ಹುಬ್ಬಳ್ಳಿಯಲ್ಲಿ ಶ್ರೀ ಸಿದ್ಧಾರೂಢರ ಜಾತ್ರೆ ಸಂಭ್ರಮ; 16 ಲೀಟರ್ ಹಾಲು ಕರೆದು ಬಹುಮಾನ ಗೆದ್ದ ರೈತ

ಶಿವರಾತ್ರಿಗೆ ಆರಂಭವಾಗೋ ಜಾತ್ರೆಯ ಪ್ರಯುಕ್ತ, ರೈತರನ್ನ ಉತ್ತೇಜಿಸೋ ನಿಟ್ಟಿನಲ್ಲಿ ಹಾಲು ಕರೆಯುವ ಸ್ಪರ್ಧೆಯನ್ನ ಏರ್ಪಡಿಸಲಾಗಿತ್ತು. ಧಾರವಾಡ ಹಾಲು ಮಂಡಳಿ, ಪಶು ಸಂಗೋಪನಾ ಇಲಾಖೆ, ಹಾಗೂ ಸಿದ್ಧಾರೂಢ ಟ್ರಸ್ಟ್ ಕಮೀಟಿಯ ವತಿಯಿಂದ ಆಯೋಜಿಸಿದ್ರು.

ಹುಬ್ಬಳ್ಳಿಯಲ್ಲಿ ಶ್ರೀ ಸಿದ್ಧಾರೂಢರ ಜಾತ್ರೆ ಸಂಭ್ರಮ; 16 ಲೀಟರ್ ಹಾಲು ಕರೆದು ಬಹುಮಾನ ಗೆದ್ದ ರೈತ
ಹುಬ್ಬಳ್ಳಿಯಲ್ಲಿ ಶ್ರೀ ಸಿದ್ಧಾರೂಢರ ಜಾತ್ರೆ ಸಂಭ್ರಮ
Follow us
TV9 Web
| Updated By: ಆಯೇಷಾ ಬಾನು

Updated on: Mar 09, 2022 | 3:54 PM

ಹುಬ್ಬಳ್ಳಿ: ಉತ್ತರ ಕರ್ನಾಕದ ಸುಪ್ರಸಿದ್ಧ ಶ್ರೀ ಸಿದ್ಧಾರೂಢರ ಜಾತ್ರಾ ಮಹೋತ್ಸವದಲ್ಲಿ  ಹಾಲು ಕರೆಯುವ ಸ್ಪರ್ಧೆ ನಡೆದಿದೆ. ಈ ಭಾಗದ ಜನರ ಆರಾಧ್ಯ ದೈವರ ಪಲ್ಲಕಿ ಉತ್ಸವ ಅಂಗವಾಗಿ, ಒಂದು ವಾರಗಳ ಕಾಲ ನಾನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತೆ. ಜಾತ್ರೆಯಲ್ಲಿ ರೈತರನ್ನ ಉತ್ತೇಜಿಸೋ ನಿಟ್ಟಿನಲ್ಲಿ ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಜಾತ್ರೆ ಅಂದ್ರೆ ಸಾಕು ಉತ್ತರ ಕರ್ನಾಟಕ ಭಾಗದ ಜನರಿಗೆ ಹಬ್ಬವೋ ಹಬ್ಬ. ಇಲ್ಲಿಯ ಆರಾಧ್ಯ ದೈವವಾಗಿರೋ ಸಿದ್ಧರೂಢ ಅಜ್ಜರ ದರ್ಶನಕ್ಕೆ ಪ್ರತಿ ವರ್ಷ ಲಕ್ಷಾಂತರ ಜನ ಸೇರುತ್ತಾರೆ. ಆದ್ರೆ ಕಳೆದೆರಡೂ ವರ್ಷಗಳಿಂದ ಕೊರೊನಾ ಹೆಮ್ಮಾರಿಯಿಂದ ಜಾತ್ರಾ ಮಹೋತ್ಸವ ನಡೆದಿರಲಿಲ್ಲ. ಆದ್ರೆ ಈ ಭಾರಿ ಕೊರೊನಾ ಆತಂಕ ತಗ್ಗಿದ ಹಿನ್ನಲೆ, ಅದ್ಧೂರಿ ಜಾತ್ರಾ ಮಹೋತ್ಸವ ನೆರವೆರಿತ್ತು. ಸುಮಾರು ಒಂದು ವಾರ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ವಿವಿಧ ಕಾರ್ಯಕ್ರಮಗಳನ್ನ ಏರ್ಪಡಿಸಲಾಗುತ್ತಿದೆ.

ಶಿವರಾತ್ರಿಗೆ ಆರಂಭವಾಗೋ ಜಾತ್ರೆಯ ಪ್ರಯುಕ್ತ, ರೈತರನ್ನ ಉತ್ತೇಜಿಸೋ ನಿಟ್ಟಿನಲ್ಲಿ ಹಾಲು ಕರೆಯುವ ಸ್ಪರ್ಧೆಯನ್ನ ಏರ್ಪಡಿಸಲಾಗಿತ್ತು. ಧಾರವಾಡ ಹಾಲು ಮಂಡಳಿ, ಪಶು ಸಂಗೋಪನಾ ಇಲಾಖೆ, ಹಾಗೂ ಸಿದ್ಧಾರೂಢ ಟ್ರಸ್ಟ್ ಕಮೀಟಿಯ ವತಿಯಿಂದ ಆಯೋಜಿಸಿದ್ರು. ಹೀಗಾಗಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ನೂರಾರು ರೈತರು, ತಮ್ಮ ತಮ್ಮ ಹಸುಗಳನ್ನ ಕರೆದುಕೊಂಡು ಬಂದು ಹಾಲು ಕರೆದ್ರು. ಜಿದ್ದಿಗೆ ಬಿದ್ದವರಂತೆ ಹಾಲು ಕರೆದು ಸೈ ಎನ್ನಿಸಿಕೊಂಡ್ರು‌. ಅದರಲ್ಲೂ ರೋಹಿತ್ ಎನ್ನೋ ರೈತ 16 ಲೀಟರ್ ಹಾಲು ಕರೆದು ಎಲ್ಲರ ಮೆಚ್ಚುಗೆಗೆ ಪಾತ್ರರಾದ್ರು.

ಇನ್ನು ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಹಾಲು ಕರೆಯೋ ಸ್ಪರ್ಧೆ ಜೊತೆಜೊತೆಗೆ ಹಾಲು ಮಾರಾಟ ಹಾಗೂ ಹಸು ಸಾಗಣಿಕೆ ಸೇರಿದಂತೆ ಹೈನುಗಾರಿಕೆಯ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿ, ರೈತರಿಗೆ ಸರ್ಕಾರದ ನೆರವಿನ ಬಗ್ಗೆಯೂ ತಿಳಿಸಿದ್ರು. ಒಟ್ನಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಈ ಬಾರಿ ರೈತರನ್ನು ಉತ್ತೇಜಿಸೋ ಕೆಲಸ ಮಾಡಿದ್ದಕ್ಕೆ ರೈತರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಹಾಲು ಕರೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ ರೈತರಿಗೆ ಇಲಾಖೆಯಿಂದ ಬಹುಮಾನ ಸಹ ನೀಡಲಾಯ್ತು.

ವರದಿ: ದತ್ತಾತ್ರೇಯ ಪಾಟೀಲ್, ಟಿವಿ9 ಹುಬ್ಬಳ್ಳಿ

siddharoodha jatre 1

ಹುಬ್ಬಳ್ಳಿಯಲ್ಲಿ ಶ್ರೀ ಸಿದ್ಧಾರೂಢರ ಜಾತ್ರೆ ಸಂಭ್ರಮ

ಇದನ್ನೂ ಓದಿ: ಪ್ರಶಾಂತ್​ ನೀಲ್​ ನಿರ್ದೇಶನದ ‘ಸಲಾರ್​’ ಚಿತ್ರಕ್ಕೆ ವಿಲನ್​ ಆದ ಪೃಥ್ವಿರಾಜ್​; ವಿಷಯ ಲೀಕ್ ಮಾಡಿದ ಪ್ರಭಾಸ್

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮುಂಬೈನಲ್ಲಿ​ ಪೊಲೀಸ್ ವಶಕ್ಕೆ