾಣೆಯ ರೌಡಿಶೀಟರ್ ಧನರಾಜ್(30)ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 10 ಲಕ್ಷ ಮೌಲ್ಯದ ಚಿರತೆ ಚರ್ಮ, 8 ಸಾವಿರ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದು, ಭಾರತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿ ದರೋಡೆ
ಕಲಬುರಗಿ: ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿ ದರೋಡೆಗೆ ಯತ್ನಿಸಿದ್ದ ಮೂವರು ಆರೋಪಿಗಳನ್ನು ಅಫಜಲಪುರ ಪೊಲೀಸರು ಬಂಧಿಸಿದ್ದಾರೆ. ಜೂ.2ರಂದು ರಾತ್ರಿ 1 ಗಂಟೆಗೆ ಅಫಜಲಪುರ ನಿವಾಸಿ ಶಾಂತಪ್ಪ ಹಡಪದ ಎಂಬುವರ ಮನೆಗೆ ನುಗ್ಗಿ ಪತ್ನಿಗೆ ಮಾರಕಾಸ್ತ್ರ ತೋರಿಸಿ ಆರೋಪಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪತಿ ಶಾಂತಪ್ಪ ಬರುತ್ತಿದ್ದಂತೆ ಪರಾರಿಯಾಗಿದ್ದರು. ಆರೋಪಿಗಳಾದ ವೀರೇಶ್, ರಾಕೇಶ್, ರಾಮಚಂದ್ರ ಬಂಧನ ಮಾಡಿದ್ದು, 2 ಖಡ್ಗಗಳು, 2 ಬೈಕ್ಗಳು ಜಪ್ತಿ ಮಾಡಲಾಗಿದೆ.
ಜುಟ್ಟು ಅಂದಿದಕ್ಕೆ ಹಲ್ಲೆ
ಬೆಂಗಳೂರು: ಜುಟ್ಟು ಅಂದಿದಕ್ಕೆ ಹಲ್ಲೆ ನಡೆಸಿದ್ದ ಆರೋಪಿ ತರುಣ್ ಬಂಧನ ಮಾಡಿರುವಂತಹ ಘಟನೆ ನಗರದ ಟಿ.ಸಿ.ಪಾಳ್ಯ ಮುಖ್ಯರಸ್ತೆಯಲ್ಲಿ ನಡೆದಿದೆ. ರಾಹುಲ್, ವಿಕ್ಕಿಗಾಗಿ ಪೊಲೀಸರ ಹುಡುಕಾಟ ಮುಂದುವರಿದೆ. ಮೇ 13ರಂದು ಗುರು, ವಿನಯ್, ಬಸವರಾಜ್ ಮೇಲೆ ಹಲ್ಲೆ ಮಾಡಲಾಗಿತ್ತು. ದೊಣ್ಣೆಗಳಿಂದ ಹಲ್ಲೆ ನಡೆಸಿದ್ದ ಬಂಧಿತ ತರುಣ್ ಮತ್ತು ಸಹಚರರು ಹಲ್ಲೆಗೈದು ಪರಾರಿಯಾಗಿದ್ದ ತರುಣ್ನ್ನು ಪೊಲೀಸರು ಬಂಧಿಸಿದ್ದರು. ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಹಾವು ಕಡಿದು ರೈತ ಸಾವು
ತುಮಕೂರು: ಹಾವು ಕಡಿದು ರೈತ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನಲ್ಲಿರುವ ಹೊನ್ನವಳ್ಳಿನಲ್ಲಿ ನಡೆದಿದೆ. ರೈತ ಪುಟ್ಟಸ್ವಾಮಿ (41) ಮೃತ ದುರ್ದೈವಿ. ನಿನ್ನೆ ಸಂಜೆ ಹಸುಗಳಿಗೆ ಹುಲ್ಲು ತರಲು ಹೋಗಿದ್ದಾಗ ಪುಟ್ಟಸ್ವಾಮಿಗೆ ಹಾವು ಕಡಿದಿದೆ. ಕೂಡಲೇ ತಿಪಟೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇಂದು ಬೆಳಗ್ಗಿನ ಜಾವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಹೊನ್ನವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಯುವಕನ ಅನುಮಾನಾಸ್ಪದ ಶವ ಪತ್ತೆ
ವಿಜಯಪುರ: ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆಯಾಗಿರುವಂತಹ ಘಟನೆ ಜಿಲ್ಲೆಯ ಕೊಲ್ಹಾರ ಪಟ್ಟಣದ ಹೊರ ಭಾಗದ ಕೂಡಗಿ ತಾಂಡಾ ರಸ್ತೆಯಲ್ಲಿ ಪತ್ತೆಯಾಗಿದೆ. ಕೊಲ್ಹಾರ ತಾಲೂಕಿನ ಯುವಕ ವಿಠಲ್ ಪರಪ್ಪ ಕುಂಬಾರ ಎಂಬ ಯುವಕನ ಶವ ಪತ್ತೆಯಾಗಿದ್ದು, ರಾತ್ರಿ ಮನೆಯಿಂದ ಹೊರಗಡೆ ತೆರಳಿದ್ದ ಯುವಕ ವಿಠಲ್, ಇಂದು ಶವವಾಗಿ ವಿಠಲ್ ಪತ್ತೆಯಾಗಿದ್ದು, ಕೊಲೆಯಾಗಿರೋ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕೂಡಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕೂಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.