Chandrashekhar Guruji Murder: ಚಂದ್ರಶೇಖರ್ ಗುರೂಜಿ ಕೊಲೆ ಆರೋಪಿಗಳು ಅರೆಸ್ಟ್

ಪ್ರಕರಣದ ಬಗ್ಗೆ ಧಾ-ಹು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆರೋಪಿಗಳಾದ ಮಹಾಂತೇಶ, ಮಂಜುನಾಥ್ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಆರೋಪಿಗಳಿಬ್ಬರೂ ಚಂದ್ರಶೇಖರ ಗುರೂಜಿಗೆ ಆಪ್ತರಾಗಿದ್ದರು.

Chandrashekhar Guruji Murder: ಚಂದ್ರಶೇಖರ್ ಗುರೂಜಿ ಕೊಲೆ ಆರೋಪಿಗಳು ಅರೆಸ್ಟ್
ಸಾಂದರ್ಭಿಕ ಚಿತ್ರ
TV9kannada Web Team

| Edited By: Ayesha Banu

Jul 05, 2022 | 5:45 PM

ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಕೊಲೆ(Chandrashekhar Guruji Murder) ಮಾಡಿದ ಹಂತಕರನ್ನು(Accused Arrest) ಪೊಲೀಸರು ಸೆರೆ ಹಿಡಿದಿದ್ದಾರೆ. ಗುರೂಜಿ ಕೊಲೆಯಾದ 4 ಗಂಟೆಯಲ್ಲೇ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಅರೆಸ್ಟ್ ಮಾಡಿದ್ದಾರೆ. ಹುಬ್ಬಳ್ಳಿ, ರಾಮದುರ್ಗ ಪೊಲೀಸರಿಂದ ಜಂಟಿ ಕಾರ್ಯಾಚರಣೆ ನಡೆಸಿ ಮಹಾಂತೇಶ ಶಿರೂರು, ಮಂಜುನಾಥ ದುಮ್ಮವಾಡ ಬಂಧಿಸಿದ್ದಾರೆ.

ಇನ್ನು ಮತ್ತೊಂದೆಡೆ ಪ್ರಕರಣದ ಬಗ್ಗೆ ಧಾ-ಹು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆರೋಪಿಗಳಾದ ಮಹಾಂತೇಶ, ಮಂಜುನಾಥ್ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಆರೋಪಿಗಳಿಬ್ಬರೂ ಚಂದ್ರಶೇಖರ ಗುರೂಜಿಗೆ ಆಪ್ತರಾಗಿದ್ದರು. ಸರಳವಾಸ್ತು ಸಂಸ್ಥೆಯಲ್ಲಿ ಗುರೂಜಿ ಜತೆ ಕೆಲಸ ಮಾಡ್ತಿದ್ದರು. 2013ರಿಂದ 2019ರವರೆಗೆ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ಆರೋಪಿ ಮಹಾಂತೇಶ್ ಗುರೂಜಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ. ಹಾಗೂ ಗುರೂಜಿಯ ಖಾಸಗಿ ವ್ಯವಹಾರ ನೋಡಿಕೊಳ್ತಿದ್ದ. 4 ವರ್ಷದ ಹಿಂದೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಆಗಾಗ ಗಲಾಟೆ ಆಗ್ತಿತ್ತು. ಅಲ್ಲದೆ ಗುರೂಜಿ ಮೇಲಿನ ದ್ವೇಷದಿಂದ ಸಾಮಾಜಿಕ ಜಾಲತಾಣದಲ್ಲಿ ಅವಹೇಳಕಾರಿ ಪೋಸ್ಟ್ ಹಾಕ್ತಿದ್ದ. ಸರಳವಾಸ್ತು ಸಂಸ್ಥೆಯಲ್ಲಿ ಮಹಾಂತೇಶ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ 25 ಉದ್ಯೋಗಿಗಳನ್ನು ಕೆಲ್ಸದಿಂದ ತೆಗೆದಿದ್ದಕ್ಕೆ ಮತ್ತಷ್ಟು ಮುನಿಸಿತ್ತು. ಎಲ್ಲಾ ಉದ್ಯೋಗಿಗಳು ಮಹಾಂತೇಶ ನೇತೃತ್ವದಲ್ಲಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದವು. ಸಂಧಾನ ಹೆಸರಲ್ಲಿ ಆಗಾಗ ಬಂದು ಮಹಾಂತೇಶ ಹಣ ಪಡೆದು ತೆರಳುತ್ತಿದ್ದ. ಈ ಬಾರಿಯೂ ಆರೋಪಿಗಳು ಕೋರ್ಟ್​ ಕೇಸ್​ ಸಂಧಾನಕ್ಕಾಗಿ ಹುಬ್ಬಳ್ಳಿಗೆ ಬಂದಿದ್ದರು. ಇದನ್ನೂ ಓದಿ: ಹಿಂದೂಗಳ ಅವಮಾನಿಸುವವರನ್ನು ಗಲ್ಲಿಗೇರಿಸಬೇಕು ಅಥವಾ ಗುಂಡು ಹೊಡೆದು ಸಾಯಿಸಬೇಕು: ‘ಕಾಳಿ’ ಪೋಸ್ಟರ್​ ವಿರುದ್ಧ ಕೆಎಸ್ ಈಶ್ವರಪ್ಪ ಕೆಂಡಾಮಂಡಲ

ನಾಳೆ ಮಧ್ಯಾಹ್ನ 1 ಗಂಟೆಗೆ ಗುರೂಜಿ ಅಂತ್ಯಕ್ರಿಯೆ ಚಂದ್ರಶೇಖರ್ ಗುರೂಜಿ ಅಂತ್ಯಸಂಸ್ಕಾರ ನಾಳೆ ನಡೆಯಲಿದೆ ಎಂದು ಗುರೂಜಿಗೆ ಪರಿಚಯಸ್ಥರಾಗಿದ್ದ ಮೋಹನ್​​ ಲಿಂಬಿಕಾಯಿ ತಿಳಿಸಿದ್ದಾರೆ. ಚಂದ್ರಶೇಖರ್ ಗುರೂಜಿ ಕುಟುಂಬಸ್ಥರೊಂದಿಗೆ ಚರ್ಚಿಸಿದ್ದೇವೆ. ನಾಳೆ ಮಧ್ಯಾಹ್ನ 1 ಗಂಟೆಗೆ ಗುರೂಜಿ ಅಂತ್ಯಕ್ರಿಯೆ ನಡೆಯಲಿದೆ. ಹುಬ್ಬಳ್ಳಿಯ ಸುಳ್ಳ ಗ್ರಾಮದ ರಸ್ತೆಯ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡ್ತೀವಿ. ಮರಣೋತ್ತರ ಪರೀಕ್ಷೆ ಕೂಡ ನಾಳೆ ನಡೆಯುವ ಸಾಧ್ಯತೆ ಇದೆ. ಚಂದ್ರಶೇಖರ್ ಗುರೂಜಿಗೆ ಬಹಳಷ್ಟು ಅನುಯಾಯಿಗಳಿದ್ದಾರೆ. ದೇಶದ ಬೇರೆ ಬೇರೆ ಕಡೆಗಳಲ್ಲೂ ಅನುಯಾಯಿಗಳಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಮೋಹನ್​​ ಲಿಂಬಿಕಾಯಿ ತಿಳಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada