ಹುಬ್ಬಳ್ಳಿ: ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ (MLA Abbayya Prasad) ಮತ್ತು ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಲ್ತಾಪ್ ಹಳ್ಳೂರ (Altaf Halloora) ಬಿಜೆಪಿ ಏಜೆಂಟ್ ಎಂದು ಧಾರವಾಡ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ (Ismail Tamatgar) ಹೇಳಿರುವ ಆಡಿಯೋ ವೈರಲ್ (Audio Viral) ಆಗುತ್ತಿದೆ. ಹಳೇ ಹುಬ್ಬಳ್ಳಿ ಗಲಾಟೆ ಮತ್ತು ಬಂಧನಕ್ಕೊಳಗಾದವರಿಗೆ ಜಾಮೀನು ನೀಡುವ ವಿಚಾರವಾಗಿ ಅಜರುದ್ದೀನ್ ಎಂಬುವರೊಂದಿಗೆ ಇಸ್ಮಾಯಿಲ್ ತಮಟಗಾರ ಮಾತಾನಡಿದ ಆಡಿಯೋ ವೈರಲ್ ಆಗಿದೆ. ಹಳೇ ಹುಬ್ಬಳ್ಳಿ ಗಲಾಟೆಯಲ್ಲಿ ಬಂಧಕ್ಕೊಳಗಾದವರನ್ನು ಮೂರು ತಿಂಗಳೊಳಗೆ ಹೊರಗೆ ಕರೆದುಕೊಂಡು ಬರುತ್ತೇನೆ ಎಂದು ಇಸ್ಮಾಯಿಲ್ ತಮಟಗಾರ ಹೇಳಿರುವುದು ಆಡಿಯೋದಲ್ಲಿ ಕೇಳಿಸಬಹುದು.
ಇದನ್ನೂ ಓದಿ: ಗುಜರಾತ್ನಂತೆ ಕರ್ನಾಟಕದಲ್ಲೂ ಹಳಬರನ್ನು ಕೈಬಿಡುವ ಮಾತು ಕೇಳಿಬರುತ್ತಿದೆ ಎಂದ ಭೈರತಿ ಬಸವರಾಜ್
ಹಳೇ ಹುಬ್ಬಳ್ಳಿ ಗಲಾಟೆ ವಿಚಾರ, ಕಾನೂನು ಹೋರಾಟಾದ ಜವಬ್ದಾರಿ ನನಗೆ ನೀಡುವಂತೆ ತಾಕೀತು ಮಾಡಿದ್ದಾರೆ. ಗಲಾಟೆಯಲ್ಲಿ ಅರೆಸ್ಟ್ ಆದವರನ್ನು ಮೂರು ತಿಂಗಳ ಒಳಗಾಗಿ ಬಿಡಿಸಿ ಹೊರಗೆ ತರುತ್ತೇನೆ. ಒಬ್ಬರಿಗೆ ಒಂದು ಕೋಟಿ ಖರ್ಚು ಆದರೂ ಪರವಾಗಿಲ್ಲ, ಇಡೀ ಇಂಡಿಯಾದಲ್ಲಿ ಹುಡುಕಿ ಒಬ್ಬ ಒಳ್ಳೆಯ ವಕೀಲರನ್ನು ಹುಡುಕಿ ಜಾಮೀನು ಕೊಡಿಸುತ್ತೇನೆ ಎಂದು ಇಸ್ಮಾಯಿಲ್ ತಮಟಗಾರ ಹೇಳಿದ್ದಾರೆ.
ಇದನ್ನೂ ಓದಿ: ಕಲಬುರ್ಗಿ: ಇಂದು ಕಾಂಗ್ರೆಸ್ ಕಲ್ಯಾಣ ಕ್ರಾಂತಿ ಸಮಾವೇಶ, ಮತದಾರರ ಸೆಳೆಯಲು ಕಾಂಗ್ರೆಸ್ ತಂತ್ರ
ಪ್ರಕರಣ ಸಂಬಂಧ ಅಂಜುಮನ್ ಕಮೀಟಿ ಮುಖಂಡರು ಈಗಾಗಲೇ ಕಾನೂನು ಹೋರಾಟದ ಜವಾಬ್ದಾರಿ ತಗೆದುಕೊಂಡಿದ್ದಾರೆ. ಅದೇ ಜವಾಬ್ದಾರಿ ಕೊಟ್ಟರೆ ಮೂರು ತಿಂಗಳಲ್ಲಿ ಕೋಟಿ ಖರ್ಚು ಅದರೂ ಗಲಾಟೆಯಲ್ಲಿ ಅರೆಸ್ಟ್ ಆದವರನ್ನು ಹೊರಗೆ ತರುತ್ತೇನೆ ಎಂದು ಭರವಸೆ ನೀಡಿದ್ದಾರೆ. ಸಂಭಾಷಣೆ ಉದ್ದಕ್ಕೂ ಹುಬ್ಬಳ್ಳಿ ಕಾಂಗ್ರೆಸ್ ಮುಖಂಡರನ್ನು ಇಸ್ಮಾಯಿಲ್ ತಮಟಗಾರ ಜರಿದಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:39 am, Sat, 10 December 22