rachoteshwar mahaswami: ಇವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ವಗ್ರಾಮ ಕಮಡೊಳ್ಳಿಯವರು. 2019ರಲ್ಲಿ ಲೋಚನೇಶ್ವರ ಮಠಕ್ಕೆ ರಾಚೋಟೇಶ್ವರ ಸ್ವಾಮೀಜಿಗಳ ಪೀಠಾರೋಹಣ ಆಗಿತ್ತು. ಲೋಚನೇಶ್ವರ ಮಠದ ಭೂಮಿಯನ್ನು ಶಿಕ್ಷಣ ಸಂಸ್ಥೆಗಳಿಗೆ ಭೂದಾನ ಮಾಡಿ ಶಿಕ್ಷಣ ಪ್ರೇಮ ತೋರಿದ್ದ ಸ್ವಾಮೀಜಿ ಇವರಾಗಿದ್ದರು.
ಧಾರವಾಡ: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ಶ್ರೀ ಮ.ನಿ.ಪ್ರ. ರಾಚೋಟೇಶ್ವರ ಮಹಾಸ್ವಾಮಿ(103) ಇಂದು ಬೆಳಗ್ಗೆ ಲಿಂಗೈಕ್ಯರಾದರು. ಇವರು ಕಮಡೊಳ್ಳಿಯ ಲೋಚನೇಶ್ವರ ಮಠದ 5ನೇ ಪೀಠಾಧಿಪತಿ. 2 ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿ ಇಂದು ಬೆಳಗ್ಗೆ ಮಠದಲ್ಲಿ ಕೊನೆಯುಸಿರೆಳೆದರು. ಇದರಿಂದ ಭಕ್ತ ಸಾಗರ ಶೋಕ ಸಾಗರದಲ್ಲಿ ಮುಳುಗಿದೆ. ಇವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ವಗ್ರಾಮ ಕಮಡೊಳ್ಳಿಯವರು. 2019ರಲ್ಲಿ ಲೋಚನೇಶ್ವರ ಮಠಕ್ಕೆ ರಾಚೋಟೇಶ್ವರ ಸ್ವಾಮೀಜಿಗಳ ಪೀಠಾರೋಹಣ ಆಗಿತ್ತು. ಲೋಚನೇಶ್ವರ ಮಠದ ಭೂಮಿಯನ್ನು ಶಿಕ್ಷಣ ಸಂಸ್ಥೆಗಳಿಗೆ ಭೂದಾನ ಮಾಡಿ ಶಿಕ್ಷಣ ಪ್ರೇಮ ತೋರಿದ್ದ ಸ್ವಾಮೀಜಿ ಇವರಾಗಿದ್ದರು.
ರಾಚೋಟೇಶ್ವರ ಮಹಾಸ್ವಾಮಿ ವಿಧಿವಶಕ್ಕೆ ಸಿಎಂ ಬೊಮ್ಮಾಯಿ ಫೇಸ್ ಬುಕ್ನಲ್ಲಿ ಸಂತಾಪ ಸೂಚಿಸಿದ್ದಾರೆ:
ನನ್ನ ಹುಟ್ಟೂರು ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ಶ್ರೀ ಗುರು ಲೋಚನೆಶ್ವರ ವಿರಕ್ತಮಠದ ಶ್ರೀ ಮ. ನಿ. ಪ್ರ. ರಾಚೋಟೇಶ್ವರ ಮಹಾ ಸ್ವಾಮಿಗಳು ಇಂದು ಬೆಳಿಗ್ಗೆ ಲಿಂಗೈಕ್ಕೆರಾಗಿದ್ದು ತುಂಬಾ ದುಃಖದ ವಿಷಯ, ಮಠದ ಸಕಲ ಭಕ್ತಾದಿಗಳಿಗೆ ಪೂಜ್ಯರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಶ್ರೀ ಗುರು ಲೋಚನೇಶ್ವರು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.