ಧಾರವಾಡ, ನವೆಂಬರ್ 16: ಧಾರವಾಡದ (Dharawad) ಹಲವೆಡೆ ನವೆಂಬರ್ 18ರಂದು ಶನಿವಾರ ವಿದ್ಯುತ್ (Power outage) ವ್ಯತ್ಯಯವಾಗಲಿದೆ. 110 ಕೆವಿ ಅಳ್ಳಾವರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ 3 ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳಲಿದ್ದು, ಈ ಕಾರಣದಿಂದ ವಿದ್ಯುತ್ ವ್ಯತ್ಯಯವಾಗಲಿದೆ.
ಅಳ್ಳಾವರ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ನವೆಂಬರ್ 18 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 06 ರ ವರೆಗೆ ವಿದ್ಯುತ್ ಇರುವುದಿಲ್ಲ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ಅಳ್ಳಾವರ ಪಟ್ಟಣ, ಬೆಣಚಿ, ಡೋರಿ, ಸುರೆಬೈಲ್, ಗೋಪನಟ್ಟಿ, ಹುಳ್ಳಿಗೆರಿ, ಕಡಬಗಟ್ಟಿ, ಇಂಡಸಗೇರಿ, ಅವರಬತ್ ಬೈಲ್, ಜೊಡಳ್ಳಿ, ದುಂಡಳ್ಳಿ, ಒದಗೆರಾ, ತಾವರಗೆರಿ, ಬಾಳಗುಂದ, ಚುಂಚವಾಡ, ಲಿಂಗನಮಠ, ಹೊಸಲಿಂಗನಮಠ ಮತ್ತು ಪಾಲಗೆರಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತುಮುತ್ತಲಿನ ಗ್ರಾಮಗಳ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ಬರ ಪರಿಹಾರಕ್ಕಾಗಿ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಕೃಷಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಅಖಿಲ ಭಾರತೀಯ ರೈತ ಕೃಷಿ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ನರೇಗಾ ಯೋಜನೆ ಕಾಮಗಾರಿಯ ಹಣ ಸರ್ಕಾರ ಬಿಡುಗಡೆ ಮಾಡಿಲ್ಲ. ನಮ್ಮಿಂದ ವಿವಿಧ ರೀತಿಯ ಸರ್ಕಾರಿ ಕೆಲಸ ಮಾಡಿಸಿಕೊಂಡಿದೆ. ಆದರೆ ಪೂರ್ತಿ ಹಣ ನೀಡದೆ ಅರ್ಧ ಹಣ ನೀಡಿ ಸುಮ್ಮನಾಗಿದೆ. ಉಳಿದ ಅರ್ಧ ಹಣ ಬಿಡುಗಡೆ ಮಾಡಬೇಕು ಎಂದು ಕೃಷಿ ಕಾರ್ಮಿಕರು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ