ಹುಬ್ಬಳ್ಳಿ, ಜನವರಿ 25: ಮಾಜಿ ಸಿಎಂ ಜಗದೀಶ ಶೆಟ್ಟರ್ (Jagadish Shettar) ಬಿಜೆಪಿ ಸೇರ್ಪಡೆ ಆಗಿರುವುದು ನನಗೆ ವೈಯಕ್ತಿಕವಾಗಿ ಖುಷಿಯಾಗಿದೆ ಎಂದು ಸಚಿವ ಸಂತೋಷ ಲಾಡ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಗದೀಶ ಶೆಟ್ಟರ್ ಪಕ್ಷವನ್ನ ತೊರೆದಿರುವುದು ನಮ್ಮ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ಬಿಜೆಪಿಗರಿಗೆ ಸಂತಸವಾಗಿದೆ ಎಂದು ಹೇಳಿದ್ದಾರೆ. ಹೀಗಾಗಿ ನಮಗೂ ಸಂತಸವಾಗಿದೆ. ಶೆಟ್ಟರ್ ಅವರಿಗೆ ನಮ್ಮ ಪಕ್ಷದಲ್ಲಿ ಉತ್ತಮ ಸ್ಥಾನಮಾನ ನೀಡಿದ್ದೆವು. ಆದರೆ ಅವರು ಈ ರೀತಿ ಏಕಾಏಕಿ ಪಕ್ಷ ತೊರೆದಿದ್ದಾರೆ. ಶೆಟ್ಟರ್ ಅವರ ಇತ್ತೀಚಿನ ಬೆಳವಣಿಗೆ ಗಮನಿಸಿದರೆ ಅವರೊಬ್ಬ ಅವಕಾಶವಾದಿಗಳು ಅನ್ನಿಸುತ್ತೆ ಎಂದು ಹೇಳಿದ್ದಾರೆ.
ನಮ್ಮ ಪಕ್ಷದಲ್ಲಿ ಎಲ್ಲ ಸಮುದಾಯದವರೂ ಇದ್ದಾರೆ. ಬಿಜೆಪಿಗೂ ನಮ್ಮ ಪಕ್ಷಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಶೆಟ್ಟರ್ ಅವರ ಮೇಲೆ ನನಗೆ ಅಪಾರ ಗೌರವವಿದೆ. ಆದರೆ ಅವರು ಪಕ್ಷ ಬಿಟ್ಟು ಹೋದದ್ದು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ನಮ್ಮದು ಡಬಲ್ ಡೆಕ್ಕರ್ ಬಸ್ ಎಂದು ಶೆಟ್ಟರ್ ಹೋಗಿರುವುದು ಸಂತೋಷ ಎಂದಿದ್ದಾರೆ.
ಕಾರವಾರದಲ್ಲಿ ಮೀನುಗಾರಿಕೆ ಇಲಾಖೆ ಸಚಿವ ಮಂಕಾಳು ವೈದ್ಯ ಪ್ರತಿಕ್ರಿಯೆ ನೀಡಿದ್ದು, ಪಾಪ ಶೆಟ್ಟರ್‌ಗೆ ವಯಸ್ಸಾಗಿದೆ, ಏನನಿಸಿದೆಯೋ ಏನೋ ಗೊತ್ತಿಲ್ಲ. ಬಿಜೆಪಿ ಸೋಲುವ ಭೀತಿಯಿಂದ ಶೆಟ್ಟರ್‌ರನ್ನ ವಾಪಸ್ ಕರೆಸಿಕೊಂಡಿದೆ. ಹೇಳಬಾರದೆಲ್ಲಾ ಹೇಳ್ಕೊಂಡು ದೆಹಲಿಗೆ ಕರೆದೊಯ್ದು ಸೇರಿಸಿದ್ದಾರೆ. ಇದರಲ್ಲೇ ಬಿಜೆಪಿಯವರ ಪರಿಸ್ಥಿತಿ ಎಲ್ಲಿಗೆ ಬಂದಿದೆ ಅಂತಾ ಯೋಚಿಸಿ. ಕಾಂಗ್ರೆಸ್ನವರು ಮನುಷ್ಯರನ್ನು ಪ್ರೀತಿ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಮುಸ್ಲಿಮರ ಓಲೈಕೆ, ಹಿಂದೂ ಕಡೆಗಣನೆ ನೋಡಿ ಶೆಟ್ಟರ್ ವಾಪಸ್ -ಇದು ಆಪರೇಷನ್ ಕಮಲ ಅಲ್ಲ ಎಂದ ಆರ್. ಅಶೋಕ
ಬಿಜೆಪಿ ಹಾಗೂ ಶೆಟ್ಟರ್ ಅಂಡರ್ ಸ್ಟ್ಯಾಂಡಿಂಗ್ ಏನಾಗಿದ್ಯೋ ಗೊತ್ತಿಲ್ಲ. ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಬಿಜೆಪಿಯಲ್ಲಿ ನೋವಾಗಿತ್ತು. ಖುಷಿಯಲ್ಲಿರಲಿ ಅಂತಾ ನಾವು ಜಗದೀಶ್ ಶೆಟ್ಟರ್‌ಗೆ ಸಹಾಯ ಮಾಡಿದ್ವಿ. ಶೆಟ್ಟರ್ ಅದನ್ನು ಉಳಿಸಿಕೊಂಡಿಲ್ಲ ಅಂದರೆ ನಾವೇನು ಹೇಳೋಕ್ಕಾಗುತ್ತೆ? ಅಧಿಕಾರ ಹೋಗುತ್ತೆ ಅಂತಾ ಹೆದರಿಕೆಯಿಂದ ಬಿಜೆಪಿಗೆ ಕರೆದುಕೊಂಡಿರಬೇಕು. ಮನುಷ್ಯರ ಮಾತಿಗೆ ಇರುವ ಬೆಲೆ ಯಾವ ಬಾಂಡ್ ಪೇಪರ್ಗೂ ಇಲ್ಲ. ಮಾತಿಗೆ ಬದ್ಧರಾಗಿರದೆ ಅಧಿಕಾರಕ್ಕಾಗಿ ಅಥವಾ ಬದುಕಲು ಏನ್ ಬೇಕಾದರೂ ಮಾಡುವುದಾದರೆ ಅವರನ್ನು ಜನರು ಎಲ್ಲಿ ನಂಬುತ್ತಾರೆ. ಯಾರೇ ಇರಲಿ ಅವರಿಗೆ ಯಾರು ಮರ್ಯಾದೆ ಕೊಡ್ತಾರೆ?, ಕಳ್ಕೊತ್ತಾರೆ ಅಷ್ಟೇ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್: ಮೂವರು ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ತಡೆ
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆಯಲು ಕಾರಣಗಳ ಬಗ್ಗೆ ನೋಡುವುದಾದರೆ ಮತ್ತೊಬ್ಬ ಲಿಂಗಾಯತ ಮುಖಂಡ ಬೆಳೆಯಲು ಬಿಡಬಾರದೆಂದು ಶೆಟ್ಟರ್ ವಿರುದ್ಧ ಉ-ಕ ಹಿರಿಯ ಲಿಂಗಾಯತ ಸಚಿವರೊಬ್ಬರಿಂದ ಹುನ್ನಾರ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ನ ಸ್ಥಳೀಯ ಮುಖಂಡರಿಂದಲೂ ಜಗದೀಶ್ ಶೆಟ್ಟರ್‌ಗೆ ವಿರೋಧ. ವಿನಾಕಾರಣ ಶೆಟ್ಟರ್ ವಿರುದ್ಧ ಅಪಪ್ರಚಾರ ನಡೆಸಿದ್ದ ಆರೋಪ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.