Hubli-Dharwad: ದೊಡ್ಡ ಮಟ್ಟದ ವಸತಿ ಯೋಜನೆ ರೂಪಿಸಲು ಸಜ್ಜಾದ ಕರ್ನಾಟಕ ಗೃಹ ಮಂಡಳಿ; ಅವಳಿ ನಗರದ ಜನತೆ ಫುಲ್​ ಖುಷ್​

Karnataka Housing Board: ಅವಳಿ ನಗರದ ಜನರಿಗೆ ಸ್ವಂತ ಸೂರು ಹೊಂದುವ ಆಶಯ ಇದೀಗ ಈಡೇರಲಿದೆ. ಅನೇಕ ವರ್ಷಗಳ ನಂತರ ಅವಳಿ ನಗರದಲ್ಲಿ ದೊಡ್ಡ ವಸತಿ ಯೋಜನೆಯನ್ನ ರೂಪಿಸಲು ಕರ್ನಾಟಕ ಗೃಹ ಮಂಡಳಿ ಸಜ್ಜಾಗಿದೆ.

Hubli-Dharwad: ದೊಡ್ಡ ಮಟ್ಟದ ವಸತಿ ಯೋಜನೆ ರೂಪಿಸಲು ಸಜ್ಜಾದ ಕರ್ನಾಟಕ ಗೃಹ ಮಂಡಳಿ; ಅವಳಿ ನಗರದ ಜನತೆ ಫುಲ್​ ಖುಷ್​
ಕರ್ನಾಟಕ ಗೃಹ ನೀರ್ಮಾಣ ಮಂಡಳಿ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 07, 2023 | 5:39 PM

ಧಾರವಾಡ: ಕರ್ನಾಟಕದಾದ್ಯಂತ ಗೃಹ ನಿರ್ಮಾಣದಲ್ಲಿ ಅತ್ಯಂತ ಪ್ರಮುಖ ಸ್ವಾಯುತ್ತ ಸಂಸ್ಥೆಯಾಗಿರುವ ಕೆಎಚ್‌ಬಿ (KARNATAKA HOUSING BOARD) ಕಳೆದ ಅರು ದಶಕಗಳಿಂದ ವಸತಿ ಯೋಜನೆ ರೂಪಿಸುವಲ್ಲಿ ನಿರತವಾಗಿದೆ. ಇದೀಗ ಧಾರವಾಡ ತಾಲೂಕಿನ ಸತ್ತೂರ ಗ್ರಾಮದಲ್ಲಿ ವಸತಿ ಯೋಜನೆಗಾಗಿ ಭೂಸ್ವಾಧೀನ ಪಡಿಸಿಕೊಂಡಿರುವ ಕೆಎಚ್‌ಬಿಯು 258.09 ಎಕರೆಯಲ್ಲಿ 50:50 ಅನುಪಾತದ ಬಡಾವಣೆಯನ್ನ ಅಭಿವೃದ್ಧಿ ಪಡಿಸಲು ಮುಂದಾಗಿದೆ. ಇದಕ್ಕೆ ರಾಜ್ಯ ಸರ್ಕಾರವು ಕಳೆದ ತಿಂಗಳು ಅನುಮೋದನೆ ನೀಡಿದ್ದು, ಧಾರವಾಡದ ಎಸ್‌ಡಿಎಂ ಡೆಂಟಲ್ ಕಾಲೇಜು ಬಳಿಯ ಉದಯಗಿರಿ ಬಡಾವಣೆ ರಸ್ತೆ ಮೂಲಕ ಇಟಿಗಟ್ಟಿ ಮಾರ್ಗದಲ್ಲಿ ಐಐಐಟಿ ಎದುರು ಗೃಹ ಮಂಡಳಿಯು ಜಾಗವನ್ನು ಗುರುತಿಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಲೇಔಟ್ ನಿರ್ಮಾಣ ಕಾರ್ಯ ಆರಂಭಿಸಲಿದೆ.

ಕೆಎಚ್​ಬಿಯ ಬೃಹತ್ ಯೋಜನೆ ಇದಾಗಿದ್ದು, ಇದುವರೆಗೆ ಜಿಲ್ಲೆಯಲ್ಲಿ ಅನೇಕ ವಸತಿ ಯೋಜನೆಗಳನ್ನು ಕೆಎಚ್‌ಬಿ ನಿರ್ಮಿಸಿದೆ. ಅವುಗಳೆಲ್ಲ ಸುಮಾರು ನೂರು ಎಕರೆ ಆಸುಪಾಸಿನ ಯೋಜನೆಗಳಾಗಿದ್ದವು. ಆದರೆ ಇದೀಗ 200ಕ್ಕೂ ಹೆಚ್ಚು ಎಕರೆಯಲ್ಲಿ ವಸತಿ ಯೋಜನೆಯನ್ನ ನಿರ್ಮಿಸುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಸತ್ತೂರಿನಲ್ಲಿ 2010ರಲ್ಲಿ ಭೂಸ್ವಾಧೀನವಾಗಿರುವ ಯೋಜನೆ ಇದಾಗಿದ್ದು, ರೈತರು ಹಾಗೂ ಮಂಡಳಿಯ 50:50 ಅನುಪಾತದ ಪಾಲುದಾರಿಕೆಯಲ್ಲಿ ಯೋಜನೆಯ ಜಾರಿಗೆ ಸರ್ಕಾರ ಒಪ್ಪಿಗೆ ನೀಡಿದೆ.

ಇದನ್ನೂ ಓದಿ:National Youth Festival: ಹುಬ್ಬಳ್ಳಿ-ಧಾರವಾಡದಲ್ಲಿ ರಾಷ್ಟ್ರೀಯ ಯುವಜನ ಉತ್ಸವ: ಲೋಗೋ ಮತ್ತು ಮ್ಯಾಸ್ಕಟ್ ಬಿಡುಗಡೆ

ಇನ್ನು ಸಧ್ಯದಲ್ಲೇ ಸ್ಥಳ ಪರಿಶೀಲನೆ ಮಾಡಿ ಇದೇ ತಿಂಗಳು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ವಿವಿಧ ಕಾರಣ ನೀಡಿ ಬೃಹತ್ ಯೋಜನೆ ಜಾರಿಗೆ ತರಲು ವಿಳಂಬ ಆಗದಂತೆ ನೋಡಿಕೊಳ್ಳಬೇಕಾಗಿದೆ. ಬಹುದಿನಗಳ ಅವಳಿ ನಗರದ ನಿವಾಸಿಗಳ ಕನಸು ನನಸಾಗುವ ಸಮಯ ಹತ್ತಿರ ಬಂದಂತಾಗಿದೆ.

ವರದಿ: ರಹಮತ್ ಕಂಚಗಾರ್ ಟಿವಿ9 ಹುಬ್ಬಳ್ಳಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ