ಉತ್ತರ ಕರ್ನಾಟಕ ಮಂದಿಗೆ ಸಿಹಿ ಸುದ್ದಿ; ಉಚಿತವಾಗಿ ಕಿಡ್ನಿ ಕಸಿ ಮಾಡಲು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಪರವಾನಗಿ ನೀಡಿದ ಕರ್ನಾಟಕ ಸರ್ಕಾರ

ಕಿಡ್ನಿ ಕಸಿ ಪ್ರಕ್ರಿಯೆಗೆ ಅವಕಾಶ ನೀಡುವಂತೆ ಕೋರಿ ಕಿಮ್ಸ್, ಒಂದೂವರೆ ವರ್ಷದ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿತ್ತು. ಕಳೆದ ತಿಂಗಳು ಫೆಬ್ರವರಿ 18 ರಂದು ಅನುಮೋದನೆ ನೀಡಿದ್ದು, ಆದೇಶ ಬಂದಿದೆ.

ಉತ್ತರ ಕರ್ನಾಟಕ ಮಂದಿಗೆ ಸಿಹಿ ಸುದ್ದಿ; ಉಚಿತವಾಗಿ ಕಿಡ್ನಿ ಕಸಿ ಮಾಡಲು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಪರವಾನಗಿ ನೀಡಿದ ಕರ್ನಾಟಕ ಸರ್ಕಾರ
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ
Follow us
TV9 Web
| Updated By: sandhya thejappa

Updated on:Mar 10, 2022 | 10:13 AM

ಹುಬ್ಬಳ್ಳಿ: ಕಿಡ್ನಿ (Kidney) ವೈಫಲ್ಯದಿಂದ ಬಳಲುತ್ತಿರುವ ಉತ್ತರ ಕರ್ನಾಟಕ ಜನರು ಕಿಡ್ನಿ ಕಸಿ ಮಾಡಿಸಿಕೊಳ್ಳಲು ದೂರದ ಬೆಂಗಳೂರಿಗೆ ಹೋಗಬೇಕಾದ ಅಗತ್ಯವಿಲ್ಲ. ಇನ್ನು ಮುಂದೆ ಹುಬ್ಬಳ್ಳಿಯ ಕಿಮ್ಸ್​ನಲ್ಲಿಯೇ (KIMS) ಉಚಿತವಾಗಿ ಕಿಡ್ನಿ ಕಸಿ ಮಾಡಿಸಿಕೊಳ್ಳಬಹುದು. ಇದಕ್ಕಾಗಿ ರಾಜ್ಯ ಸರಕಾರ ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಪರವಾನಗಿ ನೀಡಿದೆ. ಈ ಮೂಲಕ ಕಿಮ್ಸ್, ಬೆಂಗಳೂರು ಹೊರತುಪಡಿಸಿ ಕಿಡ್ನಿ ಕಸಿಗೆ ಅನುಮತಿ ಪಡೆದ ಏಕೈಕ ಸರಕಾರಿ ಆಸ್ಪತ್ರೆಯಾಗಿದೆ.

ಕಿಡ್ನಿ ಕಸಿ ಮಾಡಿಸಿಕೊಳ್ಳಲು ಬಡವರು ಬೆಂಗಳೂರಿನಂತಹ ದೂರದ ಸ್ಥಳಗಳಿಗೆ ಹೋಗುವುದು ಕಷ್ಟಸಾಧ್ಯ. ಜೊತೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂ.ಖರ್ಚು ಮಾಡಬೇಕು. ಹಣ ಭರಿಸಲಾಗದೇ, ಬೆಂಗಳೂರಿಗೆ ಹೋಗಿ ಚಿಕಿತ್ಸೆ ಪಡೆಯಲೂ ಆಗದೆ ಸಾಕಷ್ಟು ಬಡ ಜನರು ಸಾವುಗೀಡಾದ ಉದಾಹರಣೆಗಳಿವೆ. ಇದೀಗ ಉತ್ತರ ಕರ್ನಾಟಕದ ಕೇಂದ್ರ ಸ್ಥಾನ ಎನಿಸಿರುವ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯು ವರದಾನವಾಗಲಿದೆ ಅಂತ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ಹೇಳಿದ್ದಾರೆ.

ಕಿಡ್ನಿ ಕಸಿ ಪ್ರಕ್ರಿಯೆಗೆ ಅವಕಾಶ ನೀಡುವಂತೆ ಕೋರಿ ಕಿಮ್ಸ್, ಒಂದೂವರೆ ವರ್ಷದ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿತ್ತು. ಕಳೆದ ತಿಂಗಳು ಫೆಬ್ರವರಿ 18 ರಂದು ಅನುಮೋದನೆ ನೀಡಿದ್ದು, ಆದೇಶ ಬಂದಿದೆ.

ಸಕಲ ಸೌಲಭ್ಯ: 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಿಮ್ಸ್ ಸೂಪರ್ ಸ್ಪೇಷಾಲಿಟಿ ಹಾಸ್ಪಿಟಲ್ನಲ್ಲಿ ಮೂತ್ರ ಪಿಂಡ ಆಪರೇಷನ್ ಥಿಯೇಟರ್​ಗಳನ್ನು ಹೊಂದಿದೆ. ಕಿಡ್ನಿ ಕಸಿಗೆ ಸಂಬಂಧಿಸಿದಂತೆ ಅತ್ಯಾಧುನಿಕ ವೈದ್ಯಕೀಯ ಯಂತ್ರಗಳು ಹಾಗೂ ಉಪಕರಣಗಳನ್ನು ಅಳವಡಿಸಿಕೊಂಡಿದೆ ಎಂದು ವಿಭಾಗದ ಮುಖ್ಯಸ್ಥ ಡಾ. ವೆಂಕಟೇಶ ಮೋಗೇರ್ ತಿಳಿಸಿದ್ದಾರೆ. ಇಎಸ್ಡಬ್ಲ್ಯೂಎಲ್ ಸೌಲಭ್ಯಗಳು, ಯುರೊಡೈನಾಮಿಕ್ಸ್ ಮತ್ತು ಉನ್ನತ ಮಟ್ಟದ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಅಗತ್ಯವಿರುವ ಅಡ್ವಾನ್ಸ್ಡ್ ಉಪಕರಣಗಳನ್ನು ಕಿಮ್ಸ್ ಅಳವಡಿಸಿಕೊಂಡಿದೆ ಎಂದು ಅವರು ಹೇಳಿದರು.

ಕಿಮ್ಸ್ನಲ್ಲಿ 30 ಡಯಾಲಿಸಿಸ್ ಯಂತ್ರಗಳಿದ್ದು, ರೋಗಿಗಳ ಆರೈಕೆಗಾಗಿ ಇವುಗಳು ಕಾರ್ಯನಿರ್ವಹಿಸುತ್ತಿವೆ. ಹೊಸದಾಗಿ ನಿರ್ಮಿಸಲಾಗುತ್ತಿರುವ ತುರ್ತು ಚಿಕಿತ್ಸಾ ಬ್ಲಾಕ್​ನಲ್ಲಿ 40 ಹಾಸಿಗೆಗಳ ಅತ್ಯಾಧುನಿಕ ಹೊಸ ಡಯಾಲಿಸಿಸ್ ಘಟಕಗಳನ್ನು ಹೊಂದುವ ಮೂಲಕ ನೆಫ್ರಾಲಜಿ ವಿಭಾಗ ಮತ್ತಷ್ಟು ಬಲಗೊಳ್ಳಲಿದ್ದು, ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ

5 State Election Result: ಪಂಚ ರಾಜ್ಯಗಳಲ್ಲಿ ಪ್ರಾರಂಭವಾದ ವಿಧಾನಸಭಾ ಚುನಾವಣೆ ಮತ ಎಣಿಕೆ; ಯಾವ ರಾಜ್ಯದ ಗದ್ದುಗೆ ಯಾರಿಗೆ?

Gold Price Today: ಚಿನ್ನದ ಬೆಲೆ ಮತ್ತೆ ಕೊಂಚ ಏರಿಕೆ; ಬೆಂಗಳೂರಿನಲ್ಲಿ ದಾಖಲೆ ಬರೆದ ಬೆಳ್ಳಿ ದರ

Published On - 9:07 am, Thu, 10 March 22