ಅಯೋಧ್ಯೆ ರಾಮಂದಿರಕ್ಕೂ, 30 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನಿರ್ಮಾಣವಾದ ರಾಮನ ದೇವಾಸ್ಥಾನಕ್ಕೂ ಇದೆ ಹೋಲಿಕೆ!
ಅಯೋಧ್ಯೆಯಲ್ಲಿ ಭ್ಯವ ರಾಮಮಂದಿರ ನಿರ್ಮಾಣವಾಗಿದೆ. ಈಗ ಸಿದ್ದವಾಗಿರುವ ರಾಮಮಂದಿರಕ್ಕೂ ಮತ್ತು ಹುಬ್ಬಳ್ಳಿಯಲ್ಲಿ 1990ರಲ್ಲಿ ನಿರ್ಮಾಣವಾಗಿದ್ದ ರಾಮ ಮಂದಿರಕ್ಕೂ ಬಹುತೇಕ ಹೋಲಿಕೆ ಇದೆ. ಆಶ್ಚರ್ಯವೆನಿಸಿದರು ಸತ್ಯ.
ಹುಬ್ಬಳ್ಳಿ, ಜನವರಿ 21: ಅಯೋಧ್ಯೆಯಲ್ಲಿ (Ayodhya) ಭ್ಯವ ರಾಮಮಂದಿರ (Ram Mandir) ನಿರ್ಮಾಣವಾಗಿದೆ. ಈಗ ಸಿದ್ದವಾಗಿರುವ ರಾಮಮಂದಿರಕ್ಕೂ ಮತ್ತು ಹುಬ್ಬಳ್ಳಿಯಲ್ಲಿ 1990ರಲ್ಲಿ ನಿರ್ಮಾಣವಾಗಿದ್ದ ರಾಮ ಮಂದಿರಕ್ಕೂ ಬಹುತೇಕ ಹೋಲಿಕೆ ಇದೆ. ಆಶ್ಚರ್ಯವೆನಿಸಿದರು ಸತ್ಯ. ಅದು 1990ರ ಕಾಲಘಟ್ಟ ಇಡೀ ದೇಶದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಹೋರಾಟ, ಶೋಭಾಯಾತ್ರೆ ಆರಂಭವಾಗಿದ್ದವು. ಹಾಗೇ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಶೋಭಾಯಾತ್ರೆ ನಡೆದಿತ್ತು. ಹುಬ್ಬಳ್ಳಿಯಲ್ಲಿ ನಡೆದ ಶೋಭಾಯಾತ್ರೆಯಲ್ಲಿ ರಾಮಮಂದಿರ ಪರಿಕಲ್ಪನೆಯೊಂದಿಗೆ ಕಲಾಕೃತಿಯನ್ನು ನಿರ್ಮಾಣ ಮಾಡಿ ಮೆರವಣಿಗೆ ಮಾಡಲಾಗಿತ್ತು.
ಈ ರಾಮಮಂದಿರ ಕಲಾಕೃತಿಯನ್ನು ಥರ್ಮಕೋಲ್ ಮತ್ತು ಕಾರ್ಡ್ ಶೀಟ್ ಬಳಸಿ ಕಲಾವಿದ ಮಂಜುನಾಥ್ ರೇವಣಕರ್ ಎಂಬುವರು ನಿರ್ಮಾಣ ಮಾಡಿದ್ದಾರೆ. 1990ರಲ್ಲಿ ಥರ್ಮಾಕೋಲ್ ಮತ್ತು ಕಾರ್ಡ್ ಶೀಟ್ನಿಂದ ತಯಾರಾದ ರಾಮಮಂದಿರ ಕಲಾಕೃತಿಗೂ, ಇದೀಗ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರದ ರೀತಿ ಹೋಲುತ್ತದೆ.
ಥರ್ಮಾಕೋಲ್ ಮತ್ತು ಕಾರ್ಡ್ ಶೀಟ್ನಿಂದ ತಯಾರಾದ ಹುಬ್ಬಳ್ಳಿಯ ರಾಮಮಂದಿರ ನಾಲ್ಕು ಅಡಿ ಎತ್ತರ, ಮೂರು ಅಡಿ ಉದ್ದವಿದೆ. ಕಲಾಕೃತಿಯನ್ನು ಸುಮಾರು 25 ದಿನಗಳ ಕಾಲ ನಿರ್ಮಾಣ ಮಾಡಲಾಗಿದೆ. ಇದೀಗ ರಾಮಮಂದಿರ ನಿರ್ಮಾಣದ ಬೆನ್ನಲ್ಲೆ 30 ವರ್ಷಗಳ ಹಿಂದಿನ ಕಲಾಕೃತಿ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: ಶಿವಮೊಗ್ಗ: ಬೆಳ್ಳಿ ಬಂಗಾರದಲ್ಲಿ ಅರಳಿದ ಅಯೋಧ್ಯೆ ರಾಮಮಂದಿರ: ಭದ್ರಾವತಿ ಯುವಕನ ಕೈಚಳಕ
ಬಾಬ್ರಿ ಮಸೀದಿ ಧ್ವಂಸದ ಬಳಿಕ 1992 ರಲ್ಲಿ ರಾಮಮಂದಿರದ ಕಲಾಕೃತಿಯನ್ನು ಹುಬ್ಬಳ್ಳಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗಿತ್ತು. 30 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಕಲಾಕೃತಿಯನ್ನು ಕಲಾವಿದ ಮಂಜುನಾಥ ತಂದೆ ಬಾಲಗಂಗಾಧರಯ್ಯ ಅಚ್ಚುಕಟ್ಟಾಗಿ ಕಾಪಾಡಿಕೊಂಡು ಬಂದಿದ್ದಾರೆ.
ಈ ಬಗ್ಗೆ ಬಾಲಗಂಗಾಧರಯ್ಯ ಮಾತನಾಡಿ, ನಮಗೆ ಬಹಳ ಖುಷಿಯಾಗುತ್ತಿದೆ, ಹೆಮ್ಮೆ ಇದೆ ಎಂದರು. ಇನ್ನು ರಾಮಮಂದಿರ ಕಲಾಕೃತಿ ನಿರ್ಮಾಣ ಮಾಡಿರುವ ಕಲಾವಿದ ಮಂಜುನಾಥ ಸದ್ಯ ಜೈಪುರದಲ್ಲಿ ವಾಸ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ರಾಮಜನ್ಮಭೂಮಿ ಹೋರಾಟದ ನೆನಪಿಗಾಗಿ ರಾಮಮಂದಿರದ ಪರಿಕಲ್ಪನೆಯ ಕಲಾಕೃತಿಯನ್ನು ಇನ್ನೂ ಕಾಪಾಡಿಕೊಂಡು ಬರಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ