ಹುಬ್ಬಳ್ಳಿಯಲ್ಲಿ ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ನಿಂದ ಗಲಾಟೆ ಪ್ರಕರಣ; ಮತ್ತೆ ಇಬ್ಬರು ಅರೆಸ್ಟ್!
ಮೌಲ್ವಿ ವಸೀಂ ಹಿಂದೆ ಇದೇ ನಾಯಕರ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳಿಗೆ ಇಂದು ಕೂಡ ಗ್ರಿಲ್ ಮುಂದುವರಿಯಲಿದೆ. ಕೆಲ ಸಂಘಟನೆಗಳ ಕೈವಾಡದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿ: ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ನಿಂದ ಗಲಾಟೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ವಸೀಂ ಪಠಾಣ್ ಬಂಧನವಾಗುತ್ತಿದ್ದಂತೆ ಈಗ ಮತ್ತೆ ಇಬ್ಬರನ್ನು ಬಂಧಿಸಲಾಗಿದೆ. ಹಳೇ ಹುಬ್ಬಳ್ಳಿ ಗಲಭೆ (Hubli Violence) ಹಿಂದೆ ಎಐಎಂಐಎಂ (AIMIM) ಪಕ್ಷದ ಕರಿನೆರಳು ಬಿದ್ದಂತೆ ಕಾಣುತ್ತಿದೆ. ವರ್ಷದ ಹಿಂದಷ್ಟೇ ಎಐಎಂಐಎಂ ಹುಬ್ಬಳ್ಳಿಯಲ್ಲಿ ನೆಲೆಯೂರಿದೆ. ಪಾಲಿಕೆ ಚುನಾವಣೆಯಲ್ಲಿ ಮೂವರು ಕಾರ್ಪೊರೇಟರ್ ಆಗಿದ್ದರು. ಕಳೆದ ಚುನಾವಣೆಯಲ್ಲಿ ಎಐಎಂಐಎಂ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ವಸೀಂ ಪಠಾಣ್ ಮಾಹಿತಿ ಮೇರೆಗೆ ಎಐಎಂಐಎಂ ಜಿಲ್ಲಾಧ್ಯಕ್ಷ, ಹುಬ್ಬಳ್ಳಿ ಘಟಕದ ಅಧ್ಯಕ್ಷ ಬಂಧನಕ್ಕೊಳಗಾಗಿದ್ದಾರೆ. ಹೀಗಾಗಿ ಗಲಭೆಗೆ ಎಐಎಂಐಎಂ ಪ್ರಚೋದನೆ ಬಗ್ಗೆ ಅನುಮಾನ ಮೂಡಿದೆ.
ಮೌಲ್ವಿ ವಸೀಂ ಹಿಂದೆ ಇದೇ ನಾಯಕರ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳಿಗೆ ಇಂದು ಕೂಡ ಗ್ರಿಲ್ ಮುಂದುವರಿಯಲಿದೆ. ಕೆಲ ಸಂಘಟನೆಗಳ ಕೈವಾಡದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗಲಭೆ ಪ್ರಕರಣದ ಮಾಸ್ಟರ್ಮೈಂಡ್ ಎಂದು ಶಂಕಿಸಲಾಗಿರುವ ಮೌಲ್ವಿ ವಸೀಂ ಪಠಾಣ್ನನ್ನು ನ್ಯಾಯಾಲಯವು ಐದು ದಿನ ಪೊಲೀಸರ ವಶಕ್ಕೆ ಒಪ್ಪಿಸಿದೆ. ತುಫೇಲ್ ಮುಲ್ಲಾನನ್ನು ಸಹ ನ್ಯಾಯಾಲಯ ಪೊಲೀಸರ ವಶಕ್ಕೆ ನೀಡಿದೆ. ಆರೋಪಿಗಳನ್ನು 10 ದಿನ ವಶಕ್ಕೆ ನೀಡಬೇಕೆಂದು ಹುಬ್ಬಳ್ಳಿ ಪೊಲೀಸರು ಕೋರಿದ್ದರು. ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಗಲಭೆ ಹಿಂದಿನ ಷಡ್ಯಂತ್ರ, ಸಂಘಟನೆಗಳ ಪಾತ್ರ, ಜನರನ್ನು ಸೇರಿಸಿದ್ದ ಬಗ್ಗೆಯೂ ಪೊಲೀಸರು ವಿಚಾರಣೆ ವೇಳೆ ಮಾಹಿತಿ ಸಂಗ್ರಹಿಸಲಿದ್ದಾರೆ.
ಪೊಲೀಸರ ಎದುರು ತಪ್ಪೊಪ್ಪಿಕೊಂಡ ವಾಸಿಂ: ವಾಸಿಂ ಪಠಾಣ್ನನ್ನು ಪೊಲೀಸರು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ‘ಪ್ರಕರಣದಲ್ಲಿ ನನ್ನನ್ನೇ ಮಾಸ್ಟರ್ ಮೈಂಡ್ ಮಾಡಿದ್ದರಿಂದ ನನಗೆ ಬಂಧನದ ಭಯವಿತ್ತು. ಹಾಗಾಗಿ ಪರಾರಿಯಾಗಿದ್ದೆ’ ಎಂದು ವಾಸಿಂ ತಪ್ಪೊಪ್ಪಿಕೊಂಡಿದ್ದ. ವಾಸೀಂ ಭೇಪಾರಿ, ತುಫೆಲ್ ಮಲ್ಲಾ ಜೊತೆ ಸೇರಿ ವಾಟ್ಸ್ಯಾಪ್ ಗ್ರೂಪ್ ಮಾಡಿದ್ದು ನಿಜ. ಕೇವಲ ಜನ ಜಮಾವಣೆ ಆಗುವಂತೆ ಮಾತ್ರ ಹೇಳಿದ್ದೆ. ಅಷ್ಟೊಂದು ದೊಡ್ಡ ಪ್ರಮಾಣ ಕಲ್ಲು ಬಂದಿದ್ದು ಹೇಗೆ ಎಂದು ನನಗೆ ಗೊತ್ತಿಲ್ಲ. ನಾನು ಪ್ರಚೋದನೆ ನೀಡಿಲ್ಲ. ಪೊಲೀಸರು ಬಗ್ಗದೇ ಹೋದರೆ ಪ್ರತಿಭಟನೆ ಮಾಡೋಣ ಎಂದಿದ್ದೆ. ಬರುವಾಗ ಎಲ್ಲರೂ ಕಲ್ಲು ಹಿಡಿದುಕೊಂಡು ಬಂದಿದ್ದಾರೆ. ನಾ ಬಂದ ಬಳಿಕ ಒಮ್ಮೆಲ್ಲೆ ಕರೆಂಟ್ ಹೊಯ್ತು. ಕೆಲವರು ಮುಸುಕುಧಾರಿಗಳು ಬಂದಿದ್ದರು ಎಂದು ವಾಸಿಂ ಪೊಲೀಸರಿಗೆ ವಿವರಣೆ ನೀಡಿದರು.
ಇದನ್ನೂ ಓದಿ
Rohit Sharma: ಬ್ಯಾಟ್ಸ್ಮನ್ಗಳಿಗೆ ಮನಬಂದಂತೆ ಬೈದ ರೋಹಿತ್ ಶರ್ಮಾ: ಪಂದ್ಯದ ಬಳಿಕ ಏನಂದ್ರು ಕೇಳಿ
ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ ಕುರಿತು ಏಪ್ರಿಲ್27ರಂದು ಸಿಎಂಗಳ ಜೊತೆ ಪ್ರಧಾನಿ ಮೋದಿ ಸಭೆ
Published On - 9:37 am, Mon, 25 April 22