ಧಾರವಾಡ, ಸೆ.08: ಪ್ರೇಮ ವೈಫಲ್ಯ ಹಿನ್ನೆಲೆ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ (Dharwad)ದ ರೈಲ್ವೆ ನಿಲ್ದಾಣ ಬಳಿಯ ಶ್ರೀನಿವಾಸ್ ಲಾಡ್ಜ್ನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಸಿಗೆಹಡ್ಲು ಕಾಮನಕೆರೆ ನಿವಾಸಿ ಚಿನ್ಮಯ್ ಎಸ್.ಜಿ, ಆತ್ಮಹತ್ಯೆ ಮಾಡಿಕೊಂಡ ಯುವಕ. ಇತ ಸೆ.04 ರಂದು ಶ್ರೀನಿವಾಸ್ ಲಾಡ್ಜ್ನ ರೂಮ್ ನಂ. 212 ರಲ್ಲಿ ತಂಗಿದ್ದ. ಸೆ. 6 ರಂದು ಸಂಜೆ ರೂಮ್ ಕ್ಲೀನ್ ಮಾಡಲು ಲಾಡ್ಜ್ ಸಿಬ್ಬಂದಿ ಹೋಗಿದ್ದ ವೇಳೆ ರೂಮ್ ಒಳಗಿನಿಂದ ಲಾಕ್ ಆಗಿತ್ತು.
ಈ ಹಿನ್ನಲೆ ಮಾರನೇ ದಿನ(ಸೆ. 7) ರಾತ್ರಿ ಲಾಡ್ಜ್ ಸಿಬ್ಬಂದಿ ಮತ್ತೆ ರೂಮ್ ಬಾಗಿಲು ತಟ್ಟಿದ್ದಾನೆ. ಆದರೂ ಚಿನ್ಮಯ್ ಬಾಗಿಲು ತೆರೆಯದ ಹಿನ್ನಲೆ ಅನುಮಾನಗೊಂಡು ಮತ್ತೊಂದು ಬೀಗ ಬಳಸಿ ಲಾಕ್ ಓಪನ್ ಮಾಡಿದ್ದಾರೆ. ಬಾಗಿಲು ತೆಗೆದಾಗ ಯುವಕ ಚಿನ್ಮಯ್ ಶವವಾಗಿ ಬಿದ್ದಿದ್ದ. ಕೂಡಲೇ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಲವರ್ ಜೊತೆ ರಾತ್ರಿ ಲಾಡ್ಜ್ನಲ್ಲಿದ್ದ ಅಪ್ರಾಪ್ತ ಬಾಲಕಿ ಮನೆಗೆ ಬಂದಕೂಡಲೆ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ರಾಜವಂತಿ ಬಳಿ ಬೈಕ್ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಗಾಯಾಳುಗಳಿಗೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಈ ಕುರಿತು ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:40 pm, Sun, 8 September 24