ಬಡವರ ದೃಷ್ಟಿಯಲ್ಲಿಟ್ಟುಕೊಂಡೆ ಇನ್ಫೋಸಿಸ್ ಮತ್ತು ಅದಮ್ಯ ಚೇತನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 5 ರೂಪಾಯಿಗೆ ಊಟ ಕೊಡ್ತಿದೆ!

ಸೇವಾ ಭಾರತಿ ಟ್ರಸ್ಟ್ ನ ಕೆಲಸ ನಿಜಕ್ಕೂ ಮಾದರಿಯಾಗಿದೆ. ಕೇವಲ‌ ಐದು ರೂಪಾಯಿಗೆ ಹೊಟ್ಟೆ ತುಂಬಾ ಕೊಟ್ಟು ಬಡ ರೋಗಿಗಳ ಪಾಲಿನ ಅನ್ನದಾತರಾಗಿದ್ದಾರೆ.

ಬಡವರ ದೃಷ್ಟಿಯಲ್ಲಿಟ್ಟುಕೊಂಡೆ ಇನ್ಫೋಸಿಸ್ ಮತ್ತು ಅದಮ್ಯ ಚೇತನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 5 ರೂಪಾಯಿಗೆ ಊಟ ಕೊಡ್ತಿದೆ!
ಇನ್ಫೋಸಿಸ್ ಮತ್ತು ಅದಮ್ಯ ಚೇತನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 5 ರೂಪಾಯಿಗೆ ಊಟ ಕೊಡ್ತಿದೆ!
Follow us
| Updated By: ಸಾಧು ಶ್ರೀನಾಥ್​

Updated on: Jul 01, 2023 | 3:37 PM

ಅದು ಉತ್ತರ ಕರ್ನಾಟಕದ ಸಂಜೀವಿನಿ ಎಂದು ಕರೆಸಿಕೊಳ್ಳುವ ಆಸ್ಪತ್ರೆ. ಉತ್ತರ ಕರ್ನಾಟಕದ ಅದೆಷ್ಟೋ ಬಡ ಜನ ಆ ಆಸ್ಪತ್ರೆಗೆ ಬರ್ತಾರೆ.. ಆ ಆಸ್ಪತ್ರೆಯಲ್ಲಿ ಈಗ ಕೇವಲ ಐದು ರೂಪಾಯಿಗೆ ಉತ್ತಮವಾದ ಗುಣಮಟ್ಟದ ಊಟ ನೀಡುತ್ತಿದ್ದಾರೆ. ಅಷ್ಟಕ್ಕೂ ಯಾರು ಇಷ್ಟೊಂದು ಕಡಿಮೇ ಬೆಲೆಗೆ ಊಟ ನೀಡುತ್ತಿದ್ದಾರೆ ಅನ್ಕೊಂಡಿರಾ ಈ ಸ್ಟೋರಿ ನೋಡಿ… ಒಂದು ಕಡೆ ಬಿಸಿ ಬಿಸಿ ಚಪಾತಿ ಮಾಡ್ತಿರೋ ದೃಶ್ಯ. ಇನ್ನೊಂದು ಕಡೆ ಕೇವಲ ಐದು ರೂಪಾಯಿಗೆ ಹೊಟ್ಟೆ ತುಂಬಾ ಊಟ ಮಾಡ್ತಿರೋ ರೋಗಿಗಳ ಸಂಬಂಧಿಕರು‌. ಇನ್ನೊಂದು ಕಡೆ ಊಟದ ಕೂಪನ್ ನೀಡ್ತಿರೋ ಸಿಬ್ಬಂದಿ.. ಎಸ್ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಕೇವಲ ಐದು ರೂಪಾಯಿಗೆ ಊಟ ಸಿಗ್ತಿದೆ.. ದುಬಾರಿ ದುನಿಯಾ ತಾಂಡವವಾಡುತ್ತಿರುವಾಗ ಇಲ್ಲಿ ಉತ್ತಮ ಗುಣಮಟ್ಟದ ಊಟ ನೀಡಲಾಗ್ತಿದೆ.

ಹೌದು ಸೇವಾ ಭಾರತಿ ಟ್ರಸ್ಟ್ ವತಿಯಿಂದ ಬುತ್ತಿ ಎಂಬ ಕಾರ್ಯಕ್ರಮ ಹಮ್ಮಿಕೊಂಡು, ಕೇವಲ ಐದು ರೂಪಾಯಿಗೆ ಗುಣಮಟ್ಟದ ಊಟ ನೀಡಿ ಬಡವರ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಕಿಮ್ಸ್ ಆವರಣದಲ್ಲಿ ಇನ್ಫೋಸಿಸ್ ಧರ್ಮಶಾಲಾ ಆರಂಭ ಮಾಡಿದ್ದು, ಸೇವಾ ಭಾರತಿ ಟ್ರಸ್ಟ್ ರೋಗಿಗಳ ಸಂಬಂಧಿಕರಿಗೆ ಅತೀ ಕಡಿಮೆ ಬೆಲೆಗೆ ದಿನಕ್ಕೆ 120 ಜನರಿಗೆ ಊಟ ನೀಡುತ್ತಿದ್ದಾರೆ.

ಈ ಊಟದಲ್ಲಿ ಎರಡು ಚಪಾತಿ, ಬಾಜಿ, ಅನ್ನ, ಸಾರು ನೀಡುತ್ತಾರೆ. ಅದಮ್ಯ ಚೇತನದಿಂದ ಅನ್ನ, ಸಾರು ಬರುತ್ತಿದ್ದು, ಚಪಾತಿ ಬಾಜಿ ಇಲ್ಲಿಯೇ ಮಾಡುತ್ತಾರೆ. ಮಧ್ಯಾಹ್ನ 120 ಜನರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳು ಹಾಗೂ ಸಂಬಂಧಿಕರಿಗೆ ಊಟ ನೀಡಲಾಗ್ತಿದೆ.

ಇನ್ನು ಸದ್ಯ ದುಬಾರಿ ಕಾಲ, ಯಾವ ಕಾಯಿಪಲ್ಲೆ ಕೂಡಾ ಕೆಜಿಗೆ 50 ರೂಪಾಯಿಗೆ ಕಡಿಮೆ ಇಲ್ಲ. ಹೀಗಿದ್ದಾಗಲೂ ಇಲ್ಲಿ ನಿತ್ಯ 120 ಜನರಿಗೆ ಕೇವಲ ಐದು ರೂಪಾಯಿಗೆ ಊಟ ಕೊಡ್ತಿದಾರೆ. ರೋಗಿಗಳು ಹಾಗೂ ಸಂಬಂಧಿಕರ ಹಿತದೃಷ್ಟಿಯಿಂದ ಸೇವಾ ಭಾರತಿ ಟ್ರಸ್ಟ್ ಇಂತಹದ್ದೊಂದು ಕಾರ್ಯಕ್ಕೆ ಮುಂದಾಗಿದೆ.

ನಿತ್ಯ ಕಿಮ್ಸ್ ನಲ್ಲಿಯೇ ಚಪಾತಿ ರೆಡಿ ಮಾಡ್ತಾರೆ. ಸುಮಾರು 10 ಕ್ಕೂ ಹೆಚ್ಚು ಜನ ಸೇವಾ ಭಾರತಿ ಟ್ರಸ್ಟ್ ನ ಸಿಬ್ಬಂದಿ ಉಟ ತಯಾರಿಸೋ ಕೆಲಸ ಮಾಡ್ತಿದಾರೆ.. ಇನ್ನು ಕಳೆದ ಆರು ತಿಂಗಳಿಂದ ಸೇವಾ ಭಾರತಿ ಟ್ರಸ್ಟ್ ಇಂತಹದ್ದೊಂದು ಕೆಲಸ ಮಾಡ್ತಿದೆ.. ಇಂದಿರಾ ಕ್ಯಾಂಟೀನ್ ದರಕ್ಕಿಂತಲೂ ಇಲ್ಲಿ ಕಡಿಮೆ ಬೆಲೆಗೆ ಊಟ ಕೊಡಲಾಗ್ತಿದೆ.. ನಿತ್ಯ ಕಿಮ್ಸ್ ಗೆ ನೂರಾರು ರೋಗಿಗಳು ಬಂದು ಹೋಗ್ತಾರೆ.. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಇಲ್ಲಿಗೆ ಬರೋದು ಸಾಮಾನ್ಯ. ಬಡವರನ್ನು ದೃಷ್ಟಿಯಲ್ಲಿಟ್ಟುಕೊಂಡೆ ಇಂತಹದ್ದೊಂದು ಕೆಲಸಕ್ಕೆ ಸೇವಾ ಭಾರತಿ ಟ್ರಸ್ಟ್ ಮುಂದಾಗಿದೆ.

ಹುಬ್ಬಳ್ಳಿ ಕುರಿತಾದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ