Hubballi: ಪ್ರಧಾನಿ ಮೋದಿ ಭೇಟಿಯನ್ನೇ ಉತ್ತರ ಕರ್ನಾಟಕಕ್ಕೆ ಬೂಸ್ಟ್ ಆಗಿ ಬಳಸಿಕೊಳ್ಳಲು ಬಿಜೆಪಿ ಪ್ಲಾನ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 12, 2023 | 2:14 PM

ಕೇಂದ್ರ ಸರ್ಕಾರಿ ಕಾರ್ಯಕ್ರಮವಾಗಿರುವ ಯುವಜನ ಮೇಳ ಉದ್ಘಾಟನೆಗೆ ಬರುತ್ತಿರುವ ಪ್ರಧಾನಿ ಮೋದಿ ಭೇಟಿಯನ್ನೇ ಉತ್ತರ ಕರ್ನಾಟಕಕ್ಕೆ ಬೂಸ್ಟ್ ಆಗಿ ಬಳಸಿಕೊಳ್ಳಲು ಬಿಜೆಪಿ ಪ್ಲಾನ್ ಮಾಡಿದೆ.

Hubballi: ಪ್ರಧಾನಿ ಮೋದಿ ಭೇಟಿಯನ್ನೇ ಉತ್ತರ ಕರ್ನಾಟಕಕ್ಕೆ ಬೂಸ್ಟ್ ಆಗಿ ಬಳಸಿಕೊಳ್ಳಲು ಬಿಜೆಪಿ ಪ್ಲಾನ್
ಪ್ರಧಾನಿ ಮೋದಿ
Follow us on

ಹುಬ್ಬಳ್ಳಿ: ಇಂದು(ಜ.12)ಯುವಜನ ಮೇಳ ಉದ್ಘಾಟನೆಗೆ ಬರುತ್ತಿರುವ ಪ್ರಧಾನಿ ಮೋದಿ ಭೇಟಿಯನ್ನೇ ಉತ್ತರ ಕರ್ನಾಟಕಕ್ಕೆ ಬೂಸ್ಟ್ ಆಗಿ ಬಳಸಿಕೊಳ್ಳಲು ಬಿಜೆಪಿ ಪ್ಲಾನ್ ಮಾಡಿದೆ. ಕೇಂದ್ರ ಸರ್ಕಾರಿ ಕಾರ್ಯಕ್ರಮವಾದ ಯುವಜನ ಮೇಳದಲ್ಲಿ ಪಕ್ಷದ ಕಾರ್ಯಕರ್ತರನ್ನು ಜೋಡಿಸಲು ಅವಕಾಶವಿಲ್ಲವಾಗಿದೆ. ಹೀಗಾಗಿ ಪ್ರಧಾನಿ ಏರ್ ಪೋರ್ಟ್​ನಿಂದ ರೈಲ್ವೇ ಗ್ರೌಂಡ್​ವರೆಗೆ ತೆರಳುವ ಮಾರ್ಗದಲ್ಲಿ ಪಕ್ಷದ ಕಾರ್ಯಕರ್ತರಿಗೆ ಮೋದಿ ನೋಡಲು ರಸ್ತೆ ಬದಿಯಲ್ಲಿ ಅವಕಾಶ ಮಾಡಲಾಗಿದೆ. 5 ರಿಂದ 8 ಕಡೆ ಜನರನ್ನು ಸೇರಿಸಿ ಪ್ರಧಾನಿಗೆ ಸ್ವಾಗತ ಕೋರುವ ಪ್ಲಾನ್ ಮಾಡಿದ್ದು, ನೇರವಾಗಿ ರೋಡ್ ಶೋ ನಡೆಸದೇ ಅಲ್ಲಲ್ಲಿ ಕಾರಿನಿಂದ ಹೊರಗೆ ಇಳಿದು ಜನರತ್ತ ಕೈ ಬೀಸುವ ಕಾರ್ಯಕ್ರಮ ರೂಪಿಸಿರುವ ಬಿಜೆಪಿ ಆ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಪ್ಲಾನ್ ಮಾಡಿದೆ.

ಇಂದಿನಿಂದ ಜ.16 ರ ವರೆಗೆ 26ನೇ ರಾಷ್ಟ್ರೀಯ ಯುವ ಜನೋತ್ಸವ ನಡೆಯಲಿದ್ದು. ಸಂಜೆ 4 ಗಂಟೆಗೆ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆಯನ್ನು ನೆರವೇರಿಸಲಿದ್ದು, ರಾಜ್ಯಪಾಲರಾದ ಥಾವರ್​ ಚಂದ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರುಗಳಾದ ಪ್ರಹ್ಲಾದ ಜೋಶಿ, ಅನುರಾಗ್ ಸಿಂಗ್ ಠಾಕೂರ್, ನಿತೀಶ್ ಪ್ರಮಾಣಿಕ್, ರಾಜ್ಯ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸೇರಿದಂತೆ ಅನೇಕ ನಾಯಕರುಗಳು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.

ಇನ್ನು ಯುವ ಜನೋತ್ಸವದಲ್ಲಿ 28 ರಾಜ್ಯಗಳಿಂದ ಯುವಕರ ತಂಡ ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಿಂದ ಪ್ರತಿನಿಧಿಗಳು ಬರಲಿದ್ದಾರೆ. ಯುವ ಜನೋತ್ಸವದ ಅಂಗವಾಗಿ ಧಾರವಾಡದ ವಿವಿಧ ವೇದಿಕೆಗಳಲ್ಲಿ ಇಂದಿನಿಂದ ಜ.16ರವರೆಗೆ ವಿವಿಧ ಸಾಂಸ್ಕೃತೀಕ ಕಾರ್ಯಕ್ರಮ, ಸ್ಪರ್ಧೆ, ಯುವ ಸಮೂಹಕ್ಕೆ ಕಾರ್ಯಾಗಾರ, ಆಹಾರ ಮೇಳ, ಸ್ಕೂಬಾ ಡ್ರೈವಿಂಗ್ ತರಬೇತಿ, ವೈಮಾನಿಕ ತರಬೇತಿ, ಜಲಕ್ರೀಡೆ, ಸ್ಪರ್ಧೆಗಳು ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.

ಇದನ್ನೂ ಓದಿ:National Youth Festival 2023: ಪ್ರಧಾನಿ ಮೋದಿ ಸ್ವಾಗತಕ್ಕೆ ಧಾರವಾಡ ಸಜ್ಜು, 5 ದಿನಗಳ ಅಂತಾರಾಷ್ಟ್ರೀಯ ಯುವಜನೋತ್ಸವಕ್ಕೆ ಕ್ಷಣಗಣನೆ

ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೂಬಸ್ತ್​ ಏರ್ಪಡಿಸಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಮೂರು ಸಾವಿರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಜೊತೆಗೆ ಪ್ರಧಾನಿ ಸಂಚರಿಸುವ ಆಯ್ದ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪ್ರಧಾನಿಯವರ ಸುರಕ್ಷತೆ ಹಿನ್ನೆಲೆಯಲ್ಲಿ ಈಗಾಗಲೇ ಎಸ್.ಪಿ.ಜಿ. ಅಧಿಕಾರಿಗಳ ತಂಡ ಮೈದಾನಕ್ಕೆ ತೆರಳಿ ಪರಿಶೀಲನೆ ನಡೆಸಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:08 pm, Thu, 12 January 23