ಹುಬ್ಬಳ್ಳಿ ಕಿಮ್ಸ್​ನಲ್ಲಿ ಜನಿಸಿದ ಮಗು ಅದಲು ಬದಲು; ಗಂಡಿನ ಬದಲಾಗಿ ಪಾಲಕರಿಗೆ ಹೆಣ್ಣು ಮಗು ನೀಡಿದ ವೈದ್ಯರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 20, 2023 | 7:30 PM

ಅದು ಉತ್ತರ ಕರ್ನಾಟಕದ ಅದೆಷ್ಟೋ ಜನರ ಪಾಲಿಗೆ ಸಂಜೀವಿನಿ ಆಗಬೇಕಿದ್ದ ಅಸ್ಪತ್ರೆ, ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ವಿವಾದಕ್ಕೂ ಆ ಆಸ್ಪತ್ರೆಗೆ ಅದೇನೋ ಅವಿನಾಭವ ಸಂಬಂಧ. ಒಂದಲ್ಲ ಒಂದು ವಿವಾದ, ಯಡವಟ್ಟು ಮಾಡುವ ಆ ದೊಡ್ಡ ಆಸ್ಪತ್ರೆಯಲ್ಲಿ ಇದೀಗ ಮತ್ತೊಂದು ಯಡವಟ್ಟು ನಡಿದಿದೆ. ಹುಟ್ಟಿದ್ದು ಗಂಡು ಮಗು, ಆಸ್ಪತ್ರೆ ವೈದ್ಯರು ಕೊಟ್ಟಿದ್ದು ಹೆಣ್ಣು ಮಗು. ಅಲ್ಲಿನ ವೈದ್ಯರ ಕಳ್ಳಾಟ ಇದೀಗ ಬಯಲಾಗಿದೆ.

ಹುಬ್ಬಳ್ಳಿ ಕಿಮ್ಸ್​ನಲ್ಲಿ ಜನಿಸಿದ ಮಗು ಅದಲು ಬದಲು; ಗಂಡಿನ ಬದಲಾಗಿ ಪಾಲಕರಿಗೆ ಹೆಣ್ಣು ಮಗು ನೀಡಿದ ವೈದ್ಯರು
ಹುಬ್ಬಳ್ಳಿ ಕಿಮ್ಸ್​
Follow us on

ಹುಬ್ಬಳ್ಳಿ, ಸೆ.20: ಕಿಮ್ಸ್ ಆಸ್ಪತ್ರೆ(KIMS Hospital), ಉತ್ತರ ಕರ್ನಾಟಕದ ಸಂಜೀವಿನಿ. ಹುಬ್ಬಳ್ಳಿ(Hubballi) ಕಿಮ್ಸ್ ಅದೆಷ್ಟು ದೊಡ್ಡದಿದೆಯೋ ಅಷ್ಟೆ ದೊಡ್ಡ ಯಡವಟ್ಟುಗಳನ್ನು ಅಲ್ಲಿ ಸಿಬ್ಬಂದಿ ಮಾಡುತ್ತಾರೆ. ಬೇಕಂತಲೋ ಅಥವಾ ಗೊತ್ತಿಲ್ಲದೆಯೋ ದಿನ ಒಂದಲ್ಲ ಒಂದು ವಿವಾದ, ಯಡವಟ್ಟು ಕಿಮ್ಸ್​ನಲ್ಲಿ ಮಾಮೂಲಿ. ಅದರಂತೆ ಇವತ್ತು ಅಂತಹದೇ ಮತ್ತೊಂದು ದೊಡ್ಡ ಕಳ್ಳಾಟ ಬಯಲಾಗಿದೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ‌ ಮಗು ಅದಲು ಬದಲಾಗಿದೆ. ಹೌದು, ಗಂಡು‌ ಮಗು ಹುಟ್ಟಿತ್ತು. ಆದರೆ, ವೈದ್ಯರು ತಾಯಿಗೆ ಹೆಣ್ಣು ಮಗು ಕೊಟ್ಟಿದ್ದಾರೆ. ಹಾಗಾದ್ರೆ, ಗಂಡು‌ ಮಗುವನ್ನು ಅಲ್ಲಿರುವ ಸಿಬ್ಬಂದಿ ಮಾರಾಟ ಮಾಡುವುದಕ್ಕೆ ಮುಂದಾದ್ರಾ ಎನ್ನುವ ಅನುಮಾನವನ್ನ ಪೋಷಕರು ವ್ಯಕ್ತಪಡಿಸಿದ್ದಾರೆ.

ಘಟನೆ ವಿವರ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸುರುಣಗಿ ಗ್ರಾಮದ ಮುತ್ತವ್ವ ಎಂಬ ಮಹಿಳೆಗೆ 15 ದಿನಗಳ ಹಿಂದೆ ಗಂಡು ಮಗು ಜನಿಸಿತ್ತು. ಕಿಮ್ಸ್ ಸಿಬ್ಬಂದಿಯೇ ಗಂಡು ಮಗು ಎಂದು ದಾಖಲಾತಿ ಕೊಟ್ಟಿದ್ದಾರೆ. ಮಗು ತೂಕ ಕಡಿಮೆ ಇದೆ ಎನ್ನುವ ಕಾರಣಕ್ಕೆ ಮಗು ICU ನಲ್ಲಿ ಇಡಲಾಗಿತ್ತು. 15 ದಿನಗಳ ಕಾಲ ಗಂಡು ಮಗು ಎಂದು‌ ನಂಬಿದ್ದ ದಂಪತಿಗೆ ಇವತ್ತು ಶಾಕ್ ಎದುರಾಗಿತ್ತು. ಹೌದು, ಇವತ್ತು ಸಿಬ್ಬಂದಿ ಮಗುವಿನ ಪೋಷಕರಿಗೆ ಹೆಣ್ಣು ಮಗು ಕೊಟ್ಟಿದ್ದಾರೆ. ಇದರಿಂದ ಕೆಲ ಕಾಲ ಪೋಷಕರು ಗೊಂದಲಕ್ಕೆ ಜಾರಿದ್ದರು. 15 ದಿನಗಳ ಹಿಂದೆ ಗಂಡು‌ ಮಗು ಎಂದು ಹೇಳಿದ್ದವರು, ಇವತ್ಯಾಕೆ ಹೆಣ್ಣು ಮಗು ನೀಡಿದ್ದಾರೆ ಎಂದು ಮಗುವಿನ ಪೋಷಕರು ಸಿಬ್ಬಂದಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಹೊಟ್ಟೆಯೊಳಗಿನ ಅಂಗಾಂಗಗಳು ಉಲ್ಟಾಪಲ್ಟ; ಅಸಾಧಾರಣ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ವಿ ಕಂಡ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ವೈದ್ಯರು

ಕೇವಲ ಇದೊಂದೆ ಘಟನೆ ಅಲ್ಲ, ಕಿಮ್ಸ್​ನಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಯಡವಟ್ಟು ಸಹಜ. ವೈದ್ಯರ ನಿರ್ಲಕ್ಷ್ಯ, ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡದೆ ಇರುವುದು, ಮಕ್ಕಳ ಮಾರಾಟದ ಬಗ್ಗೆಯೂ ಕಿಮ್ಸ್ ಮೇಲೆ ಗಂಭೀರ ಆರೋಪ ಇದೆ. ಇವತ್ತಿನ ಯಡವಟ್ಟು ಕೂಡ ಹಲವು ಅನುಮಾನಕ್ಕೆ ಕಾರಣವಾಗಿದೆ. ಗಂಡು ಮಗು ಎಂದು ಹೆಣ್ಣು ಮಗು ಕೊಡುವ ಮೂಲಕ ಗಂಡು ಮಗು ಮಾರಾಟ ಮಾಡೋಕೆ ಮುಂದಾದರಾ? ಎನ್ನುವ ಅನುಮಾನ ಮೂಡಿದೆ.

ಒಟ್ಟಾರೆ ಕಿಮ್ಸ್​ನಲ್ಲಿ ನಡೆಯುವ ಬೆಳವಣಿಗೆಗಳ ಹಿಂದೆ ಸಾಕಷ್ಟು ಅನುಮಾನ ಇದೆ. ಮಕ್ಕಳ ವಿಷಯದಲ್ಲೂ ಕಳ್ಳಾಟ ಆಡುವ ವೈದ್ಯರು, ಸಿಬ್ಬಂದಿ ವಿರುದ್ದ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ವೈದ್ಯೋ ನಾರಾಯಣ ಹರಿ ಎಂದು ಆಸ್ಪತ್ರೆಗೆ ಬಂದ ರೋಗಿಗಳ ಪಾಲಿಕೆ ವೈದ್ಯರೇ ವಿಲನ್ ಆಗುತ್ತಿರುವುದು ದುರ್ದೈವದ ಸಂಗತಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:20 pm, Wed, 20 September 23