Karnataka Shakti scheme: ಉಚಿತ ಬಸ್​​ ಪ್ರಯಾಣದ ಶಕ್ತಿ ಯೋಜನೆ ಸೈಡ್ ಎಫೆಕ್ಟ್, ರೈಲ್ವೆ ಇಲಾಖೆಗೂ ನಿಶ್ಯಕ್ತಿ! ದಿನೇ ದಿನೇ ರೈಲ್ವೆ ಪ್ರಯಾಣಿಕರ ಸಂಖ್ಯೆ ಕಡಿಮೆ

South Western Railway passengers: ಇನ್ನು ನೈಋತ್ಯ ರೈಲ್ವೆ ಇಲಾಖೆಯಲ್ಲಿ ಕೋವಿಡ್ ನಂತರದಲ್ಲಿ ಇಂತಹದೊಂದು ಆರ್ಥಿಕ ಸಮಸ್ಯೆ ಎದುರಾಗುವ ಭೀತಿ ಸ್ಪಷ್ಟವಾಗಿ ಗೋಚರಿಸುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಈಗಾಗಲೇ 10 ದಿನಗಳ ಅವಧಿಯಲ್ಲಿ ಲೆಕ್ಕಾಚಾರ ಮಾಡಲಾಗಿದ್ದು, 10 % ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.

Karnataka Shakti scheme: ಉಚಿತ ಬಸ್​​ ಪ್ರಯಾಣದ ಶಕ್ತಿ ಯೋಜನೆ ಸೈಡ್ ಎಫೆಕ್ಟ್, ರೈಲ್ವೆ ಇಲಾಖೆಗೂ ನಿಶ್ಯಕ್ತಿ! ದಿನೇ ದಿನೇ ರೈಲ್ವೆ ಪ್ರಯಾಣಿಕರ ಸಂಖ್ಯೆ ಕಡಿಮೆ
ಉಚಿತ ಪ್ರಯಾಣದ ಶಕ್ತಿ ಯೋಜನೆ ಸೈಡ್ ಎಫೆಕ್ಟ್
Follow us
| Updated By: ಸಾಧು ಶ್ರೀನಾಥ್​

Updated on: Jul 22, 2023 | 9:30 AM

ಹುಬ್ಬಳ್ಳಿ, ಜುಲೈ 22: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಿಂದ (Karnataka Shakti scheme) ಖಾಸಗಿ ಸಾರಿಗೆಗೆ ದೊಡ್ಡ ಹೊಡೆತ ಬಿದ್ದಿದೆ. ಅದರಲ್ಲೂ ಆಟೋ ಚಾಲಕರ ಗೋಳು ಹೇಳತೀರದು. ಆಟೋ ಚಾಲಕರು ದುಡಿಮೆ ‌ಇಲ್ಲದೆ ಕಂಗಾಲಾಗಿದ್ದಾರೆ. ಇತ್ತ ಸರ್ಕಾರಿ ಬಸ್ ಗಳ ತುಂಬಾ ಮಹಿಳಾಮಣಿಗಳದ್ದೇ (Women Passengers) ದರ್ಬಾರಾಗಿದೆ. ಉಚಿತ ಪ್ರಯಾಣದ ಎಫೆಕ್ಟ್ ಇದೀಗ ರೈಲ್ವೆ ಇಲಾಖೆಗೂ ಹೊಡೆತ ಬಿದ್ದಿದೆ. ಶಕ್ತಿ ಯೋಜನೆ ಆರಂಭವಾಗಿ ಕೆಲವು ದಿನಗಳ ಕಳೆದಿದ್ದು, ಈ ನಡುವೆ ರೈಲ್ವೆ ಪ್ರಯಾಣಿಕರ (Railway Passengers) ಸಂಖ್ಯೆಯಲ್ಲಿ 10ರಿಂದ 20% ಕಡಿಮೆಯಾಗಿದೆ..

ಕಳೆದು ತಿಂಗಳು ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿ ಮಾಡಿದೆ (Shakti scheme launched on June 11, 2023 ). ಒಂದು ತಿಂಗಳಾದರೂ ಮಹಿಳಾ ಮಣಿಗಳ ಉತ್ಸಾಹ ಕಡಿಮೆ ಆಗಿಲ್ಲ. ಬಸ್ ನಲ್ಲಿ ಫುಲ್ ಮಹಿಳಾ ಮಣಿಗಳದ್ದೇ ದರ್ಬಾರು. ತಂಡೋಪ ತಂಡವಾಗಿ ದೇವರ ದರ್ಶನಕ್ಕೆ ಹೊರಟಿದ್ದಾರೆ. ಅಷ್ಟರ ಮಟ್ಟಿಗೆ ಉಚಿತ ಪ್ರಯಾಣದ ಲಾಭ ಪಡೆಯುತ್ತಿದ್ದಾರೆ. ಆದ್ರೆ ಇದರ ಸೈಡ್ ಎಫೆಕ್ಟ್ ಕೂಡಾ ಜಾಸ್ತಿಯಾಗಿದೆ. ಎಸ್! ಶಕ್ತಿ ಯೋಜನೆಯಿಂದ ನೈಋತ್ಯ ರೈಲ್ವೆ ವಲಯದಲ್ಲಿ ( Hubballi) ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯ ಅಂದಾಜಿನ ಪ್ರಕಾರ 10 % ಪ್ರಯಾಣಿಕರ ಸಂಖ್ಯೆ ಕುಸಿದಿದ್ದು, ರೈಲ್ವೆ ಇಲಾಖೆಗೆ ಹೊಡೆತ ಬಿದ್ದಂತಾಗಿದೆ.

ಮಹಿಳೆಯರಿಗೆ ಸರ್ಕಾರ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿರುವ ಬೆನ್ನಲ್ಲೇ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಬಹುತೇಕ ಕಡಿಮೆಯಾಗಿದ್ದು, ಮಹಿಳೆಯರು ರೈಲ್ವೆ ಬಿಟ್ಟು ಬಸ್ಸಿನಲ್ಲಿ ಪ್ರಯಾಣ ಮಾಡಲು ಮುಂದಾಗಿದ್ದಾರೆ. ಖಾಸಗಿ ಹಾಗೂ ಆಟೋ ಸೇವೆಗೆ ಆರ್ಥಿಕ ಸಂಕಷ್ಟ ಎದುರಾಗಿರುವ ಬೆನ್ನಲ್ಲೇ ಈಗ ರೈಲ್ವೆ ಇಲಾಖೆಯಲ್ಲಿಯೂ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ರೈಲ್ವೆ ಅಧಿಕಾರಿಗಳು 10 ದಿನದ ಸರ್ವೆ ಮಾಡಿಸಿದ್ದು ಇದರಲ್ಲಿ ಶೇಕಡಾ 10 ರಿಂದ 20 ರಷ್ಟು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ ಎಂದು ಅನೀಶ್ ಹೆಗಡೆ, ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನಿಡಿದ್ದಾರೆ (South Western Railway).

ಇನ್ನು ನೈಋತ್ಯ ರೈಲ್ವೆ ಇಲಾಖೆಯಲ್ಲಿ ಕೋವಿಡ್ ನಂತರದಲ್ಲಿ ಇಂತಹದೊಂದು ಆರ್ಥಿಕ ಸಮಸ್ಯೆ ಎದುರಾಗುವ ಭೀತಿ ಸ್ಪಷ್ಟವಾಗಿ ಗೋಚರಿಸುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಈಗಾಗಲೇ 10 ದಿನಗಳ ಅವಧಿಯಲ್ಲಿ ಲೆಕ್ಕಾಚಾರ ಮಾಡಲಾಗಿದ್ದು, 10 % ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಮೂರು ತಿಂಗಳ ಅಂಕಿಅಂಶಗಳ ಪ್ರಕಾರ ಎಷ್ಟರಮಟ್ಟಿಗೆ ಆರ್ಥಿಕ ಹೊರೆಯಾಗಲಿದೆ ಎಂಬುವುದನ್ನು ನೈಋತ್ಯ ರೈಲ್ವೆ ಇಲಾಖೆ ಶೀಘ್ರವೇ ಬಿಡುಗಡೆ ಮಾಡಲಿದೆ.

ಶಕ್ತಿ ಯೋಜನೆಯಿಂದ ಖಾಸಗಿ ವಾಹನ‌ ಮಾಲೀಕರು ಅಕ್ಷರಶಃ ಕಂಗಾಲಾಗಿದ್ದಾರೆ. ಅದರಲ್ಲೂ ಆಟೋ ಚಾಲಕರು ಅಟೋ ಮಾರೋದಕ್ಕೂ ಮುಂದಾಗಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿಯಾದ ಬಳಿಕ‌ ಆಟೋ ಡ್ರೈವರ್ ಗಳಿಗೆ ಕೆಲಸ ಇಲ್ಲವಾಗಿದೆ. ಇದೀಗ ಅದೇ ರೀತಿಯ ಬಿಸಿ ರೈಲ್ವೆ ಇಲಾಖೆಗೆ ತಟ್ಟಿದೆ. ರೈಲ್ವೆ ಇಲಾಖೆ 10 ದಿನಗಳ ಪ್ರಾಯೋಗಿಕ ಪ್ರಯಾಣಿಕರ ಸರ್ವೆ ಮಾಡಿಸಿದ್ದು ಅದರಲ್ಲಿ ಶೇಕಡಾ 10 ರಷ್ಟು ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಇದಕ್ಕೆ ಬಹುತೇಕ ಶಕ್ತಿ ಯೋಜನೆಯೆ ಕಾರಣ ಎನ್ನಲಾಗಿದೆ.

ಆದ್ರೆ ಮೂರು ತಿಂಗಳ ಬಳಿಕ ಸರಿಯಾದ ಅಂಕಿ ಅಂಶ ಸಿಗಲಿದೆ ಅನ್ನೋದು ರೈಲ್ವೆ ಅಧಿಕಾರಿಗಳ ಮಾತು. ಆದ್ರೆ ಇತ್ತ ಸರ್ಕಾರಿ ಬಸ್ ನಲ್ಲಿ ಯೋಜನೆ ಜಾರಿಯಾದ ಬಳಿಕ ವಾಯವ್ಯ ಕರ್ನಾಟಕ ಸಾರಿಗೆ ವ್ಯಾಪ್ತಿಯಲ್ಲಿ ಹೆಚ್ಚು ಕಡಿಮೆ ಐದು ಕೋಟಿ ಜನ ಮಹಿಳಾ ಮಣಿಗಳು ಪ್ರಯಾಣ ಮಾಡಿದ್ದಾರೆ ಎಂದು ಭರತ್, ತಾಂತ್ರಿಕ ನಿರ್ದೇಶಕರು, ವಾಯವ್ಯ ಸಾರಿಗೆ, ಹುಬ್ಬಳ್ಳಿ ತಿಳಿಸಿದ್ದಾರೆ. ಒಟ್ಟಿನಲ್ಲಿ ರೈಲ್ವೆ ಇಲಾಖೆಯಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗುತ್ತಿರುವುದು ನಿಜಕ್ಕೂ ರೈಲ್ವೆ ವ್ಯವಸ್ಥೆಗೆ ಸಂಕಷ್ಟ ತಂದೊಡ್ಡುವ ಭೀತಿ ಎದುರಾಗಲಿದೆ.

ಹುಬ್ಬಳ್ಳಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್