ಹುಬ್ಬಳ್ಳಿ ಕಿಮ್ಸ್​ನಲ್ಲಿ ಈ ಕ್ಷಣಕ್ಕೂ 150ರಿಂದ 200 ಆಕ್ಸಿಜನ್ ಬೆಡ್​ಗಳಿವೆ; ನಿರ್ದೇಶಕ ಡಾ.ರಾಮಲಿಂಗಪ್ಪ ಸ್ಪಷ್ಟನೆ

Hubli KIMS: ನಾವು ಶಾಸಕಿ ಕುಸುಮಾ ಶಿವಳ್ಳಿ ಅವರನ್ನು ನಿರ್ಲಕ್ಷಿಸಿಲ್ಲ. ನಾವು ಅಂದೇ ಸೂಚಿಸಿದ್ದರೂ ಸಹ ಅವರೇ ಆಸ್ಪತ್ರೆಗೆ ದಾಖಲಾಗಿಲ್ಲ. ಅವರು ಸಿದ್ದರಾಮಯ್ಯನವರ ಬಳಿ ಕಣ್ಣೀರು ಹಾಕಿದ ಕ್ಷಣವೇ ಆ್ಯಂಬುಲೆನ್ಸ್ ಕಳುಹಿಸಿಕೊಟ್ಟಿದ್ದೇವೆ: ಡಾ.ರಾಮಲಿಂಗಪ್ಪ

  • TV9 Web Team
  • Published On - 18:07 PM, 3 May 2021
ಹುಬ್ಬಳ್ಳಿ ಕಿಮ್ಸ್​ನಲ್ಲಿ ಈ ಕ್ಷಣಕ್ಕೂ 150ರಿಂದ 200 ಆಕ್ಸಿಜನ್ ಬೆಡ್​ಗಳಿವೆ; ನಿರ್ದೇಶಕ ಡಾ.ರಾಮಲಿಂಗಪ್ಪ ಸ್ಪಷ್ಟನೆ
ಕಿಮ್ಸ್ ಆಸ್ಪತ್ರೆ

ಹುಬ್ಬಳ್ಳಿ: ತಮ್ಮ ತಾಯಿಗೆ ಬೆಡ್ ಸಿಕ್ಕಿಲ್ಲ ಎಂದು ಕುಂದಗೊಳ ಶಾಸಕಿ ಕುಸುಮಾ ಶಿವಳ್ಳಿ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕಣ್ಣೀರು ಹಾಕಿದ ಕುರಿತು ಹುಬ್ಬಳ್ಳಿ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಟಿವಿ9ಗೆ ಕರೆ ಮಾಡಿ ಸ್ಪಷ್ಟನೆ ನೀಡಿದರು.

ಶಾಸಕಿ ಕುಸುಮಾ ಶಿವಳ್ಳಿ 2 ದಿನದ ಹಿಂದೆ ನಮ್ಮ ವೈದ್ಯಕೀಯ ಅಧೀಕ್ಷರನ್ನು ಭೇಟಿಯಾಗಿದ್ದರು. ಆಗಲೇ ನಾವು ಅಡ್ಮಿಟ್ ಆಗುವಂತೆ ತಿಳಿಸಿದ್ದೆವು. ಕಿಮ್ಸ್​ನಲ್ಲಿ ಬೆಡ್​ಗಳ ಸಮಸ್ಯೆ ಇಲ್ಲ. ಈ ಕ್ಷಣವೂ 150ರಿಂದ 200 ಆಕ್ಸಿಜನ್ ಬೆಡ್​ಗಳಿವೆ. ನಾವು ಶಾಸಕಿ ಕುಸುಮಾ ಶಿವಳ್ಳಿ ಅವರನ್ನು ನಿರ್ಲಕ್ಷಿಸಿಲ್ಲ. ನಾವು ಅಂದೇ ಸೂಚಿಸಿದ್ದರೂ ಸಹ ಅವರೇ ಆಸ್ಪತ್ರೆಗೆ ದಾಖಲಾಗಿಲ್ಲ. ಅವರು ಸಿದ್ದರಾಮಯ್ಯನವರ ಬಳಿ ಕಣ್ಣೀರು ಹಾಕಿದ ಕ್ಷಣವೇ ಆ್ಯಂಬುಲೆನ್ಸ್ ಕಳುಹಿಸಿಕೊಟ್ಟಿದ್ದೇವೆ. ಸಿದ್ದರಾಮಯ್ಯನವರು ಕರೆ ಮಾಡಿದಾಗ ಇರುವ ವಾಸ್ತವ ವಿಷಯವನ್ನು ತಿಳಿಸಿದ್ದೇನೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಮಾಹಿತಿ ನೀಡಿದರು.

ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸ್ವತಃ ಶಾಸಕಿಯೋರ್ವರೇ ತಮ್ಮ ತಾಯಿಗೆ ಬೆಡ್ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡು ಗಳಗಳನೇ ಅತ್ತ ಘಟನೆ ನಡೆಯಿತು. ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ ಅವರೇ ಕಣ್ಣೀರಾದವರು. ‘ನನ್ನ ತಾಯಿಗೆ ಕೊರೊನಾ ಸೋಂಕಿನಿಂದ ಸೀರಿಯಸ್ ಆಗಿದೆ. ಆದರೂ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ನನ್ನ ದಾಖಲಿಸಿಕೊಳ್ಳುತ್ತಿಲ್ಲ. ನನಗೆ ತುಂಬಾ ದುಃಖವಾಗುತ್ತಿದೆ’ ಎಂದು ಶಾಸಕಿ ಕುಸುಮಾ ಶಿವಳ್ಳಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿಯೇ ಅತ್ತರು.

ಇದೇ ವೇಳೆ ಸಭೆಯ ಉಸ್ತುವಾರಿ ವಹಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶಾಸಕಿ ಕುಸುಮಾ ಶಿವಳ್ಳಿಗೆ ಧೈರ್ಯ ತುಂಬಿದರು. ಕಿಮ್ಸ್‌ ಎಂಡಿ ಜತೆ ಮಾತಾಡುತ್ತೇನೆ. ಈಗಲೇ ಅಡ್ಇಕ್ಷನ್ ದೊರೆಯುವಂತೆ ಮಾಡುತ್ತೇನೆ ಎಂದು ಇಬ್ಬರೂ ನಾಯಕರು ಶಾಸಕಿಯ ದುಃಖ ಇಳಿಸಿ ಸಮಾದಾನ ಮಾಡಿದರು. ಆಗಲೇ, ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಮ್ಸ್‌ ನಿರ್ದೇಶಕರಿಗೆ ಕರೆ ಮಾಡಿ ‘ಯಾರಿಗೂ ಬೆಡ್ ನಿರಾಕರಿಸಬೇಡಿ’ ಎಂದು ತರಾಟೆಗೆ ತೆಗೆದುಕೊಂಡರು.

ಮೆಡಿಕಲ್ ಆಕ್ಸಿಜನ್ ಪೂರೈಕೆ ಆಗದೆ 24 ಜನ ಮೃತಪಟ್ಟಿದ್ದಾರೆ. ಹೀಗಾಗಿ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ಮೈಸೂರು ಜಿಲ್ಲಾಡಳಿತ ಆಕ್ಸಿಜನ್ ಪೂರೈಕೆ ಮಾಡಿಲ್ಲ. ಇದರಿಂದಲೇ ಸಮಸ್ಯೆ ಆಗಿದೆ ಎಂದು ವೈದ್ಯರು ಹೇಳಿದ್ದಾರೆ. ಆಕ್ಸಿಜನ್ ಸಮಸ್ಯೆ ಬಗ್ಗೆ ಸಚಿವ ಸುರೇಶ್ ಕುಮಾರ್ ಜತೆ ಚರ್ಚಿಸಿದ್ದೆ. ಸಮಸ್ಯೆ ಬಗೆಹರಿಸುವುದಾಗಿ ಸುರೇಶ್ ಕುಮಾರ್ ಹೇಳಿದ್ದರು. ಆದರೂ ಜಿಲ್ಲಾಸ್ಪತ್ರೆಯಲ್ಲಿ 23 ರೋಗಿಗಳು ಮೃತಪಟ್ಟಿದ್ದಾರೆ. ಹೀಗಾಗಿ ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಲೇಬೇಕು ಸಿದ್ದರಾಮಯ್ಯನವರೇ ನೀವು ಚಾಮರಾಜನಗರಕ್ಕೆ ಬನ್ನಿ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಒತ್ತಾಯಿಸಿದರು.

ಇದನ್ನೂ ಓದಿ: ಚಾಮರಾಜನಗರ ದುರ್ಘಟನೆಗೆ ರಾಜ್ಯ ಸರ್ಕಾರವೇ ಹೊಣೆ, ಘಟನೆ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ; ಸಿದ್ದರಾಮಯ್ಯ

ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರು ಮೂವರಲ್ಲ, ಮೂವತ್ನಾಲ್ಕು: ಚಾಮರಾಜನಗರ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿ ಗಂಭೀರ ಆರೋಪ

(Hubli Kims has 150 to 200 oxygen beds at the moment Director Dr Ramalingappa clarifies abouT Kundgol MLA Kusuma Shivalli cry )