ವಿವಾದ ಸೃಷ್ಟಿಸಿದ್ದ ಹುಬ್ಬಳ್ಳಿ MTS ಕಾಲೋನಿಯ 13 ಎಕರೆ ಜಮೀನು ಲೀಸ್ ಟೆಂಡರ್ ರದ್ದು: RLDA ಬೋರ್ಡ್​ ಆದೇಶ

| Updated By: Rakesh Nayak Manchi

Updated on: Jan 21, 2024 | 9:18 PM

ಹುಬ್ಬಳ್ಳಿಯ ಹೃದಯ ಭಾಗದಲ್ಲಿರೋ MTS ಕಾಲೀನಿಯ 13 ಎಕರೇ ಜಮೀನು 99 ವರ್ಷ ಟೆಂಡರ್ ಕರೆಯಲಾಗಿತ್ತು. ರೇಲ್ವೆ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ 13 ಎಕರೇ ಜಮೀನು ಲೀಸ್ ಗೆ ಇದೆ ಎಂದು ಬೋರ್ಡ್ ಹಾಕಿತ್ತು. ಈ ವಿಚಾರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೆಸರು ತಳಕು ಹಾಕಿತ್ತು. ಜೋಶಿ ವಿರುದ್ದ ಸುರ್ಜೇವಾಲಾ ಗಂಭೀರ ಆರೋಪ ಮಾಡಿದ್ದರು. ಸದ್ಯ ಈ ವಿವಾದಾತ್ಮಕ ಟೆಂಡರ್ ಪ್ರಕ್ರಿಯೆಯನ್ನು ರೈಲ್ವೆ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ ಬೋರ್ಡ್ ರದ್ದುಗೊಳಿಸಿದೆ.

ವಿವಾದ ಸೃಷ್ಟಿಸಿದ್ದ ಹುಬ್ಬಳ್ಳಿ MTS ಕಾಲೋನಿಯ 13 ಎಕರೆ ಜಮೀನು ಲೀಸ್ ಟೆಂಡರ್ ರದ್ದು: RLDA ಬೋರ್ಡ್​ ಆದೇಶ
ವಿವಾದ ಸೃಷ್ಟಿಸಿದ್ದ ಹುಬ್ಬಳ್ಳಿ MTS ಕಾಲೋನಿಯ ಟೆಂಡರ್ ರದ್ದುಗೊಳಿಸಿದ RLDA ಬೋರ್ಡ್​ (ಸಾಂದರ್ಭಿಕ ಚಿತ್ರ)
Follow us on

ಹುಬ್ಬಳ್ಳಿ, ಜ.21: ಸಾಕಷ್ಟು ವಿವಾದ ಸೃಷ್ಟಿಸಿದ್ದ ಹುಬ್ಬಳ್ಳಿಯ (Hubballi) ಎಂಟಿಎಸ್ ಕಾಲೋನಿಯ 13 ಎಕರೆ ಜಮೀನಿನ ಟೆಂಡರ್ ಪ್ರಕ್ರಿಯೆಯನ್ನು ರೈಲ್ವೆ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ (RLDA) ಬೋರ್ಡ್ ರದ್ದುಗೊಳಿಸಿ ಆದೇಶಿಸಿದೆ.

ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ MTS ಕಾಲೀನಿಯ 13 ಎಕರೇ ಜಮೀನನ್ನು 99 ವರ್ಷಗಳಿಗೆ ಲೀಸ್​ಗೆ ನೀಡಲು ಟೆಂಡರ್ ಕರೆಯಲಾಗಿತ್ತು. ಈ ಬಗ್ಗೆ ರೈಲ್ವೇ ಭೂಮಿ ಅಭಿವೃದ್ಧಿ ಪ್ರಾಧಿಕಾರವು 13 ಎಕರೇ ಜಮೀನು ಲೀಸ್​ಗೆ ಇದೆ ಎಂದು ಬೋರ್ಡ್ ಹಾಕಿತ್ತು. ಈ ವಿಚಾರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೆಸರು ತಳಕು ಹಾಕಿತ್ತು.

ಇದನ್ನೂ ಓದಿ: ದಿನಕ್ಕೆ 50 ರಿಂದ 60 ಕಿಮೀ ನಡಿಗೆ: 28ನೇ ದಿನಕ್ಕೆ ಅಯೋಧ್ಯೆ ತಲುಪಿದ ಹುಬ್ಬಳ್ಳಿಯ ರಾಮಭಕ್ತ

ಜೋಶಿ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಗಂಭೀರ ಆರೋಪ ಮಾಡಿದ್ದರು. 1300 ಕೋಟಿ ಬ್ರಷ್ಟಾಚಾರದಲ್ಲಿ ಜೋಶಿ ಭಾಗಿಯಾಗಿದ್ದಾರೆ. ಸರ್ಕಾರಿ ಜಮೀನು ಕಬಳಿಸಲು ಯತ್ನಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು. ಅಷ್ಟೇ ಅಲ್ಲದೆ, ಸ್ಥಳೀಯ ಮಟ್ಟದಲ್ಲಿ ಕೈ ನಾಯಕರು ಹೋರಾಟ ಮಾಡಿದ್ದರು.

ಇದೀಗ ರೇಲ್ವೆ ಅಥಾರಿಟಿ ಡೆವೆಲಪ್ಮೆಂಟ್ ಬೋರ್ಡ್, ಜಮೀನನ್ನು ಲೀಸ್​ಗೆ ನೀಡುವ ಟೆಂಡರ್ ಪ್ರಕ್ರಿಯೆಯನ್ನೇ ರದ್ದು ಮಾಡಿದೆ. ಈ ಹಿಂದೆ ಐದು ಸಲ ಟೆಂಡರ್ ಕರೆದಾಗಲು ಯಾರೂ ಆಸಕ್ತಿ ತೋರಿಸಿರಲಿಲ್ಲ. ಹೀಗಾಗಿ ಆಡಳಿತ್ಮಾಕ ಆಧಾರದ ಮೇಲೆ ಇದೀಗ ಟೆಂಡರ್ ರದ್ದುಗೊಳಿಸಿ ಪ್ರಾಧಿಕಾರದಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ