ಇದು ಹೋಳಿ ಸಮಯ! ಸಮವಸ್ತ್ರ ಧರಿಸಿಯೇ ರಂಗಿನ ಹಬ್ಬ ಆಚರಿಸಿ, ಸೆಲ್ಫಿ ಕ್ರೇಜ್​ನಲ್ಲಿ ಮಿಂದೆದ್ದ ಮಹಿಳಾ ಪೊಲೀಸ್

| Updated By: ಸಾಧು ಶ್ರೀನಾಥ್​

Updated on: Mar 22, 2022 | 5:44 PM

ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿಂದು ಮಹಿಳಾ ಪೊಲೀಸ್ ಸಿಬ್ಬಂದಿ ಕರ್ತವ್ಯದ ಜೊತೆಗೆ ಬಣ್ಣ ಹಚ್ಚಿಕೊಂಡು ಸಾಮೂಹಿಕವಾಗಿ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಅಲ್ಲದೇ ಸಾರ್ವಜನಿಕರೊಂದಿಗೂ ಕೂಡ ಸೌಜನ್ಯತೆಯಿಂದ ಬಣ್ಣದ ಹಬ್ಬವನ್ನು ಆಚರಿಸಿ ಎಲ್ಲರ ಗಮನ ಸೆಳೆದಿದ್ದಾರೆ ಮಹಿಳಾ ಪೊಲೀಸ್.

ಇದು ಹೋಳಿ ಸಮಯ! ಸಮವಸ್ತ್ರ ಧರಿಸಿಯೇ ರಂಗಿನ ಹಬ್ಬ ಆಚರಿಸಿ, ಸೆಲ್ಫಿ  ಕ್ರೇಜ್​ನಲ್ಲಿ ಮಿಂದೆದ್ದ ಮಹಿಳಾ ಪೊಲೀಸ್
ಇದು ಹೋಳಿ ಸಮಯ! ಸಮವಸ್ತ್ರ ಧರಿಸಿಯೇ ರಂಗಿನ ಹಬ್ಬ ಆಚರಿಸಿ, ಸೆಲ್ಪಿ ಕ್ರೇಜ್​ನಲ್ಲಿ ಮಿಂದೆದ್ದ ಮಹಿಳಾ ಪೊಲೀಸ್
Follow us on

ಹುಬ್ಬಳ್ಳಿ: ದಿನವೂ ಖಾಕಿ ಬಟ್ಟೆ ಧರಿಸಿಕೊಂಡು ಡ್ಯೂಟಿ ಮಾಡುತ್ತಿದ್ದ ಖಾಕಿ ಪಡೆ ಇಂದು ಕರ್ತವ್ಯದ ಮಧ್ಯೆ ಹೋಳಿ ಹಬ್ಬ ಆಚರಿಸಿದರು. ಹುಬ್ಬಳ್ಳಿಯಲ್ಲಿ ರಂಗಪಂಚಮಿ ಹಬ್ಬದಲ್ಲಿ ಸಂಭ್ರಮಿಸಿದರು. ಅಲ್ಲದೇ ಮಹಿಳಾ ಪೊಲೀಸ್ ಸಿಬ್ಬಂದಿ ಪರಸ್ಪರ ಬಣ್ಣ ಹಚ್ಚಿಕೊಂಡು ಸೆಲ್ಫಿ  ಕ್ಲಿಕ್ಕಿಸಿಕೊಳ್ಳುವ ಮೂಲಕ ಹೋಳಿ ಹಬ್ಬ ಆಚರಣೆ ಮಾಡಿದರು.

ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿಂದು ಮಹಿಳಾ ಪೊಲೀಸ್ ಸಿಬ್ಬಂದಿ ಕರ್ತವ್ಯದ ಜೊತೆಗೆ ಬಣ್ಣ ಹಚ್ಚಿಕೊಂಡು ಸಾಮೂಹಿಕವಾಗಿ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಅಲ್ಲದೇ ಸಾರ್ವಜನಿಕರೊಂದಿಗೂ ಕೂಡ ಸೌಜನ್ಯತೆಯಿಂದ ಬಣ್ಣದ ಹಬ್ಬವನ್ನು ಆಚರಿಸಿ ಎಲ್ಲರ ಗಮನ ಸೆಳೆದಿದ್ದಾರೆ ಮಹಿಳಾ ಪೊಲೀಸ್. ಹಬ್ಬದ ದಿನ ಆಗಿದ್ದರೂ ಮನೆ, ಕುಟುಂಬ, ಮಕ್ಕಳು ಎಲ್ಲರನ್ನೂ ಮರೆತು, ಕರ್ತವ್ಯದಲ್ಲಿಯೇ ಹಬ್ಬವನ್ನು ಆಚರಿಸಿ, ಆನಂದಿಸಿ ಸಂಭ್ರಮಿಸಿದರು. ಕೆಲಸದ ಒತ್ತಡದ ನಡುವೆಯೂ ಸಾಂಪ್ರದಾಯಿಕ ಆಚರಣೆ ಮಾಡಿದ್ದು, ಮಹಿಳಾ ಸಿಬ್ಬಂದಿ ಸೆಲ್ಪಿ ಕ್ರೇಜ್ ನಿಜಕ್ಕೂ ನೋಡುಗರಲ್ಲಿ ಕುತೂಹಲ ಮೂಡಿಸಿತ್ತು.

ಬ್ಯಾಂಕ್​​ನಲ್ಲಿ ಹಣ ಠೇವಣಿ ಮಾಡಲು ಬಂದ ಮಹಿಳೆ; ಬೆನ್ನಟ್ಟಿ ಬಂದು ಎಲ್ಲರೆದುರೇ ಚಾಕುವಿನಿಂದ ಇರಿದ ಪತಿ
ಬ್ಯಾಂಕ್​​ನಲ್ಲಿ ಹಣ ಠೇವಣಿ ಇಡಲು ಬಂದ ಮಹಿಳೆಯನ್ನು ಆಕೆಯ ಪತಿ ಮತ್ತು ಅವನ ಸ್ನೇಹಿತ ಸೇರಿ ಕುಡುಗೋಲು, ಚಾಕುವಿನಿಂದ ಇರಿದಿದ್ದಾರೆ. ಈ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಮಹಿಳೆಯನ್ನು ಪ್ರೇಮಲತಾ ಎಂದು ಗುರುತಿಸಲಾಗಿದ್ದು, ಇವರ ಪತಿಯ ಹೆಸರು ವೆಲೈಚಾಮಿ. ಬ್ಯಾಂಕ್​​ನೊಳಗೇ ಆಕೆಗೆ ಚಾಕುವಿನಿಂದ ಹಲ್ಲೆ ಮಾಡಿ ಇಬ್ಬರೂ ಓಡಿಹೋಗಿದ್ದಾರೆ. ಆರೋಪಿಗಳನ್ನು ಹಿಡಿಯಲು ಬ್ಯಾಂಕ್​ ಸಿಬ್ಬಂದಿ ಮತ್ತು ಅಲ್ಲಿಯೇ ಇದ್ದ ಇತರರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಇಂಡಿಯಾ ಟುಡೆ ವರದಿಯಲ್ಲಿ ತಿಳಿಸಿದೆ. ಹಲ್ಲೆಗೊಳಗಾಗಿ ರಕ್ತದ ಮಡುವಲ್ಲಿ ಬಿದ್ದಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅನಿರೀಕ್ಷಿತವಾಗಿ ನಡೆದ ಈ ಘಟನೆ ನೋಡಿ ಇಡೀ ಬ್ಯಾಂಕ್​ ಬೆಚ್ಚಿಬಿದ್ದಿದೆ.

ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಬ್ಯಾಂಕ್​ ಸಿಬ್ಬಂದಿ ಕೂಡಲೇ ಪೊಲಿಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆಯನ್ನೂ ನಡೆಸಿದ್ದಾರೆ. ಪ್ರೇಮಲತಾ ಮತ್ತು ವೆಲೈಚಾಮಿ ಒಟ್ಟಿಗೇ ಇರಲಿಲ್ಲ. ಮದುವೆಯಾಗಿ ಕೆಲ ವರ್ಷಗಳ ಬಳಿಕ ವೆಲೈಚಾಮಿಗೆ ಪತ್ನಿಯ ಮೇಲೆ ಅನುಮಾನ ಶುರುವಾಯಿತು. ಆಕೆ ಯಾರೊಂದಿಗೋ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಆಕೆಯ ಮೇಲೆ ದೌರ್ಜನ್ಯ ಎಸಗಲು ಪ್ರಾರಂಭಿಸಿದ್ದ. ನಂತರ ಇಬ್ಬರೂ ಪ್ರತ್ಯೇಕವಾಗಿದ್ದರೂ ಕೂಡ ವೆಲೈಚಾಮಿ ದುಡ್ಡಿಗಾಗಿ ಅವಳ ಬೆನ್ನುಬಿದ್ದಿದ್ದ. ಅವಳ ಆಸ್ತಿಯನ್ನು ತನಗೇ ಕೊಡುವಂತೆ ಒತ್ತಡ ತರುತ್ತಿದ್ದ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿದ್ದಾರೆ. ಬ್ಯಾಂಕ್​​ನಲ್ಲಿ ಘಟನೆ ನಡೆದಾಗ ಇದ್ದ ಗ್ರಾಹಕರಲ್ಲಿ ಒಬ್ಬರು ಅದನ್ನು ವಿಡಿಯೋ ಕೂಡ ಮಾಡಿಕೊಂಡಿದ್ದು, ಅದನ್ನು ಪೊಲೀಸರು ಪಡೆದುಕೊಂಡಿದ್ದಾರೆ.

Also Read:
ಶಿವಮೊಗ್ಗ ಪೊಲೀಸರ ಹೈ ಅಲರ್ಟ್ ನಡುವೆಯೂ ಕೊಲೆ ಯತ್ನ; 13 ದಿನ ಸಾವು ಬದುಕಿನ ಹೋರಾಟ ನಡೆಸಿದ್ದ ವ್ಯಕ್ತಿ ಸಾವು, ಅಸಲಿಗೆ ಆಗಿದ್ದೇನು?

Also Read:
ಪಾರ್ವತಮ್ಮ, ಪುನೀತ್ ಹೆಸರಲ್ಲಿ 2 ಬಂಗಾರದ ಪದಕ ಘೋಷಿಸಿದ ಅಶ್ವಿನಿ; ‘ದೊಡ್ಮನೆ ಯಾವತ್ತಿಗೂ ದೊಡ್ಮನೆ’ ಎಂದ ಅಭಿಮಾನಿಗಳು

Published On - 5:37 pm, Tue, 22 March 22