Holi: ಹೋಳಿ ಹುಣ್ಣಿಮೆ ನಿಮಿತ್ತ ಧಾರವಾಡದಲ್ಲಿ ಇಂದು ಹಲಗಿ ಹಬ್ಬ: 5000 ಕ್ಕೂ ಹೆಚ್ಚು ಯುವಕರು ಭಾಗಿ
Halagi Habba: ಹೋಳಿ ಹುಣ್ಣಿಮೆ ನಿಮಿತ್ತ ಪ್ರತಿವರ್ಷ ಈ ವರ್ಷವು "ಹಲಗಿ ಹಬ್ಬ"ವನ್ನು ಇಂದು (ಮಾ.5) ಧಾರವಾಡದಲ್ಲಿ ಆಯೋಜಿಸಲಾಗಿದೆ.

ಹುಬ್ಬಳ್ಳಿ: ಹೋಳಿ ಹುಣ್ಣಿಮೆ ನಿಮಿತ್ತ ಪ್ರತಿವರ್ಷ ಹುಬ್ಬಳ್ಳಿ-ಧಾರವಾಡದಲ್ಲಿ (Hubli-Dharwad) ಹಲಗಿ ಹಬ್ಬವನ್ನು (Halagi Habba) ಆಯೋಜಿಸಲಾಗುತ್ತದೆ. ಅದರಂತೆ ಈ ವರ್ಷವು “ಹಲಗಿ ಹಬ್ಬ”ವನ್ನು ಇಂದು (ಮಾ.5) ಧಾರವಾಡದಲ್ಲಿ ಆಯೋಜಿಸಲಾಗಿದೆ. ಈ ಹಲಗಿ ಹಬ್ಬವನ್ನು ಶನಿವಾರ (ಮಾ.4) ರಂದು ಧಾರವಾಡದ (Dharwad) ಕಾಮನಕಟ್ಟಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಧ್ವಜಾಹರಣ ಮೂಲಕ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಸ್ವಮೀಜಿ ಮಧ್ಯಾಹ್ನ 3 ಗಂಟೆಗೆ ಚಾಲನೆ ನೀಡಿದರು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (HDMC)ಯ ಕೌನ್ಸಿಲರ್ ಮತ್ತು ಸಂಯೋಜಕ ಶಂಕರ್ ಶೇಲ್ಕೆ ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ (Pralhad Joshi), ಶಾಸಕರಾದ ಅರವಿಂದ ಬೆಲ್ಲದ (Arvind Bellad), ಅಮೃತ್ ದೇಸಾಯಿ (Amrut Desai) ಮುಖ್ಯ ಅತಿಥಿಗಳಾಗಿ ಭಾಗವಿಹಿಸಿದ್ದರು. ವಿವಿಧ ತಂಡಕ್ಕೆ ಸೇರಿದ 5,000 ಕ್ಕೂ ಹೆಚ್ಚು ಯುವಕರು ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಹಲಗಿ ಹಬ್ಬದ ಮೆರವಣಿಗೆಯಲ್ಲಿ ವಿವಿಧ ರೀತಿಯ ಹಲಗಿ ಮತ್ತು ಡ್ರಮ್ಸ್ ಕಾಣಸಿಗಲಿದ್ದು, ನಗರದ ಬಹುತೇಕ ಓಣಿಗಳಲ್ಲಿ ಮೆರವಣಿಗೆ ಸಾಗುತ್ತದೆ.
ವರ್ಷಕ್ಕೆ ಒಂದು ಬಾರಿ ಆಯೋಜಿಸಲಾಗುವ ಈ ಹಲಗಿ ಹಬ್ಬ ಸಾಕಷ್ಟು ವಿಜೃಂಭಣೆಯಿಂದ ಕೂಡಿರುತ್ತದೆ. ಈ ಮೆರವಣೆಗೆ ಸಾಯಂಕಾಲ ಪ್ರಾರಂಭವಾಗುತ್ತದೆ. ನೃತ್ಯ ಕಲಾ ತಂಡಗಳು, ಗೊಂಬೆ ಕುಣಿತ ಹೀಗೆ ವಿವಿಧ ವಾದಕರು ಭಾಗಿಯಾಗಿರುತ್ತಾರೆ. ಜಿಲ್ಲೆಯ ಸುತ್ತಮುತ್ತಲಿನ ವಾದಕರು ಇದರಲ್ಲಿ ಭಾಗಿಯಾಗಿರುತ್ತಾರೆ. ಹಲಗಿ ಹಬ್ಬವನ್ನು ನೋಡಲು ಸಾಕಷ್ಟು ಜನರು ಸೇರುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:36 am, Sun, 5 March 23