ಕರ್ತವ್ಯ ನಿರತ KSRTC ಕಂಡಕ್ಟರ್​​ ಹೃದಯಾಘಾತದಿಂದ ಸಾವು

ಕರ್ತ್ಯವ್ಯದಲ್ಲಿ ಇರುವಾಗಲೇ ಹುಬ್ಬಳ್ಳಿಯ ನಗರ ಸಾರಿಗೆ ಬಸ್ ಕಂಡಕ್ಟರ್ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಕರ್ತವ್ಯ ನಿರತ KSRTC ಕಂಡಕ್ಟರ್​​ ಹೃದಯಾಘಾತದಿಂದ ಸಾವು
ಮೃತ ಕಂಡಕ್ಟರ್​
Follow us
TV9 Web
| Updated By: ವಿವೇಕ ಬಿರಾದಾರ

Updated on:Nov 01, 2022 | 6:46 PM

ಧಾರವಾಡ: ಕರ್ತ್ಯವ್ಯದಲ್ಲಿ ಇರುವಾಗಲೇ ಹುಬ್ಬಳ್ಳಿಯ (Hubli) ನಗರ ಸಾರಿಗೆ ಬಸ್ ಕಂಡಕ್ಟರ್ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕೊಪ್ಪಳ (Koppal) ಜಿಲ್ಲೆಯ ನಿವಾಸಿ ಬಸ್ ಕಂಡಕ್ಟರ್ ಮಹೇಶ್ವರ ಹೂಗಾರ್ ಮೃತ ವ್ಯಕ್ತಿ. ನಗರ ಸಾರಿಗೆ ಬಸ್ ​ಹುಬ್ಬಳ್ಳಿಯ ಸಿಬಿಟಿ ಇಂದ ಗಾಮನಗಟ್ಟಿಗೆ ​ಹೊರಟಿತ್ತು. ಈ ವೇಳೆ ಬಸ್​​ಗೆ ಟಿಕೆಟ್ ಚೆಕಿಂಗ್ ಮಾಡಲು ಇನ್ಸಪೆಕ್ಟರ್ ಮಂಗಳ ಬಸ್​ ಹತ್ತಿದ್ದಾರೆ. ಆಗ ಬಸ್ ಕಂಡಕ್ಟರ್ ಮಹೇಶ್ವರ ಹೂಗಾರ್ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಕಂಡಕ್ಟರ್​ಗೆ ಹೃದಯಾಘಾತವಾದ ತಕ್ಷಣ ಚೆಕಿಂಗ್ ಇನ್ಸಪೆಕ್ಟರ್ ಮಂಗಳ ಬಸ್ ಬಿಟ್ಟು ಓಡಿ ಹೋಗಿದ್ದಾರೆ. ಹೀಗಾಗಿ ಚೆಕಿಂಗ್ ಇನ್ಸಪೆಕ್ಟರ್ ಮಂಗಳ ಬಂದಿರೋ ಕಾರಣದಿಂದ ಹೃದಯಾಘಾತ ಆಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸದ್ಯ ಪ್ರಕರಣವನ್ನು ಮುಚ್ಚಿ ಹಾಕಲು ನಗರ ಸಾರಿಗೆ ಇಲಾಖೆ ಡಿಪೋ ಮ್ಯಾನೇಜರ್ ಯತ್ನಿಸುತ್ತಿರುವ ಆರೋಪ ಕೇಳಿ ಬಂದಿದೆ.

ಸಾವಿನಲ್ಲಿ ಒಂದಾದ ದಂಪತಿ: ಹುಬ್ಬಳ್ಳಿ ತಾಲೂಕಿನ ಶಿರಗುಪ್ಪ ಗ್ರಾಮದಲ್ಲಿ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ಶಿವಪುತ್ರಪ್ಪ ನೆಲಗುಡ್ಡ (90) ಬಸಮ್ಮ (86) ಮೃತ ದಂಪತಿಗಳು. ಶಿವಪುತ್ರಪ್ಪ ನೆಲಗುಡ್ಡ (90) ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ನಿಧನ ಹೊಂದಿದರು.  ಇವರ ಅಂತ್ಯಕ್ರಿಯೆ ಸಮಯದಲ್ಲಿ ಪತ್ನಿ ಬಸಮ್ಮ ಹೃದಯಾಘಾತದಿಂದ ನಿಧನ‌ ಹೊಂದಿದ್ದಾರೆ. ಹೀಗೆ ಸಾವಿನಲ್ಲೂ ಒಂದಾದ ದಂಪತಿಗಳನ್ನು ಅಕ್ಕ ಪಕ್ಕವೇ ಅಂತ್ಯಕ್ರೀಯೆ ಮಾಡಿದರು.

ಲಿಫ್ಟ್​ ಕುಸಿದು ಬಿದ್ದು ಕಾರ್ಮಿಕ ಸಾವು

ಕೋಲಾರ:  ಲಿಫ್ಟ್​ ಕುಸಿದು ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಕೋಲಾರ ನಗರದ ಹೊರವಲಯದಲ್ಲಿ ನಡೆದಿದೆ. ನಾರಾಯಣಸ್ವಾಮಿ(61)  ಮೃತ ಕಾರ್ಮಿಕ. ನಿರ್ಮಾಣ ಹಂತದಲ್ಲಿದ್ದ, ರಾಯಲ್ ಎನ್​ಫೀಲ್ಡ್​​ ಶೋ  ರೂಂ ಕಟ್ಟಡದಲ್ಲಿನ ಲಿಫ್ಟ್​ ಕುಸಿದು ಕಾರ್ಮಿಕ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಕಾರ್ಮಿಕರಾದ ಸುಮಿತ್ರಮ್ಮ, ರಂಗಪ್ಪ, ಅಮರಾವತಿ, ಆಂಜಿನಪ್ಪಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳುಗಳನ್ನು ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 5:43 pm, Tue, 1 November 22

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ